More

    ಅಧಿಕಾರಿಗಳ ವಿರುದ್ಧ ತಿರುಗಿಬಿದ್ದ ಸದಸ್ಯರು

    ಕಿರುವಾರ ಎಸ್. ಸುದರ್ಶನ್ ಕೋಲಾರ
    ನಗರಸಭೆ ಅಧಿಕಾರಿಗಳಿಗೆ ಹೇಳೋರು ಕೇಳೋರೂ ಯಾರೂ ಇಲ್ಲ.  ಸಾರ್ವಜನಿಕರ ಸಮಸ್ಯೆಗಳು ಎಂದರೆ ಕಾಲ ಕಸಕ್ಕಿಂತ ಕಡೆ. ಹೀಗಾಗಿ ಅಧಿಕಾರಿಗಳು, ಸಿಬ್ಬಂದಿ ಕಾರ್ಯವೈಖರಿ ವಿರುದ್ಧ ಸದಸ್ಯರು, ಸಾರ್ವಜನಿಕರು ತಿರುಗಿ ಬಿದ್ದಿದ್ದಾರೆ. ಸದಸ್ಯರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿ, ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬೇಕು, ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿ, ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಡಿ. 12ರಂದು ನಗರಸಭೆ ಕಚೇರಿ ಬಳಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಸರ್ಕಾರದ ಇಲಾಖೆಗಳ ಪೈಕಿ ಕಂದಾಯ ಇಲಾಖೆ ಬಿಟ್ಟರೆ, ಅತಿ ಹೆಚ್ಚು ಜನ ಭೇಟಿ ನೀಡುವುದು ನಗರಸಭೆಗೆೆ. ಆದರೆ ಯಾವುದೇ ಸಮಸ್ಯೆಗೆ ಪರಿಹಾರಕ್ಕೆ, ಸೌಲಭ್ಯಕ್ಕೆ ಅರ್ಜಿ ಹಾಕಿದರೆ ವಿಲೇವಾರಿ ಆಗಲು ಸುಮಾರು ತಿಂಗಳು, ವರ್ಷ ಕಾಯಬೇಕು. ಕಂದಾಯ, ಇಂಜಿನಿಯರಿಂಗ್, ಆರೋಗ್ಯ ವಿಭಾಗದ ಅಧಿಕಾರಿಗಳು ಬೆಳಗ್ಗೆ ಸಮಯದಲ್ಲಿ ಕಚೇರಿಯಲ್ಲಿ ಇರುವುದಿಲ್ಲ, ದೂರವಾಣಿ ಕರೆ ಮಾಡಿದರೆ ನಾವು ಫೀಲ್ಡ್ ವರ್ಕ್‌ಗೆ ಹೋಗಿದ್ದೇವೆ. ಮಧ್ಯಾಹ್ನದ ಮೇಲೆ ಬನ್ನಿ ಎಂದು ಹೇಳುತ್ತಾರೆ. ಬಿಡುವು ಮಾಡಿಕೊಂಡು ಮಧ್ಯಾಹ್ನ ಕಚೇರಿಗೆ ಹೋಗಿ ಗಂಟೆಗಟ್ಟಲೇ ಕಾದರೂ ಬರುವುದಿಲ್ಲ.
    ಜನನ-ಮರಣ ಪ್ರಮಾಣ ಪತ್ರ, ನೀರು, ಚರಂಡಿ, ಬೀದಿ ದೀಪ, ರಸ್ತೆ, ಯುಜಿಡಿ, ಕಸದ ಸಮಸ್ಯೆಗಳನ್ನು ಹೊತ್ತು ಸಾರ್ವಜನಿಕರು ಕಚೇರಿಗೆ ಆಗಮಿಸಿದರೆ, ಸಮಸ್ಯೆ ಬಗ್ಗೆ ಹೇಳಿಕೊಳ್ಳಲು ಯಾರೊಬ್ಬರು ಸಿಗುವುದಿಲ್ಲ. ನಾಗರಿಕರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ಹೋಗಬೇಕಾಗುತ್ತದೆ.

    ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವೈಖರಿ ಸದಸ್ಯರಿಗೂ ಬೇಸರವನ್ನುಂಟುಮಾಡಿದೆ. ಹೀಗಾಗಿ ಸಾರ್ವಜನಿಕರೊಂದಿಗೆ ಸದಸ್ಯರೂ ಸೇರಿಕೊಂಡು ನಗರಸಭೆಯ ವಿರುದ್ಧ ಆಕ್ರೋಶವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳಿಗೂ ದೂರು ನೀಡಿದ್ದಾರೆ.
    ಜನತೆಯ ಕೆಲಸ ಮಾಡಲು ಅಧಿಕಾರಿಗಳು ಸಿಬ್ಬಂದಿ ಕೊರತೆಯ ಸಬೂಬು ಹೇಳಿ ತಪ್ಪಿಸಿಕೊಳ್ಳಲು ನೋಡುತ್ತಾರೆ. ಇಲ್ಲಿ ಸಿಬ್ಬಂದಿ ಕೊರತೆಯಿರುವುದು ಇಂದು, ನಿನ್ನೆಯದಲ್ಲ, ಆದರೆ ಇಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಅಧ್ಯಕ್ಷರು, ಆಯುಕ್ತರು ಸರ್ಕಾರದ ಗಮನಕ್ಕೆ ತಂದು ಬಾಕಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
    ಬೆಳಗ್ಗೆ ಫೀಲ್ಡ್ ವರ್ಕ್ ಆದರೆ ಮಧ್ಯಾಹ್ನ ಕಚೇರಿಗೆ ಬರುವುದು 3 ಗಂಟೆ ನಂತರ. ಕೇವಲ 2 ತಾಸು ಕುರ್ಚಿಯಲ್ಲಿ ಕುಳಿತು ಕೆಲಸ ಮಾಡಿದರೆ ಹೆಚ್ಚು. 4 ಗಂಟೆಯಾಗುತ್ತಿದ್ದಂತೆ ಅವಸದಲ್ಲಿ ಮನೆಗೆ ಹೊರಟು ಹೋಗುತ್ತಾರೆ.

    ಬೇಡಿಕೆಗೆ ಸ್ಪಂದಿಸಿದರೆ ಕೆಲಸ
    ಖಾತೆ ಮಾಡಿಸುವುದು, ಖಾತೆ ಬದಲಾವಣೆ, ಆಸ್ತಿ ದಾಖಲೆ, ತಿದ್ದುಪಡಿಸಿ ಹೀಗಿ ವಿವಿಧ ಕೆಲಸಗಳ ಮೇಲೆ ಕಂದಾಯ ವಿಭಾಗಕ್ಕೆ ಅರ್ಜಿ ಸಲ್ಲಿಸಿದರೆ ವರ್ಷಾನುಗಟ್ಟಲೇ ಅಲೆದಾಡಬೇಕು. ಅಲೆದಾಡಿ ಅಲೆದಾಡಿ ಚಪ್ಪಲಿ ಸವೆಯುತ್ತವೆಯೇ ಹೊರತು ಕೆಲಸ ಮಾತ್ರ ಸಕಾಲಕ್ಕೆ ಆಗುವುದಿಲ್ಲ. ಸಿಬ್ಬಂದಿ ಬೇಡಿಕೆಗೆ ಸ್ಪಂದಿಸಿದರೆ ಅನಧಿಕೃತ ಕೆಲಸಗಳು ಸಹ ಅಧಿಕೃತವಾಗುತ್ತವೆ ಎಂಬುದು ಸಾರ್ವಜನಿರ ಆರೋಪವಾಗಿದೆ.

    ಕೆಲಸ ಆಗಲಿಲ್ಲ
    2017ರಲ್ಲಿ 20 ಗುಂಟೆ ಜಾಗವನ್ನು ಭೂಪರಿವರ್ತನೆ ಮಾಡಿದ್ದು, ಸರ್ಕಾರದ ಆದೇಶದಂತೆ 13 ಲಕ್ಷ ರೂಪಾಯಿ ಶುಲ್ಕ ಪಾವತಿ ಮಾಡಿ ಬಡಾವಣೆ ಅಭಿವೃದ್ಧಿಪಡಿಸಲಾಗಿದೆ. ಇದಕ್ಕೆ ಡಿಸಿ, ಕೆಯುಡಿಎ ಅನುಮೋದನೆ ದೊರೆತಿದೆ. ಖಾತೆಗಾಗಿ ನಗರಸಭೆಗೆ ಅರ್ಜಿ ಸಲ್ಲಿಸಲಾಗಿದ್ದು, ಹಿಂದಿನ ಪೌರಾಯುಕ್ತರು ಈ ಕೆಲಸ ಮಾಡಲು ಬರುವುದಿಲ್ಲ ಎಂದು ಸರ್ಕಾರಕ್ಕೆ ಬರೆದರು. ಸಿಬ್ಬಂದಿಯೊಬ್ಬರು ಕೆಲಸ ಮಾಡಿಸಿಕೊಳ್ಳಬೇಕಾದ ಮಾರ್ಗವನ್ನು ವಿವರಿಸಿದರು. ಕರೊನಾ ಕಾಲದಿಂದಲ್ಲೂ ನನಗೆ ನ್ಯಾಯ ಸಿಕ್ಕಿಲ್ಲ ಎಂದು ಅರ್ಜಿದಾರ ಶ್ರೀನಾಥ್ ಆರೋಪಿಸಿದರು.

    ಸದಸ್ಯರಿಂದ ಡಿಸಿಗೆ ದೂರು
    ನಗರಸಭೆಯಲ್ಲಿ ಜನನ-ಮರಣ ಪ್ರವಾಣ ಪತ್ರ ಪಡೆಯಲು ಬರುವ ಜನಸಾವಾನ್ಯರನ್ನು ದಳ್ಳಾಳಿಗಳು ಮುಖ್ಯದ್ವಾರದಲ್ಲೇ ಅಡ್ಡಕಟ್ಟಿ ಕಾನೂನು ಬಾಹಿರವಾಗಿ ಇಷ್ಟಬಂದಂತೆ ಹಣವನ್ನು ವಸೂಲಿ ವಾಡುತ್ತಿರುತ್ತಾರೆ. ನಗರಸಭೆಯಲ್ಲಿನ ಅಕ್ರಮ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
    ಕಂದಾಯ ವಿಭಾಗದಲ್ಲಿ ಜನಸಾವಾನ್ಯರು ಇ-ಸ್ವತ್ತು ಸಂಬಂಧಿಸಿದಂತೆ ನೇರವಾಗಿ ಅರ್ಜಿ ಸಲ್ಲಿಸಿದರೆ, ಕಂದಾಯ ವಿಧಾಗದ ಅಧಿಕಾರಿಗಳು ವಿನಾಕಾರಣ ವಿಳಂಬ ವಾಡುವುದು, ಅರ್ಜಿಗಳನ್ನು ತಿರಸ್ಕರಿಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಾರೆ. ನಗರಸಭೆಯ ಕಂದಾಯ ಶಾಖೆಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು, ದಲ್ಲಾಳಿಗಳಿಂದ ಲಂಚ ಪಡೆದು ಅವರ ಮುಖಾಂತರವಾಗಿ ಬರುವ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ವಾಡುತ್ತಿದ್ದಾರೆ. ನಗರಸಭೆ ಕಚೇರಿಗೆ ಭೇಟಿ ದೂರುಗಳನ್ನು ಪರಿಶೀಲನೆ ವಾಡಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ದಲ್ಲಾಳಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಡಿ.12 ರಂದು ಬೆಳಗ್ಗೆ 11 ನಗರಸಭೆ ಕಚೇರಿಯ ಮುಂಭಾಗದಲ್ಲಿ ಧರಣಿಯನ್ನು ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

    ಅಧಿಕಾರಿಗಳ ವಿರುದ್ಧ ತಿರುಗಿಬಿದ್ದ ಸದಸ್ಯರು

    ನಗರಸಭೆಯಲ್ಲಿ ಕಾನೂನುಬಾಹಿರವಾಗಿ ಕೆಲಸ ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದ್ದು, ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸದಿದ್ದರೆ ಹೋರಾಟ ನಡೆಸಲಾಗುವುದು.
    ಪ್ರವೀಣ್ ಗೌಡ, ನಗರಸಭೆ ಸದಸ್ಯ.

    ಅಧಿಕಾರಿಗಳ ವಿರುದ್ಧ ತಿರುಗಿಬಿದ್ದ ಸದಸ್ಯರು

    ಏನೇ ಸಮಸ್ಯೆಯಿದ್ದರು ಸದಸ್ಯರು, ಸಾರ್ವಜನಿಕರು ನನ್ನ ಗಮನಕ್ಕೆ ತಂದರೆ ಕೂಡಲೇ ಬಗೆಹರಿಸಲಾಗುವುದು. ಅಧಿಕಾರಿ, ಸಿಬ್ಬಂದಿ ತಂಡ ರಚನೆ ಮಾಡಿ ತೆರಿಗೆ ವಸೂಲಿಗೆ ಕಳುಹಿಸಲಾಗಿದೆ. ಮಧ್ಯಾಹ್ನ ನಂತರ ಸಾರ್ವಜನಿಕರ ಕೆಲಸ ಮಾಡಲು ಪ್ರತಿಯೊಬ್ಬರಿಗೂ ಪತ್ರ ಹಾಕಲಾಗುವುದು.
    ಶಿವಾನಂದ, ಪೌರಾಯುಕ್ತ.
    ಅಧಿಕಾರಿಗಳ ವಿರುದ್ಧ ತಿರುಗಿಬಿದ್ದ ಸದಸ್ಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts