More

    ಕರೊನಾ ಸೇನಾನಿಗಳಿಗೆ ಔಷಧ, ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧವನ್ನು ತಾಲೂಕು ಆಡಳಿತಕ್ಕೆ ನೀಡಿದ ವೈದ್ಯ ಡಾ.ಚಿರಂತ್

    ನೆಲಮಂಗಲ: ಕರೊನಾ ತುರ್ತು ಪರಿಸ್ಥಿತಿಯಲ್ಲಿ ಕುಟುಂಬ, ಆರೋಗ್ಯವನ್ನು ಲೆಕ್ಕಿಸದೇ ಸೈನಿಕರಂತೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್, ಆರೋಗ್ಯ ಇಲಾಖೆ ಸೇರಿ ಪೌರಕಾರ್ಮಿಕರಿಗೆ ಹೋಮಿಯೋಪಥಿ ವೈದ್ಯ ಡಾ.ಚಿರಂತ್ ಹೋಮಿಯೋಪಥಿಕ್ ಇಮ್ಯೂನಿಟಿ ಬೂಸ್ಟರ್ (ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧ) ವಿತರಣೆ ಮಾಡಿದರು.

    ತಾಲೂಕು ಕಚೇರಿಯಲ್ಲಿ ಬುಧವಾರ ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧಗಳನ್ನು ಇಲಾಖಾವಾರು ಮುಖ್ಯಸ್ಥರಿಗೆ ಹಸ್ತಾಂತರಿಸಲಾಯಿತು.

    ಕರ್ನಾಟಕ ಹೋಮಿಯೋಪಥಿ ವೈದ್ಯರ ಸಂಘದ ಉಪಾಧ್ಯಕ್ಷ ಡಾ.ಚಿರಂತ್ ಮಾತನಾಡಿ, ಕೇಂದ್ರಿಯ ಆಯುಷ್ ಮಂತ್ರಾಲಯ ಹಾಗೂ ರಾಜ್ಯ ಆಯುಷ್ ನಿರ್ದೇಶನಾಲಯದ ಮಾರ್ಗಸೂಚಿಯಂತೆ ಹಾಗೂ ಕರ್ನಾಟಕ ಹೋಮಿಯೋಪಥಿ ವೈದ್ಯರ ಸಂಘದ ಸಭೆಯಲ್ಲಿ ನಿರ್ಧರಿಸಿ, 150 ಪೊಲೀಸ್ ಸಿಬ್ಬಂದಿ, 110 ಪೌರಕಾರ್ಮಿಕರು, 400 ಆರೋಗ್ಯ ಇಲಾಖೆ ಸಿಬ್ಬಂದಿ, 20 ಮಾಧ್ಯಮ ಸಿಬ್ಬಂದಿ, ಅವರ ಕುಟುಂಬಗಳಲ್ಲಿನ ಸುಮಾರು 5 ಸಾವಿರಕ್ಕೂ ಹೆಚ್ಚು ಸದಸ್ಯರಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ಕರೊನಾ ನಿಯಂತ್ರಿಸಲು ದೇಶದಾದ್ಯಂತ ಲಾಕ್‌ಡೌನ್ ಮಾಡಿದ್ದು, ಬಹುತೇಕ ಜನರು ಮನೆಯಲ್ಲಿದ್ದಾರೆ. ಆದರೆ ಪೊಲೀಸ್, ಆರೋಗ್ಯ ಇಲಾಖೆ ಸೇರಿ ಪೌರಕಾರ್ಮಿಕರು, ಮಾಧ್ಯಮದವರು ಜೀವನದ ಹಂಗು ತೊರೆದು ಕೆಲಸ ಶ್ರಮಿಸುತ್ತಿದ್ದಾರೆ. ಆದರೆ ಆಯುಷ್ ಇಲಾಖೆಯಲ್ಲಿನ ಇಂತಹ ಒಳ್ಳೆಯ ಅವಕಾಶ ಜಿಲ್ಲೆಯಲ್ಲಿನ ಎಲ್ಲರಿಗೂ ದೊರಕಿಸಿಕೊಡಬೇಕಿದ್ದು, ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಹಸೀಲ್ದಾರ್ ಎಂ.ಶ್ರೀನಿವಾಸಯ್ಯ ತಿಳಿಸಿದರು.

    ಪಾಲನೆ ಮಾಡಬೇಕಾದ ನಿಯಮ: ಕರೊನಾ ವಾರಿಯರ್ಸ್‌ ಹಾಗೂ ಕುಟುಂಬದ ಸದಸ್ಯರು 3 ದಿನಗಳ ಕಾಲ ತಲಾ ಒಂದೊಂದು ಗುಳಿಗೆ ಸೇವಿಸಬೇಕು. ಮತ್ತೆ ತಿಂಗಳ ಬಳಿಕ ಮತ್ತೆ 3 ದಿನ ಒಂದೊಂದು ಗುಳಿಗೆ ತಗೆದುಕೊಳ್ಳಬೇಕು. ಔಷಧಗಳನ್ನು ಬರಿಗೈಯಲ್ಲಿ ಮುಟ್ಟಬಾರದು, ಮುಚ್ಚಳ ಸಹಾಯದಿಂದ ನೇರವಾಗಿ ನಾಲಿಗೆ ಮೇಲೆ ಹಾಕಿ ಚಪ್ಪರಿಸಬೇಕು. ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಗುಳಿಗೆ ನುಂಗಿ 10 ನಿಮಿಷದವರೆಗೆ ಏನನ್ನು ಸೇವಿಸಬಾರದು. ಸೂರ್ಯಕಿರಣ, ಅತಿಯಾದ ಶೀತ, ಉಷ್ಣ ಇರುವ ಜಾಗದಲ್ಲಿ ಔಷಧ ಇಡಬಾರದು. 2 ತಿಂಗಳವರೆಗೆ ಕಾಫಿ ಸೇವನೆ ಬೇಡ, ಅಗತ್ಯವಿದ್ದಲ್ಲಿ ಚಹಾ ಸೇವನೆ ಮಾಡಬಹುದು. ಕರ್ಪೂರ ಅಂಶ ಹೊಂದಿರುವ ತೈಲಗಳನ್ನು ಉಪಯೋಗಿಸಬಾರದು ಎಂದು ಮಾಹಿತಿ ನೀಡಿದರು.

    ಡಿವೈಎಸ್‌ಪಿ ಬಿ.ಎಸ್.ಮೋಹನ್‌ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಹರೀಶ್, ಆರೋಗ್ಯ ನಿರೀಕ್ಷಕ ಎನ್.ಪ್ರತೀಪ್‌ಕುಮಾರ್, ಶಿರಸ್ತೇದಾರ್ ಶ್ರೀನಿವಾಸಮೂರ್ತಿ, ನಗರಸಭೆ ಪರಿಸರ ಅಭಿಯಂತೆ ಉಮಾ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts