More

    ಔಷಧ ಸಸ್ಯ ವನ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿ

    ಬೆಳಗಾವಿ: ಗಿಡಮೂಲಿಕೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಔಷಧ ಸಸ್ಯ ವನ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ ಸೂಚಿಸಿದರು.
    ನಗರದ ಐಸಿಎಂಆರ್ ರಾಷ್ಟ್ರೀಯ ಪಾರಂಪರಿಕ ಚಿಕಿತ್ಸಾ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಬೆಳಗಾವಿ ಸುತ್ತಲಿನ ಖಾಲಿ ಪ್ರದೇಶಗಳಲ್ಲಿ ಔಷಧ ಸಸಿ ಬೆಳಸಬೇಕು. ಕೇಂದ್ರ ಆರೋಗ್ಯ ಮತ್ತು ಆಯುಷ್ ಸಚಿವರನ್ನು ಭೇಟಿಯಾಗಿ ಯೋಜನೆ ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು ಎಂದರು.

    ಸಂಸ್ಥೆಯ ವಿಜ್ಞಾನಿ ಹಾಗೂ ನಿರ್ದೇಶಕ ಡಾ.ದೇವಿಪ್ರಸಾದ್ ಚಟ್ಟೋಪಾಧ್ಯಾಯ ಅವರು ಪಾರಂಪರಿಕ ಚಿಕಿತ್ಸಾ ಪದ್ಧತಿಗಳು ಹಾಗೂ ಆಯುರ್ವೇದ ಮನೆ ಮದ್ದುಗಳ ಬಗ್ಗೆ ತಿಳಿಸಿದರು. ಪ್ರಸ್ತುತ ಸಂಸ್ಥೆಯಲ್ಲಿ ನಡೆಯುತ್ತಿರುವ ಸಂಶೋಧನಾ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಹೆಚ್ಚಿನ ರೀತಿಯಲ್ಲಿ ಸಂಶೋಧನೆ ಕೈಗೊಳ್ಳಲು ಅಗತ್ಯವಿರುವ ಅನುದಾನ ಮತ್ತು ಸೌಲಭ್ಯಗಳ ಬಗ್ಗೆ ವಿವರಿಸಿದರು. ಆಯುಷ್ ಸಂಶೋಧನಾಧಿಕಾರಿ ಡಾ.ಎಂ.ಎಸ್.ಚಂದ್ರಶೇಖರ್, ಸಂಸ್ಥೆಯ ಆವರಣದಲ್ಲಿ ಆಯುಷ್ ಔಷಧಗಳ ಚಿಕಿತ್ಸಾ ಸಂಶೋಧನೆಗೆ ಅಗತ್ಯವಿರುವ ಪ್ರಾದೇಶಿಕ ಆಯುಷ್ ಚಿಕಿತ್ಸಾ ಸಂಶೋಧನಾ ಕೇಂದ್ರದ ಅಗತ್ಯತೆ ಕುರಿತು ತಿಳಿಸಿದರು. ಡಾ.ಶ್ರೀಕಾಂತ ಸುಣಧೋಳಿ, ಡಾ.ಬಾನಪ್ಪ, ಡಾ.ಹರ್ಷ ಹೆಗಡೆ, ಡಾ.ಚೇತನ್, ಡಾ.ಹರೀಶ್, ಡಾ.ಆರ್.ಕೆ.ಜೋಶಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts