More

    ವಿಶ್ವದ ಅತ್ಯಂತ ಕಲುಷಿತ ನಗರಗಳಲ್ಲಿ ಭಾರತದಲ್ಲೇ ಇವೆ 39 ನಗರಗಳು!

    ನವದೆಹಲಿ: ಭಾರತವು 2022ರಲ್ಲಿ ವಿಶ್ವದ ಎಂಟನೇ ಅತಿ ಹೆಚ್ಚು ಮಾಲಿನ್ಯದ ದೇಶವಾಗಿತ್ತು. ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು. 50 ಕಲುಷಿತ ನಗರಗಳಲ್ಲಿ 39 ನಗರಗಳು ಭಾರತದಲ್ಲೇ ಇವೆ.

    ಸ್ವಿಸ್‌ನ ಐಕ್ಯುಏರ್‌ ಸಂಸ್ಥೆ ಬಿಡುಗಡೆ ಮಾಡಿದ ವಿಶ್ವ ವಾಯು ಗುಣಮಟ್ಟ ವರದಿಯಲ್ಲಿ, ಮಾಲಿನ್ಯ ಮಾಪಕ ಪ್ರಕಾರ 2.5 ಮಟ್ಟ ಕುಸಿದಿದೆ. ಭಾರತದಲ್ಲಿನ ಗಾಳಿಯು ವಿಶ್ವ ಆರೋಗ್ಯ ಸಂಸ್ಥೆಯ ಸುರಕ್ಷಿತ ಮಿತಿಗಿಂತ 10 ಪಟ್ಟು ಹೆಚ್ಚು ಅಪಾಯದಲ್ಲಿದೆ. ಭಾರತವು ವಿಶ್ವದ ಎಂಟನೇ ಅತ್ಯಂತ ಕಲುಷಿತ ದೇಶವಾಗಿದೆ ಎನ್ನಲಾಗಿದೆ.

    ಇದನ್ನೂ ಓದಿ: ತಾಯಿಯ ಹೊಟ್ಟೆಯಲ್ಲಿದ್ದ ಮಗುವಿನ ಹೃದಯ ಶಸ್ತ್ರಚಿಕಿತ್ಸೆ; ಏಮ್ಸ್‌ ವೈದ್ಯರಿಂದ ಯಶಸ್ವಿ ಚಿಕಿತ್ಸೆ

    ಭಾರತದ ಅತ್ಯಂತ ಕಲುಷಿತ ನಗರಗಳಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದ್ದರೆ, ಕೋಲ್ಕತ್ತಾ ಎರಡನೇ ಸ್ಥಾನದಲ್ಲಿದೆ. ಬಹಳ ಮುಖ್ಯ ಅಂಶವೇನೆಂದರೆ ಕಲುಷಿತ ನಗರಗಳ ಪಟ್ಟಿಯಲ್ಲಿ ಚೆನ್ನೈ ಹೆಸರು ಸೇರಿಲ್ಲ, ಅಂದರೆ ಚೆನೈ ಯಲ್ಲಿ ಮಾಲಿನ್ಯ ಪ್ರಮಾಣ ಬಹಳ ಇಳಿಕೆಯಾಗಿದೆ ಎಂದು ಹೇಳಲಾಗಿದೆ. ರಾಜಸ್ಥಾನದ ಭಿವಾಡಿ, ಮುಂಬೈ, ಪುಣೆ ಸೇರಿದಂತೆ ಹಲವು ನಗರಗಳು ಕಲುಷಿತ ನಗರಗಳ ಪಟ್ಟಿಯಲ್ಲಿ ಸೇರಿಕೊಂಡಿವೆ ಎನ್ನಲಾಗಿದೆ.

    ಮೊದಲ ಹತ್ತು ಅತ್ಯಂತ ಕಲುಷಿತ ದೇಶಗಳೆಂದರೆ: ಚಾಡ್, ಇರಾಕ್, ಪಾಕಿಸ್ತಾನ,ಬಹ್ರೇನ್, ಬಾಂಗ್ಲಾದೇಶ, ಬುರ್ಕಿನಾ ಫಾಸೊ,ಕುವೈತ್, ಭಾರತ, ಈಜಿಪ್ಟ್, ತಜಿಕಿಸ್ತಾನ್.

    ಇದನ್ನೂ ಓದಿ: ತಾಯಿ ಕಣ್ಮುಂದೆ ಕಟ್ಟಡದ ಮೇಲಿನಿಂದ ಬಿದ್ದು ಪ್ರಾಣ ಕಳೆದುಕೊಂಡ ಮಗು

    ದೆಹಲಿ, ತಾಂತ್ರಿಕವಾಗಿ, ಅತ್ಯಂತ ಕಲುಷಿತ ರಾಜಧಾನಿಯಾಗಿದೆ. ದೆಹಲಿಯು ಇಲ್ಲಿಯವರೆಗೆ ವಿಶ್ವದ ಅತ್ಯಂತ ಕಲುಷಿತ ರಾಜಧಾನಿಯಾಗಿದೆ. ನವದೆಹಲಿಯ ಜನಸಂಖ್ಯೆಯು ನಾಲ್ಕು ಮಿಲಿಯನ್‌ಗಿಂತಲೂ ಹೆಚ್ಚಿದೆ. ದೆಹಲಿಯ ಪಕ್ಕದ ಪಟ್ಟಣಗಳಾದ ಗುರುಗ್ರಾಮ್, ನೋಯ್ಡಾ, ಗಾಜಿಯಾಬಾದ್ ಮತ್ತು ಫರಿದಾಬಾದ್‌ಗಳು ಮಾಲಿನ್ಯ ಮಟ್ಟದಲ್ಲಿ ಇಳಿಕೆ ಕಂಡಿವೆ.

    ಪ್ರತಿಷ್ಠಿತ ವಿದೇಶಿ ಬ್ರ್ಯಾಂಡ್‍ಗೆ ಭಾರತದ ಮೊದಲ ರಾಯಭಾರಿಯಾಗಿ ರಶ್ಮಿಕಾ ಆಯ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts