More

    30 ಲಕ್ಷ ರೂ. ಸಂಬಳದ ಕೆಲಸ ಬಿಟ್ಟು ಸಮೋಸಾ ಮಾರಾಟ ಮಾಡಿದ ದಂಪತಿ; ವಾರ್ಷಿಕ 45 ಕೋಟಿ ರೂ. ಗಳಿಸ್ತಿದಾರೆ!

    ಬೆಂಗಳೂರು: ಇಂದು ಸ್ಟಾರ್ಟ್ ಅಪ್ ಪ್ರಾರಂಭಿಸುತ್ತಿರೋರ ಸಂಖ್ಯೆ ಹೆಚ್ಚಿದೆ. ಲಕ್ಷಾಂತರ ರೂಪಾಯಿ ವೇತನದ ಉದ್ಯೋಗ ತೊರೆದು ಬೆಂಗಳೂರಿನಲ್ಲಿ ಸಮೋಸ ತಯಾರಿಸಿ ಮಾರಾಟ ಮಾಡುತ್ತಿರುವ ದಂಪತಿ ಈಗ ಪ್ರತಿ ತಿಂಗಳು 30,000 ಸಮೋಸ ಮಾರಾಟ ಮಾಡುತ್ತಿದ್ದಾರೆ. ಸ್ವಂತ ಉದ್ಯಮ ಸ್ಥಾಪಿಸಿ ಇಂದು ಹಿಂದಿಗಿಂತಲೂ ಅಧಿಕ ಆದಾಯ ಗಳಿಸುವ ಮೂಲಕ ಇತರರಿಗೆ ಸ್ಫೂರ್ತಿಯಾಗಿದ್ದಾರೆ.

    ‘ಸಮೋಸ ಸಿಂಗ್’ ಸಂಸ್ಥಾಪಕರಾದ ನಿಧಿ ಸಿಂಗ್ ಹಾಗೂ ಶಿಖರ್ ವೀರ್ ಸಿಂಗ್. ಇಬ್ಬರೂ ಬೆಂಗಳೂರಿನಲ್ಲಿ ಉನ್ನತ ಹುದ್ದೆಯಲ್ಲಿದ್ದು, ಕೈ ತುಂಬಾ ಸಂಪಾದನೆ ಮಾಡುತ್ತಿದ್ದರು. ಲಕ್ಷಾಂತರ ರೂಪಾಯಿ ವೇತನದ ಉದ್ಯೋಗ ತೊರೆದು ಸಮೋಸ ಮಾರುವ ಉದ್ಯಮ ಪ್ರಾರಂಭಿಸಿದರು. ಇಂದು ತಮ್ಮ ಹಿಂದಿನ ಅಧಿಕ ಪ್ಯಾಕೇಜ್ ನ ಉದ್ಯೋಗಕ್ಕಿಂತ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ.

    ಇದನ್ನೂ ಓದಿ:  VIDEO| 3 ಅಡಿಯಿರೋ ಬಾಡಿಬಿಲ್ಡರ್ 4 ಅಡಿ ಎತ್ತರದ ವಧುವನ್ನು ಮದುವೆಯಾದ!

    ನಿಧಿ ಸಿಂಗ್ ಹಾಗೂ ಶಿಖರ್ ವೀರ್ ಸಿಂಗ್ ಹರಿಯಾಣದಲ್ಲಿ ಬಿ.ಟೆಕ್ ಓದುವ ಸಮಯದಲ್ಲಿ ಪರಿಚಿತರಾಗಿ ಆ ಬಳಿಕ ಪರಸ್ಪರ ಪ್ರೀತಿಸಿ ಮದುವೆಯಾದರು. ಇಬ್ಬರೂ ಬಯೋಟೆಕ್ನಾಲಜಿಯಲ್ಲಿ ಬಿ.ಟೆಕ್ ಪದವಿ ಹೊಂದಿದ್ದಾರೆ. 2015ರಲ್ಲಿ ಶಿಖರ್ ಉದ್ಯೋಗ ತ್ಯಜಿಸುವ ಸಮಯದಲ್ಲಿ ಅವರು ಬಯೋಕಾನ್ ನಲ್ಲಿ ಪ್ರಧಾನ ಇಂಜಿನಿಯರ್ ಆಗಿದ್ದರು. ಇನ್ನು ನಿಧಿ ಕಾರ್ಪೋರೇಟ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಉದ್ಯೋಗ ತ್ಯಜಿಸುವ ಸಮಯದಲ್ಲಿ ಅವರ ವಾರ್ಷಿಕ ಪ್ಯಾಕೇಜ್ 30ಲಕ್ಷ ರೂ. 2015ರಲ್ಲಿ ಇವರಿಬ್ಬರೂ ಉದ್ಯೋಗ ತ್ಯಜಿಸಿದ ನಿಧಿ ಹಾಗೂ ಶಿಖರ್ ಕುಟುಂಬದಿಂದ ಸಹಾಯ ಪಡೆಯದೆ ತಮ್ಮ ಉಳಿತಾಯದ ಹಣದಲ್ಲೇ ಉದ್ಯಮ ಪ್ರಾರಂಭಿಸಿದರು.

    ಇದನ್ನೂ ಓದಿ:  ತಾಯಿಯ ಹೊಟ್ಟೆಯಲ್ಲಿದ್ದ ಮಗುವಿನ ಹೃದಯ ಶಸ್ತ್ರಚಿಕಿತ್ಸೆ; ಏಮ್ಸ್‌ ವೈದ್ಯರಿಂದ ಯಶಸ್ವಿ ಚಿಕಿತ್ಸೆ

    ಸಮೋಸಕ್ಕೆ ಬೇಡಿಕೆ ಹೆಚ್ಚಿದಂತೆ ಅದರ ತಯಾರಿಗೆ ದೊಡ್ಡ ಸ್ಥಳದ ಅಗತ್ಯ ಎದುರಾದಾಗ ತಮ್ಮ ಕನಸಿನ ಅಪಾರ್ಟ್ ಮೆಂಟ್ ಅನ್ನು 80ಲಕ್ಷ ರೂ.ಗೆ ಮಾರಾಟ ಮಾಡಿದರು. ಮನೆ ಮಾರಿದ ಹಣದಿಂದ ಫ್ಯಾಕ್ಟರಿಯೊಂದನ್ನು ಬಾಡಿಗೆಗೆ ಪಡೆದರು. ಅವರು ಪ್ರತಿ ತಿಂಗಳು 30,000 ಸಮೋಸ ಮಾರಾಟ ಮಾಡುತ್ತಾರೆ. 45 ಕೋಟಿ ರೂ. ವಹಿವಾಟು ನಡೆಸುತ್ತಿದ್ದಾರೆ. ದಂಪತಿ ತಮ್ಮ ಉದ್ಯಮವನ್ನು ಇನ್ನಷ್ಟು ವಿಸ್ತರಿಸುವ ಬಗ್ಗೆ ಸದ್ಯ ಯೋಜನೆ ರೂಪಿಸುತ್ತಿದ್ದಾರೆ.

    ವಿಶ್ವದ ಅತ್ಯಂತ ಕಲುಷಿತ ನಗರಗಳಲ್ಲಿ ಭಾರತದಲ್ಲೇ ಇವೆ 39 ನಗರಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts