More

    ಕಂದಾಯ ಗ್ರಾಮ ಪರಿವರ್ತನೆಯಿಂದ ಅನುಕೂಲ

    ಹನುಮಸಾಗರ: ನರಸಾಪುರ ಕಂದಾಯ ಗ್ರಾಮವಾಗಿ ಪರಿವರ್ತನೆಗೊಂಡಿರುವುದರಿಂದ ಗ್ರಾಮಸ್ಥರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ವಿಧಾನಪರಿಷತ್ ಸದಸ್ಯ ಶರಣೇಗೌಡ ಪಾಟೀಲ್ ಬಯ್ಯಪೂರ ಹೇಳಿದರು.

    ಸಮೀಪದ ನರಸಾಪೂರ ಗ್ರಾಮದಲ್ಲಿ ಸೋಮವಾರ ಕಂದಾಯ ಇಲಾಖೆಯಿಂದ ಹೊಸದಾಗಿ ಆದೇಶವಾದ ಕಂದಾಯ ಗ್ರಾಮಗಳ ನಿವಾಸಿಗಳಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಕಂದಾಯ ಗ್ರಾಮ ಅಲ್ಲದಿದ್ದರಿಂದ ಈ ಪ್ರದೇಶದಲ್ಲಿ ಹಲವು ಮೂಲಭೂತ ಸೌಲಭ್ಯಗಳ ಕೊರತೆಯಿತ್ತು. ಈಗ ಕಂದಾಯ ಗ್ರಾಮಗಳಾಗಿ ಪರಿವರ್ತನೆಗೊಂಡಿದ್ದರಿಂದ ಸರ್ಕಾರದಿಂದ ರೂಪಿಸುವ ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲ ಸೌಲಭ್ಯಗಳು ಗ್ರಾಮಗಳಿಗೆ ದೊರೆಯುತ್ತವೆ. ಇದರಲ್ಲಿ ತಾಂಡಾ, ಗೋಮಾಳ, ಸಾಮಾಜಿಕ ಅರಣ್ಯ ಪ್ರದೇಶ ಇಂತಹ ಸ್ಥಳಗಳಲ್ಲಿ ನೆಲೆಸಿರುವಂಥವರಿಗೆ ಸರ್ಕಾರದಿಂದ ಹಕ್ಕುಪತ್ರ ನೀಡಲಾಗುತ್ತದೆ ಎಂದರು.

    ತಹಸೀಲ್ದಾರ್ ಕೆ.ರಾಘವೇಂದ್ರರಾವ್ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಕಂದಾಯ ಗ್ರಾಮಗಳಲ್ಲಿನ ಅರ್ಹರಿಗೆ ಏಕಕಾಲದಲ್ಲಿ ಹಕ್ಕುಪತ್ರ ನೀಡಲಾಗುತ್ತಿದೆ. ಹನುಮನಾಳ ಹೋಬಳಿಯ ನರಸಾಪುರ ಗ್ರಾಮದ 508 ಫಲಾನುಭವಿಗಳಿಗೆ ಇಂದು ಹಕ್ಕುಪತ್ರ ನೀಡಲಾಗುವುದು. ತಾಲೂಕಿನಲ್ಲಿ ಮೂರು ಗ್ರಾಮಗಳು ಕಂದಾಯ ಗ್ರಾಮಗಳಾಗಿ ಪರಿವರ್ತನೆಗೊಂಡಿವೆ. ಇನ್ನು ಮುಂದೆ ಸರ್ಕಾರದ ಕೆಲ ಸೌಲಭ್ಯಗಳು ಈ ಪ್ರದೇಶದ ಜನರಿಗೆ ದೊರೆಯುತ್ತವೆ ಎಂದರು.

    ಗ್ರಾಪಂ ಅಧ್ಯಕ್ಷ ಕಳಕಪ್ಪ ಕಾಡದ, ತಾಪಂ ಇಒ ಶಿವಪ್ಪ ಸುಬೇದಾರ, ಉಪತಹಸೀಲ್ದಾರ್‌ರಾದ ಆಂಜನೇಯ ಮೊಸರಕಲ್ಲ, ಶರಣಬಸವೇಶ ಕಳ್ಳಿಮಠ, ಕಂದಾಯ ನಿರೀಕ್ಷಕರಾದ ಮಹ್ಮದ್ ರಜಾಕ್, ಶರಣಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts