More

    ದೆಹಲಿ ವಿಧಾನಸಭಾ ಕಲಾಪದಲ್ಲಿ ಗದ್ದಲ: ಬಿಜೆಪಿ ಶಾಸಕ ಅಮಾನತು

    ನವದೆಹಲಿ : ದೆಹಲಿ ವಿಧಾನಸಭೆಯ ಮುಂಗಾರು ಅಧಿವೇಶನದ ಮೊದಲ ದಿನವಾದ ಇಂದು ಭಾರೀ ಗದ್ದಲದ ನಡುವೆ ಕಲಾಪ ಆರಂಭವಾಯಿತು. ವಿಪಕ್ಷವಾದ ಬಿಜೆಪಿಯ ಶಾಸಕರು ಮತ್ತು ಆಡಳಿತಾರೂಢ ಆಮ್​ ಆದ್ಮಿ ಪಾರ್ಟಿ(ಎಎಪಿ)ಯ ಶಾಸಕರು ಸದನದ ಬಾವಿಗೆ ಬಂದು ಪರಸ್ಪರ ಘೋಷಣೆಗಳನ್ನು ಕೂಗಿದರು.

    ಈ ಸಂದರ್ಭದಲ್ಲಿ ತಂತಮ್ಮ ಸ್ಥಾನಗಳಿಗೆ ತೆರಳಲು ಸ್ಪೀಕರ್​ ರಾಮ್​ ನಿವಾಸ್​ ಗೋಯಲ್​ ಸೂಚಿಸಿದರು. ಆಗ ಸ್ಥಾನಕ್ಕೆ ತೆರಳದೆ ಗದ್ದಲ ಮುಂದುವರೆಸಿದ ಬಿಜೆಪಿಯ ಶಾಸಕರಾದ ವಿಜೇಂದರ್​ ಗುಪ್ತ ಮತ್ತು ಅನಿಲ್​ ಬಾಜಪೇಯಿ ಅವರನ್ನು ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ಮಾರ್ಷಲ್​ಗಳೊಂದಿಗೆ ಹೊರಕಳುಹಿಸಲಾಯಿತು ಎನ್ನಲಾಗಿದೆ.

    ಇದನ್ನೂ ಓದಿ: ರೌಂಡ್​ ಆಫ್​ 16ನಿಂದ ಹೊರಬಿದ್ದ ಮೇರಿ ಕೋಂ; ಪದಕದ ಆಸೆ ನಿರಾಸೆ

    ಈ ಜಿದ್ದಾಜಿದ್ದಿಯಲ್ಲಿ ಎಎಪಿ ಶಾಸಕರ ಮೇಲೆ ಅವಹೇಳನಕಾರಿಯಾಗಿ ಮಾತಾಡಿದಿರಿ ಎಂದು ಬಿಜೆಪಿ ಶಾಸಕ ಓಂ ಪ್ರಕಾಶ್​ ಶರ್ಮಾ ಅವರಿಗೆ ಕ್ಷಮೆ ಕೋರಲು ಸ್ಪೀಕರ್​ ಹೇಳಿದರು. ಇದಕ್ಕೆ ನಿರಾಕರಿಸಿದ ಶರ್ಮ ಅವರನ್ನು ದಿನದ ಮಟ್ಟಿಗೆ ಸದನದಿಂದ ಅಮಾನತುಗೊಳಿಸಲಾಯಿತು ಎಂದು ವರದಿಗಳು ಹೇಳಿವೆ. (ಏಜೆನ್ಸೀಸ್)

    16 ಕೋಟಿ ರೂ. ಮೌಲ್ಯದ ಕಲಾಕೃತಿಗಳು ಭಾರತಕ್ಕೆ ವಾಪಸ್​!

    ರಾಜಭವನದಲ್ಲಿ ಹಣ್ಣಿನ ತೋಟ! ಗಿಡ ನೆಟ್ಟು ನೀರೆರೆದ ರಾಜ್ಯಪಾಲ ಗೆಹ್ಲೋತ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts