More

    ಶಿವಮೊಗ್ಗದ ಒಂದೇ ಕುಟುಂಬದ ನಾಲ್ವರಲ್ಲಿ ಬ್ರಿಟನ್ ಸೋಂಕು!

    ಶಿವಮೊಗ್ಗ: ರೂಪಾಂತರಿ ಕರೊನಾ ಶಿವಮೊಗ್ಗಕ್ಕೂ ಕಾಲಿಟ್ಟಿದ್ದು, ಜಿಲ್ಲೆಯ ನಾಲ್ವರಲ್ಲಿ ಬ್ರಿಟನ್ ಸೋಂಕು ದೃಢಪಟ್ಟಿದೆ.

    ಕರ್ನಾಟಕ ಸಂಘ ಸಮೀಪದ ಸಾರ್ವಕರ್ ನಗರದ ಒಂದೇ ಕುಟುಂಬದ ನಾಲ್ವರಲ್ಲಿ ಸೋಂಕು ಪತ್ತೆಯಾಗಿದ್ದು, ರೋಗ ಲಕ್ಷಣವಿಲ್ಲದ ನಾಲ್ವರನ್ನು ಮೆಗ್ಗಾನ್ ಆಸ್ಪತ್ರೆಯ ಕರೊನಾ ವಾರ್ಡ್​ನಲ್ಲಿ ಇರಿಸಲಾಗಿದೆ. ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರಿಗೆ ಹೋಮ್ ಕ್ವಾರಂಟೈನ್​ಗೆ ಸೂಚಿಸಿಸಲಾಗಿದೆ.

    ಇದನ್ನೂ ಓದಿ: ಹೋರಾಟನಿರತ ರೈತರತ್ತ ವಾಲಿದ ಕೇಂದ್ರ ಸರ್ಕಾರ! ನಾಲ್ಕರಲ್ಲಿ ಎರಡು ಬೇಡಿಕೆಗೆ ಒಪ್ಪಿಗೆ

    ಇತ್ತೀಚೆಗೆ ಬ್ರಿಟನ್​ನಿಂದ ಬಂದ ಐದು ಮಂದಿಯಲ್ಲಿ ಕರೊನಾ ಸೋಂಕು ದೃಢಪಟ್ಟಿತ್ತು. ಹಾಗಾಗಿ ಸೋಂಕಿನ ವರದಿಯನ್ನು ಪುಣೆ ಲ್ಯಾಬ್​ಗೆ ರವಾನಿಸಲಾಗಿತ್ತು. ಅಲ್ಲಿ ನಾಲ್ವರಿಗೆ ಬ್ರಿಟನ್ ವೈರಸ್ ದೃಢಪಟ್ಟಿದ್ದರಿಂದ ಜಿಲ್ಲೆಯಲ್ಲೂ ಸೋಂಕಿನ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ.

    ಶಿವಮೊಗ್ಗ ತಾಲೂಕಿಗೆ 12, ಸಾಗರ, ತೀರ್ಥಹಳ್ಳಿಗೆ ತಲಾ ನಾಲ್ವರು, ಭದ್ರಾವತಿಗೆ ಮೂವರು ಸೇರಿ ಕಳೆದೊಂದು ವಾರದಿಂದ ಜಿಲ್ಲೆಗೆ 25 ಜನರು ಬ್ರಿಟನ್​ನಿಂದ ಬಂದವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪತ್ತೆ ಮಾಡಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts