More

    ಮುಂದಿನ ಪೀಳಿಗೆಗೂ ಲಾವಣಿ ಗೀತೆ ಉಳಿಯುವಂತಾಗಲಿ

    ಕಿಕ್ಕೇರಿ: ಜಾನಪದ ಸಂಸ್ಕೃತಿಯಲ್ಲಿ ಒಂದಾದ ಲಾವಣಿ ಗೀತೆಗಳನ್ನು ಎಳೆಯ ಮನಸ್ಸಿನಲ್ಲಿ ಬಿತ್ತಿದಾಗ ಮಾತ್ರ ಅದು ಮುಂದಿನ ಪೀಳಿಗೆಗೆ ಉಳಿಯಲಿದೆ ಎಂದು ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದರು.

    ಸ್ಪಂದನಾ ಫೌಂಡೇಷನ್, ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ವತಿಯಿಂದ ಬುಧವಾರ ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಒಂದು ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾನಪದ ಗೀತೆಗಳು ಸ್ವಾತಂತ್ರೃ ತಂದು ಕೊಡುವಲ್ಲಿ ಸಹಕಾರಿಯಾಗಿದ್ದವು. ಇಂತಹ ಗೀತೆಗಳನ್ನು ಹಾಡುವ ಕಲೆಯನ್ನು ಭವಿಷ್ಯದ ಮಕ್ಕಳಿಗೆ ಕಲಿಸುವ ಕೆಲಸವಾಗಬೇಕಿದೆ ಎಂದರು.

    ದೇಶದಲ್ಲಿ ಪ್ರಪ್ರಥಮ ಸ್ವಾತಂತ್ರೃದ ಕಿಚ್ಚು ಹಚ್ಚಿದ ಮಹಾನ್ ಸೇನಾನಿ ರಾಯಣ್ಣ. ಇಂತಹ ಮಹನೀಯರ ದೇಶಭಕ್ತಿಯನ್ನು ಮಕ್ಕಳಿಗೆ ಬಾಲ್ಯದಿಂದಲೇ ರೂಢಿಸಬೇಕು. ನಮ್ಮಲ್ಲಿನ ಒಳಜಗಳ, ಅಧಿಕಾರದ ಆಸೆಗೆ ಬ್ರಿಟಿಷರು ನಮ್ಮನ್ನೇ ಆಳುವಂತಾಯಿತು. ಅತಿಯಾಸೆ, ದುರಾಸೆಗೆ ಕಡಿವಾಣ ಹಾಕಲು ಇಂತಹ ಹುತಾತ್ಮರ ಜೀವನಚರಿತ್ರೆ ತಿಳಿಸಿಕೊಡುವ ಕೆಲಸವಾಗಬೇಕು ಎಂದು ಹೇಳಿದರು.

    ಕನ್ನಡ ದೇಶಭಕ್ತಿಗೀತೆ, ರಾಯಣ್ಣ ಕುರಿತು ಲಾವಣಿ ಪದಗಳನ್ನು ಗಾಯಕರು ಹಾಡಿದರು. ಗಾಯಕಿ ಸೀಮಾ ರಾಯ್ಕರ್, ಪುಷ್ಪಲತಾ, ಮಹೇಶ್, ತ್ರಿವೇಣಿ, ಕವಿತಾ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts