More

    ಸಾಧನೆ ನಂತರವೂ ಮಾನವೀಯತೆ ಮರೆಯದಿರಿ ; ವಿದ್ಯಾರ್ಥಿಗಳಿಗೆ ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾಮೂರ್ತಿ ಕಿವಿಮಾತು

    ಹೊಸಕೋಟೆ: ವೃತ್ತಿಯಲ್ಲಿ, ಜೀವನದಲ್ಲಿ ಸಾಧನೆ ಮಾಡಿದ ನಂತರವೂ ಮಾನವೀಯತೆ ಮರೆಯದೆ, ಸದಾ ಸೇವೆಯಲ್ಲಿ ತೊಡಗಿಕೊಳ್ಳಿ ಎಂದು ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾಮೂರ್ತಿ ವೈದ್ಯಕೀಯ ಪದವೀಧರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

    ನಗರದ ಎಂವಿಜೆ ಮೆಡಿಕಲ್ ಹಾಗೂ ರಿಸರ್ಚ್ ಸೆಂಟರ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ 13ನೇ ವೈದ್ಯಕೀಯ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಣ ಕೇತ್ರದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆ, ಮನಮಟ್ಟುವಂತೆ ಪಾಠ ಮಾಡಿ, ಅವರಲ್ಲಿರುವ ಪ್ರತಿಭೆಯನ್ನು ಹೊರತೆಗೆಯುವಲ್ಲಿ ಪ್ರಾಧ್ಯಾಪಕರ ಪಾತ್ರ ಹಿರಿದಾದದ್ದು. ಅದರಲ್ಲೂ ಜೀವರಕ್ಷಕ ವೈದ್ಯಕೀಯ ವೃತ್ತಿಯಲ್ಲಿ ಪ್ರಾಧ್ಯಾಪಕರ ಪಾತ್ರ ಮತ್ತೂ ಹೆಚ್ಚಿನದ್ದಾಗಿರುತ್ತದೆ ಎಂದರು.

    ವೈದ್ಯಕೀಯ ವೃತ್ತಿಯಲ್ಲಿ ತೊಡಗಿಕೊಂಡ ನಂತರ ರೋಗಿಗಳಿಗೆ ಕೇವಲ ಔಷಧ ಕೊಡುವವರಾಗದೆ, ರೋಗಿಗಳ ಜತೆ ಆತ್ಮೀಯತೆಯಿಂದ ನಡೆದುಕೊಂಡು ಅವರಲ್ಲಿ ಮಾನಸಿಕ ಧೈರ್ಯ, ಆತ್ಮವಿಶ್ವಾಸ ಮೂಡಿಸಲು ಮುಂದಾಗಬೇಕು. ಜತೆಗೆ ನೂತನ ತಂತ್ರಜ್ಞಾನ, ಆವಿಷ್ಕಾರಗಳನ್ನು ವೃತ್ತಿಯಲ್ಲಿ ಅಳವಡಿಸಿಕೊಂಡು, ಉತ್ತಮ ಆರೋಗ್ಯಸೇವೆ ಕೊಡಬೇಕು ಮತ್ತು ರೋಗಗಳು ಬಾರದಂತೆ ತಡೆಯುವ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

    ಮಜುಂದಾರ್ ಮೆಡಿಕಲ್ ಸೆಂಟರ್ ಮುಖ್ಯಸ್ಥ ಡಾ. ಮುರಳಿ ಮೋಹನ್ ಮಾತನಾಡಿ, ವೈದ್ಯಕೀಯ ವಿದ್ಯಾರ್ಥಿಗಳು ಮೊದಲಿಗೆ ವೃತ್ತಿಗೆ ಗೌರವ ನೀಡಬೇಕು. ಕೇವಲ ಹಣಗಳಿಸುವ ವೃತ್ತಿಯೆಂದು ತಿಳಿಯದೆ, ಜೀವ ಉಳಿಸಿ ಜನಮನ್ನಣೆ ಗಳಿಸಬೇಕು. ಅಗಮಾತ್ರ ವೃತ್ತಿಬದುಕು ಸಾರ್ಥಕವಾಗುತ್ತದೆ ಎಂದರು.

    ಎಂವಿಜೆ ಕಾಲೇಜಿನ ಚೇರ್ಮನ್ ಡಾ. ಎಂ.ಜೆ. ಮೋಹನ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದರೆ, ಎಲ್ಲ ರಂಗಗಳಲ್ಲೂ ವೈದ್ಯಕೀಯ ಸೇವೆ ಸಲ್ಲಿಸಲು ಅವಕಾಶ ಸಿಗುತ್ತದೆ. ಈ ಬಗ್ಗೆ ಗಮನಹರಿಸುವಂತೆ ಸಲಹೆ ನೀಡಿದರು. ಎಂವಿಕೆ ಕಾಲೇಜು ಪ್ರಾಂಶುಪಾಲ ರವಿಚಂದರ್, ಆಡಳಿತ ಮಂಡಳಿ ಮುಖ್ಯಸ್ಥ ಡಾ. ಪ್ರಮೋದ್, ಸದಸ್ಯರಾದ ಅಂಜನ್ ರೆಡ್ಡಿ, ಅಶ್ವಿನ್ ಮೋಹನ್, ದಯಾನಂದ್ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts