More

    ಮಹಾತ್ಮರ ಆದರ್ಶ ಅಳವಡಿಸಿಕೊಳ್ಳಲಿ

    ಮೂಡಲಗಿ: ಸಮುದಾಯದ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ಎಲ್ಲ ಸಮುದಾಯಗಳಿಗೆ ಬೆನ್ನೆಲುಬು ಆಗಿ ಕೆಲಸ ಮಾಡುತ್ತೇನೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

    ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಭಕ್ತ ಕನಕದಾಸರ 536ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮುದಾಯದ ಅಭಿವೃದ್ಧಿಯಲ್ಲಿ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಅಗತ್ಯವಾಗಿದ್ದು, ಅವುಗಳನ್ನು ಮೈಗೂಡಿಸಿಕೊಂಡರೆ ಸಾಧನೆ ಮಾಡಲು ಸಾಧ್ಯ ಎಂದರು.

    ಮೂಡಲಗಿಯಲ್ಲಿ ಕನಕ ಭವನ ನಿರ್ಮಾಣಕ್ಕೆ ಅಗತ್ಯ ನೆರವು ನೀಡಲಾಗುವುದು. ಜತೆಗೆ ಎಲ್ಲ ಸಮುದಾಯಗಳ ಬೇಡಿಕೆಗಳಿಗೂ ಸ್ಪಂದಿಸುವ ಕೆಲಸ ಮಾಡಲಾಗುವುದು. ಯುವ ಪೀಳಿಗೆಗೆ ಮಹಾನ್ ಪುರುಷರ ತತ್ತ್ವಾದರ್ಶಗಳನ್ನು ತಿಳಿಸಿ ಜಾಗೃತಗೊಳಿಸುವ ನಿಟ್ಟಿನಲ್ಲಿ ಮಹಾನ್ ಪುರುಷರ ಜಯಂತಿಯನ್ನು ಪ್ರತಿವರ್ಷವೂ ಆಯೋಜನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

    ಸಾನ್ನಿಧ್ಯ ವಹಿಸಿದ್ದ ಸುಣಧೋಳಿಯ ಶಿವಾನಂದ ಸ್ವಾಮೀಜಿ ಹಾಗೂ ಕವಲಗುಡ್ಡದ ಅಮರೇಶ್ವರ ಮಹಾರಾಜರು ಆಶೀರ್ವಚನ ನೀಡಿದರು. ಪ್ರದೇಶ ಕುರುಬರ ಸಂಘದ ನಿರ್ದೇಶಕ ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಕುರುಬ ಸಮುದಾಯಕ್ಕೆ ಜಾರಕಿಹೊಳಿ ಸಹೋದರರು ದೊಡ್ಡ ಶಕ್ತಿಯಾಗಿದ್ದಾರೆ ಎಂದರು.

    ಕುರುಬ ಸಮುದಾಯದ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಅಧಿಕಾರಿಗಳನ್ನು ಸತ್ಕರಿಸಲಾಯಿತು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಅದ್ದೂರಿ ಮೆರವಣಿಗೆ ಮೂಲಕ ಸಮಾರಂಭದ ವೇದಿಕೆಗೆ ಕರೆ ತರಲಾಯಿತು. ಸುಣಧೋಳಿ ಸೇರಿ ಸಮುದಾಯದ ಮುಖಂಡರಿಂದ ಸತ್ಕರಿಸಲಾಯಿತು.

    ಕಳ್ಳಿಗುದ್ದಿ-ಕಪರಟ್ಟಿಯ ಬಸವರಾಜ ಹಿರೇಮಠ ಸ್ವಾಮೀಜಿ, ಜೋಕಾನಟ್ಟಿಯ ಬಿಳಿಯಾನಸಿದ್ಧ ಸ್ವಾಮೀಜಿ, ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ವಿಠ್ಠಲ ಪಾಟೀಲ, ಕೆಂಚನಗೌಡ ಪಾಟೀಲ, ಡಾ. ಎಸ್.ಎಸ್.ಪಾಟೀಲ, ಭೀಮಶಿ ಮಗದುಮ್, ಲಕ್ಷ್ಮಣ ಮಸಗುಪ್ಪಿ, ಶಿವನಗೌಡ ಪಾಟೀಲ, ಬಸಗೌಡ ಪಾಟೀಲ, ರಾಮಣ್ಣ ಮಹಾರಡ್ಡಿ, ಮನು ಗಡಾದ, ಸಿದ್ಧಲಿಂಗಪ್ಪ ಕಂಬಳಿ, ಅಜ್ಜಪ್ಪ ಗಿರಡ್ಡಿ, ಗಿರೀಶ ಹಳ್ಳೂರ, ರಂಗಪ್ಪ ಇಟ್ಟನ್ನವರ, ಹಣಮಂತ ಗುಡ್ಲಮನಿ, ಲಕ್ಷ್ಮಣ ಗಣಪ್ಪಗೋಳ, ಶಂಕರ ಬಿಲಕುಂದಿ, ಅಡಿವೆಪ್ಪ ಅಳಗೋಡಿ, ಮಲ್ಲಿಕಾರ್ಜುನ ವಡೇರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts