ಬೆಂಗಳೂರು: ಮೇಘನಾ ರಾಜ್ ಸರ್ಜಾ ಕನ್ನಡಿಗರಿಗೆ ಅನೇಕ ಕಾರಣಗಳಿಂದ ಇಷ್ಟವಾದ ನಟಿ. ಚಿರಂಜೀವಿ ಸರ್ಜಾ ಜತೆ ದಾಂಪತ್ಯ ಆರಂಭಿಸಿದ್ದ ನಟಿಯ ಬಾಳಲ್ಲಿ ನಡೆದ ಅಘಾತ ನೆನಪಿಸಿಕೊಂಡರೆ ಇಂದಿಗೂ ಅಭಿಮಾನಿಗಳ ಕಣ್ಣಲ್ಲಿ ನೀರು ಜಿನುಗುತ್ತದೆ. ಮುದ್ದಾದ ಮಗನ ಮುಖದಲ್ಲೇ ಗಂಡನ ರೂಪ ಕಂಡು ನೋವು ಮರೆಯುತ್ತಿರುವ ಮೇಘನಾ ಇದೀಗ ಮತ್ತೊಮ್ಮೆ ಕ್ಯಾಮರಾ ಮುಂದೆ ಬರಲು ಸಿದ್ಧರಾಗಿದ್ದಾರೆ.
ಅಂದ ಹಾಗೆ ಮೇಘನಾ-ಚಿರು ಅವರ ಮಗ ಜೂನಿಯರ್ ಚಿರುಗೆ ಇಂದಿಗೆ ಒಂಬತ್ತು ತಿಂಗಳು ತುಂಬಿದೆ. ಇದೇ ಶುಭ ದಿನದಂದು ಮೇಘನಾ ತಮ್ಮ ಕೆಲಸಕ್ಕೆ ವಾಪಸಾಗಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಮಗನಿಗೆ ಒಂಬತ್ತು ತಿಂಗಳು ತುಂಬಿತು, ಅದನ್ನು ನಾನು ಕ್ಯಾಮರಾ ಮುಂದೆ ಮತ್ತೆ ನಿಲ್ಲುವ ಮೂಲಕ ಆಚರಿಸುತ್ತಿದ್ದೇನೆ ಎಂದು ಅವರು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಕ್ಯಾಮರಾ ಮುಂದೆ ನಿಂತು ಸ್ಕ್ರಿಪ್ಟ್ ಓದುತ್ತಿರುವ ಫೋಟೋವನ್ನೂ ಹಂಚಿಕೊಂಡಿದ್ದಾರೆ.
ಮೇಘನಾ ಸದ್ಯದಲ್ಲೇ ಸಿನಿಮಾ ಕೆಲಸಕ್ಕೆ ವಾಪಸಾಗುತ್ತಾರೆ ಎನ್ನುವ ಮಾತುಗಳು ಈ ಹಿಂದೆಯೇ ಕೇಳಿಬಂದಿತ್ತು. ಇದೀಗ ನಟಿ ತಾವೇ ಮರಳಿರುವ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸಿದ್ದು, ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.
ಬಣ್ಣದ ಲೋಕಕ್ಕೆ ವಾಪಸು ಬಂದಿರುವ ನಟಿಗೆ ಸಂಯುಕ್ತ ಹೊರನಾಡ್, ಸಿಂಪಲ್ ಸುನಿ, ರಾಗಿಣಿ ಪ್ರಜ್ವಲ್ ಸೇರಿ ಅನೇಕರು ಶುಭ ಹಾರೈಸಿದ್ದಾರೆ. (ಏಜೆನ್ಸೀಸ್)
ಸಿಎಂಗೆ ಗೋ ಮಾಂಸ ಗಿಫ್ಟ್ ಮಾಡುವುದಾಗಿ ಸ್ಟೇಟಸ್ ಹಾಕಿದ್ದ ಮಹಿಳೆ ಅರೆಸ್ಟ್
ರಾಜ್ಯದಲ್ಲಿಂದು 1,653 ಕರೊನಾ ಕೇಸ್ ಪತ್ತೆ; ಈ ಎರಡು ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ