More

    ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ ವಾಷಿಂಗ್ಟನ್​ ಸುಂದರ್ ಸಾಕುನಾಯಿಯ ಹೆಸರು..!

    ನವದೆಹಲಿ: ಟೀಮ್​ ಇಂಡಿಯಾದ ಆಸ್ಟ್ರೇಲಿಯಾದ ಪ್ರವಾಸದ ವೇಳೆ ಬ್ರಿಸ್ಬೇನ್​ನ ಗಾಬಾ ಸ್ಟೇಡಿಯಂನಲ್ಲಿ ನಡೆದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯದಲ್ಲಿ ರವಿಚಂದ್ರನ್​ ಅಶ್ವಿನ್​ ಗಾಯದ ಸಮಸ್ಯೆಯಿಂದ ಹೊರಗುಳಿದಾಗ ಅವರ ಬದಲಾಗಿ ವಾಷಿಂಗ್ಟನ್​ ಸುಂದರ್​ ಚೊಚ್ಚಲ ಟೆಸ್ಟ್​ ಪಂದ್ಯವಾಡಿದರು.

    ಈ ವೇಳೆ ಬ್ಯಾಟಿಂಗ್​ ಮತ್ತು ಬೌಲಿಂಗ್ ವಿಭಾಗದಲ್ಲಿ​ ಸುಂದರ್​ ಅತ್ಯದ್ಭುತ ಪ್ರದರ್ಶನ ನೀಡಿದರು. ಸುಂದರ್​ ಒಟ್ಟು ನಾಲ್ಕು ಪ್ರಮುಖ ವಿಕೆಟ್​ಗಳನ್ನು ಪಡೆದರು. ಬ್ಯಾಟಿಂಗ್​ ವಿಚಾರಕ್ಕೆ ಬಂದಾಗ ಮೊದಲ ಇನ್ನಿಂಗ್ಸ್​ನಲ್ಲಿ 62 ಮತ್ತು ಎರಡನೇ ಇನ್ನಿಂಗ್ಸ್​ನಲ್ಲಿ 22 ರನ್​ ಕಲೆ ಹಾಕಿದರು. ಪದಾರ್ಪಣೆ ಪಂದ್ಯದಲ್ಲಿ ಪ್ರದರ್ಶನದ ಮೂಲಕ ಗಮನಸೆಳೆದ ಸುಂದರ್​ಗೆ ಗಾಬಾ ಟೆಸ್ಟ್ ಸ್ಮರಣೆಯಾಗಿ ಉಳಿದುಕೊಂಡಿದ್ದು, ಅದರ ಸ್ಮರಣಾರ್ಥ ತನ್ನ ಪ್ರೀತಿಯ ನಾಯಿಗೆ ಗಾಬಾ ಎಂದು ಹೆಸರಿಟ್ಟು ನೆನಪನ್ನು ಶಾಶ್ವತವಾಗಿ ಉಳಿಸಿಕೊಂಡಿದ್ದು, ಜಾಲತಾಣದಲ್ಲಿ ಸುಂದರ್​ ಅವರಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಇದನ್ನೂ ಓದಿರಿ: ಕಲ್ಲಂಗಡಿ ಹಣ್ಣು ತಿಂದು ಬಾಲಕರಿಬ್ಬರ ದುರ್ಮರಣ: ನಿಗೂಢ ಪ್ರಕರಣ ಬೆನ್ನತ್ತಿ ಹೋದ ಪೊಲೀಸರಿಗೆ ಕಾದಿತ್ತು ಶಾಕ್​!

    ಹೌದು. ಸುಂದರ್​ ಅವರು ತಮ್ಮ ಪುಟ್ಟ ನಾಯಿಯೊಂದಿಗೆ ಇರುವ ಫೋಟೋವನ್ನು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿ ಪ್ರೀತಿ ನಾಲ್ಕು ಕಾಲಿನ ಪದವಾಗಿದೆ. ವಿಶ್ವವು ಗಾಬಾವನ್ನು ಭೇಟಿ ಮಾಡಿತು ಎಂದು ಬರೆದುಕೊಂಡಿದ್ದಾರೆ.

    ಪಂದ್ಯದ ವಿಚಾರಕ್ಕೆ ಬಂದರೆ ಆಸ್ಟ್ರೇಲಿಯಾ ನೀಡಿದ 328 ರನ್ ಬೆನ್ನಟ್ಟಿದ ಭಾರತ 7 ವಿಕೆಟ್ ಕಳೆದುಕೊಂಡು ಪಂದ್ಯ ಜಯಿಸಿತು. ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 369 ರನ್‌ಗಳಿಸಿದ್ದರೆ, ಭಾರತ 336 ರನ್‌ಗಳಿಗೆ ಆಲೌಟ್ ಆಗಿ 33 ರನ್ ಹಿನ್ನಡೆ ಕಂಡಿತ್ತು. ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್ 294 ರನ್‌ಗಳಿಸಿ ಭಾರತಕ್ಕೆ 328 ರನ್ ಗೆಲುವಿನ ಗುರಿನೀಡಿತ್ತು. ಇದರೊಂದಿಗೆ ಭಾರತ 4 ಪಂದ್ಯಗಳ ಸರಣಿಯನ್ನು 2-1 ರಿಂದ ವಶಪಡಿಸಿಕೊಂಡಿತು. ಈ ಮೂಲಕ ಭಾರತ ತಂಡ ಗಾಬಾ ಮೈದಾನದಲ್ಲಿ ಜಯ ದಾಖಲಿಸಿ ಐತಿಹಾಸಿಕ ಸಾಧನೆ ಮಾಡಿದೆ. ಕಳೆದ 32 ವರ್ಷಗಳಿಂದ ಬ್ರಿಸ್ಬೇನ್‌ನಲ್ಲಿ ಸೋಲು ಕಾಣದೆ ಮೆರೆಯುತ್ತಿದ್ದ ಆಸೀಸ್ ತಂಡಕ್ಕೆ ಟೀಮ್ ಇಂಡಿಯಾ ಯುವ ಪಡೆ ತಕ್ಕ ಉತ್ತರ ಕೊಟ್ಟಿದೆ. (ಏಜೆನ್ಸೀಸ್​)

    ಆಸೀಸ್ ಮಾಧ್ಯಮಗಳಲ್ಲಿ ಟೀಮ್ ಇಂಡಿಯಾ ಗೆಲುವಿಗೆ ವಿಶ್ಲೇಷಣೆ ಹೇಗಿದೆ ಗೊತ್ತಾ?

    ನಕ್ಸಲ್​ರ ವಿರುದ್ಧದ ಕಾರ್ಯಾಚರಣೆ ನಡೆದಾಗಿನಿಂದ ಈವರೆಗೂ ಪತ್ತೆಯಾಗದ 21 ಯೋಧರು..!

    ನನಗೆ ಸಿಕ್ಕಿದ್ದೇನು?: ನಟಿ ಕಂಗನಾ ರಣಾವತ್ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts