More

    VIDEO| ಯೂಟ್ಯೂಬ್​ನಲ್ಲಿ ಸದ್ದು ಮಾಡುತ್ತಿದೆ ಮಾಯಾಬಜಾರ್​ ಚಿತ್ರದ ಟ್ರೇಲರ್​; ಒಂದೇ ದಿನಕ್ಕೆ 13 ಸಾವಿರಕ್ಕೂ ಹೆಚ್ಚು ವೀಕ್ಷಣೆ!

    ಬೆಂಗಳೂರು: ‘ಪಿಆರ್​ಕೆ ಪ್ರೊಡಕ್ಷನ್ಸ್’ ನಿರ್ಮಾಣದ ‘ಮಾಯಾಬಜಾರ್’ ಸಿನಿಮಾದ ಟ್ರೇಲರ್​ ಯೂಟ್ಯೂಬ್​ನಲ್ಲಿ ಬಿಡಗಡೆಯಾಗಿದ್ದು, ಒಮದೇ ದಿನಕ್ಕೆ 13 ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ.

    ಈ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದ್ದು ಗಮನ ಸೆಳೆಯುತ್ತಿದೆ. ಪ್ರಕಾಶ್​ರಾಜ್​, ಅಚ್ಯುತನ್​, ಸುಧಾರಾಣಿ, ವಸಿಷ್ಟ ಸಿಂಹ, ಸಾಧು ಕೋಕಿಲಾ ರಂತಹ ಘಟನುಘಟಿಗಳ ನಟನೆ ಚಿತ್ರದಲ್ಲಿದೆ.

    ಆಡಿಯೋ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆದಿತ್ತು. ಕಾಯಕ್ರಮದಲ್ಲಿ ‘ಈ ಚಿತ್ರದ ಹಾಡೊಂದರಲ್ಲಿ ನಾನು ಹೆಜ್ಜೆ ಹಾಕಿದ್ದೇನೆ. ಆ ಗೀತೆಗೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಹಾಡಿದರೆ ಚೆನ್ನಾಗಿರುತ್ತೆ ಅಂದುಕೊಂಡು ಹಾಡಿಸಿದ್ದೇವೆ’ ಎಂದಿದ್ದರು ಪುನೀತ್ ರಾಜ್​ಕುಮಾರ್.

    ‘ಪಿಆರ್​ಕೆ ಅಂದರೆ, ಪಾರ್ವತಮ್ಮ ರಾಜ್​ಕುಮಾರ್. ಪುನೀತ್ ರಾಜ್​ಕುಮಾರ್ ಎನ್ನುವುದು ಪ್ರೆಸೆಂಟ್ ಅಷ್ಟೇ. ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಚೆನ್ನಾಗಿ ಕಥೆ ಮಾಡಿಕೊಂಡಿದ್ದರು. ನಿರ್ದೇಶಕರು ಪ್ರಕಾಶ್​ರಾಜ್​ ಬಳಿ ಹೋಗಿ ಕಥೆ ಹೇಳಿದ್ದರು. ಆಗ, ಪ್ರಕಾಶ್ ರಾಜ್, ‘ನನಗೆ ಸಂಭಾವನೆ ಕೊಡಬೇಡಿ, ನಾನು ನಟಿಸ್ತೀನಿ’ ಎಂದಿದ್ದರು ಎಂಬುದನ್ನು ಪುನೀತ್ ಹೇಳಿದರು.

    ‘ಒಳ್ಳೆಯ ಉದ್ದೇಶದೊಂದಿಗೆ ಹೊಸ ಪ್ರಯತ್ನದ ಪ್ರಯೋಗಾತ್ಮಕ ಸಿನಿಮಾ ಮಾಡಿದ್ದೇವೆ. ಮನರಂಜನೆಗಂತೂ ಕೊರತೆ ಇಲ್ಲ’ ಎಂದರು ನಟ ರಾಜ್ ಬಿ. ಶೆಟ್ಟಿ. ಈ ಸಿನಿಮಾಗೆ ಮಿಧುನ್ ಮುಕುಂದನ್ ಸಂಗೀತ ಸಂಯೋಜಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts