More

    ಬೆಂಗಳೂರಿನಲ್ಲಿ ಮೊದಲ ಬಾರಿಗೆ ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್‌ಷಿಪ್ :ಜಪಾನ್‌ನ ಸುಂಟೋರಿ ಸನ್‌ಬರ್ಡ್ಸ್ ಶುಭಾರಂಭ

    ಬೆಂಗಳೂರು: ಜಪಾನ್‌ನ ಸುಂಟೋರಿ ಸನ್‌ಬರ್ಡ್ಸ್ ಪುರುಷರ ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಕಂಡಿದೆ. ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ಆರಂಭಗೊಂಡ ಟೂರ್ನಿಯ ಬಿ ಗುಂಪಿನ ಮೊದಲ ಪಂದ್ಯದಲ್ಲಿ ಟರ್ಕಿಯ ಟರ್ಕಿಯ ಹಾಲ್ಕ್‌ಬ್ಯಾಂಕ್ ಸ್ಪೊರ್ ಕುಲುಬು ತಂಡವನ್ನು 25-23, 25-23, 25-16 ನೇರ ಸೆಟ್‌ಗಳಿಂದ ಮಣಿಸಿತು. ಇದರೊಂದಿಗೆ ಸನ್ ಬರ್ಡ್ಸ್ ತಂಡ ಮೂರು ಸಂಪಾದಿಸಿದೆ.
    ಇದೇ ಮೊದಲ ಬಾರಿಗೆ ಭಾರತದಲ್ಲಿ ಅಂತಾರಾಷ್ಟ್ರೀಯ ವಾಲಿಬಾಲ್ ಟೂರ್ನಿ ನಡೆಯುತ್ತಿದ್ದು, ವಿಶ್ವದ ಅತ್ಯುತ್ತಮ ಆಟಗಾರರು ಐದು ದಿನಗಳ ಕಾಲ ಕಣಕ್ಕಿಳಿಯಲಿದ್ದಾರೆ.

    ಇಂದಿನ ಪಂದ್ಯಗಳು: ಮೊದಲ ಪಂದ್ಯ ಕ್ರುಜೈರೊ ವೊಲಿ-ಸುಂಟೋರಿ ಸನ್‌ಬರ್ಡ್ಸ್. ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸರ್ ಸಿಕೊಮಾ ಪಿಯುರ್ಗಿಯಾ ಮಿನಾಸ್ ಕ್ಲಬ್-ಇಟಾಂಬೆ ಮಿನಾಸ್ ಸವಾಲು ಎದುರಿಸಲಿದೆ.
    ಆರು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ನಾಕೌಟ್ ಹಂತವನ್ನು ತಲುಪಲು ಪ್ರತಿ ಪಂದ್ಯವನ್ನು ಗೆಲ್ಲಲೇಬೇಕು. ಸನ್‌ಬರ್ಡ್ಸ್ ಬುಧವಾರ ಮೂರು ಅಂಕಗಳನ್ನು ಗಳಿಸಿ, ಬಿ ಗುಂಪಿನಿಂದ ಸೆಮಿಫೈನಲ್ ಸ್ಥಾನಗಳಲ್ಲಿ ಒಂದಕ್ಕೆ ಪ್ರಮುಖ ಸ್ಥಾನಿಯಾಗಿ ಹೊರಹೊಮ್ಮಿದೆ. ಪಂದ್ಯಾವಳಿಯ ಸ್ವರೂಪದ ಪ್ರಕಾರ, ವಿಜೇತ ತಂಡವು ಒಂದು ಅಥವಾ ಯಾವುದೇ ಸೆಟ್‌ಗಳನ್ನು ಕಳೆದುಕೊಳ್ಳದಿದ್ದರೆ ಮಾತ್ರ ಮೂರು ಅಂಕಗಳನ್ನು ಪಡೆಯುತ್ತದೆ.

    ಪುರುಷರ ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್‌ಷಿಪ್ 2023 ಭಾರತದಲ್ಲಿ ಸೋನಿ ಸ್ಪೊರ್ಟ್ಸ್ ನೆಟ್‌ವರ್ಕ್‌ನಲ್ಲಿ ಸೋನಿ ಟೆನ್ 1 ಮತ್ತು ಸೋನಿ ಟೆನ್ 3 ಚಾನೆಲ್‌ಗಳಲ್ಲಿ ನೇರ ಪ್ರಸಾರವಾಗಲಿದೆ. ಭಾರತದ ಅಭಿಮಾನಿಗಳು ಫ್ಯಾನ್‌ಕೋಡ್‌ನಲ್ಲಿ ಆನ್‌ಲೈನ್‌ನಲ್ಲಿ ನೇರವಾಗಿ ಟೂರ್ನಿಯನ್ನು ವಿಕ್ಷೀಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts