More

    ಅಹಿತಕರ ಘಟನೆ ನಡೆಯಬಹುದು ಬಿಎಸ್​ಪಿ ಕಚೇರಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ; ಮಾಯಾವತಿ ಆಗ್ರಹ

    ಲಖನೌ : ಲಕ್ನೋದಲ್ಲಿರುವ ತಮ್ಮ ಪಕ್ಷದ ಕಚೇರಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ಗೆ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಅವರು ಆಗ್ರಹ ಮಾಡಿದ್ದಾರೆ.

    ರಾಜ್ಯ ಸರ್ಕಾರವು ದಲಿತ ವಿರೋಧಿಗಳೊಂದಿಗೆ ಕಟ್ಟುನಿಟ್ಟಾಗಿ ವ್ಯವಹರಿಸಬೇಕು. ಪ್ರಸ್ತುತ ಕಚೇರಿ ಇರುವ ಸ್ಥಳದ ಬದಲು ಸುರಕ್ಷಿತ ಸ್ಥಳದಲ್ಲಿ ಕಚೇರಿ ಸ್ಥಳಾಂತರಿಸಬೇಕು. ಇಲ್ಲದಿದ್ದರೆ ಯಾವುದೇ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯಬಹುದು ಎಂದು ಹೇಳಿದ್ದಾರೆ.

    ಬಹುಜನ ಸಮಾಜವಾದಿ ಪಕ್ಷ ಮುಖ್ಯಸ್ಥೆ ಮಾಯಾವತಿ ಲಕ್ನೋದಲ್ಲಿರುವ ತಮ್ಮ ಪಕ್ಷದ ಕಚೇರಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಸಿಎಂ ಯೋಗಿ ಆದಿತ್ಯನಾಥ್​ಗೆ ಆಗ್ರಹ ಮಾಡಿದ್ದಾರೆ. ಬಿಎಸ್​ಪಿ ಕಚೇರಿ ಅಲ್ಲಿರುವುದು ಸುರಕ್ಷಿತವಲ್ಲ, ಯಾವ ಸಮಯದಲ್ಲಿ ಬೇಕಾದರೂ ಅಹಿತಕರ ಘಟನೆಗಳು ಸಂಭವಿಸಬಹುದು. ಅಭದ್ರತೆಯ ಭಾವನೆಯಿಂದಾಗಿ ಪಕ್ಷದ ಬಹುತೇಕ ಸಭೆಗಳನ್ನು ನಮ್ಮ ನಿವಾಸದಲ್ಲಿಯೇ ನಡೆಸಲಾಗುತ್ತಿದೆ ಎಂದು ಮಾಯಾವತಿ ಹೇಳಿದ್ದಾರೆ.

    ಎನ್‌ಡಿಎ ಮತ್ತು ಹೊಸದಾಗಿ ರಚನೆಯಾದ ಪ್ರತಿಪಕ್ಷಗಳ ಒಕ್ಕೂಟವನ್ನು ಟೀಕೆ ಮಾಡಿದ್ದರು. ಇವೆರಡೂ ದಲಿತರು ಮತ್ತು ದಮನಿತ ವರ್ಗಗಳ ಪರವಾಗಿ ಕೆಲಸ ಮಾಡಿಲ್ಲ. ಕಾಂಗ್ರೆಸ್ ಅಥವಾ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ತಾವು ನೀಡಿದ್ದ ಭರವಸೆಗಳನ್ನು ಮರೆಯುತ್ತಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟವು ತಮ್ಮನ್ನು ತಾವು ಬಲಪಡಿಸಿಕೊಳ್ಳುತ್ತಿವೆ ಎಂದು ಟೀಕೆ ಮಾಡಿದ್ದರು.

    ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡ ನಂತರ ಸಮಾಜವಾದಿ ಪಕ್ಷ ದಲಿತ ವಿರೋಧಿ ಚಲ್, ಚರಿತಾ ಮತ್ತು ಚೆಹ್ರಾ ಅನ್ನು ಬದಲಾಯಿಸಲು ಪ್ರಯತ್ನಿಸಿದೆ. ಸಮಾಜವಾದಿ ಪಕ್ಷ ದಲಿತ ವಿರೋಧಿ ಮತ್ತು ಜಾತಿವಾದಿ ಇಂಡಿಯಾ ಒಕ್ಕೂಟಕ್ಕೆ ಸೇರಿಕೊಂಡಿದೆ ಎಂದು ಬಿಎಸ್​ಪಿ ಮುಖ್ಯಸ್ಥರೊಬ್ಬರು ಗುಡುಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts