More

  ಶೈಕ್ಷಣಿಕ, ಸಾಮಾಜಿಕವಾಗಿ ಮಡಿವಾಳ ಸಮುದಾಯ ಪ್ರಗತಿ ಹೊಂದಲಿ

  ಮದ್ದೂರು: ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಸೇರಿದಂತೆ ಆರ್ಥಿಕವಾಗಿ ಮಡಿವಾಳ ಸಮಾಜ ಪ್ರಗತಿ ಸಾಧಿಸಬೇಕು ಎಂದು ಶ್ರೀ ವೀರ ಮಡಿವಾಳ ಮಾಚಿದೇವರ ಸಂಘದ ತಾಲೂಕು ಅಧ್ಯಕ್ಷ ಎಸ್.ಬೆಟ್ಟರಾಜ ತಿಳಿಸಿದರು.

  ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಹಿಂದಿನಿಂದಲೂ ಮಡಿವಾಳ ಸಮಾಜ ಸೀಮಿತ ರೇಖೆಯಲ್ಲೇ ನಡೆದು ಬರುತ್ತಿದ್ದೆಯೇ ಹೊರತು ಪ್ರಮುಖ ಕ್ಷೇತ್ರಗಳಲ್ಲಿ ಮುಂದೆ ಬರಲು ಪ್ರಯತ್ನ ಮಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಸಾಂಕ ಹೋರಾಟ ಮಾಡುವ ಮೂಲಕ ಸಮಾಜ ಮುಖ್ಯವಾಹಿನಿಗೆ ಬರಬೇಕಾಗಿದೆ ಎಂದರು.

  ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಶ್ರೀ ಉಗ್ರ ನರಸಿಂಹಸ್ವಾಮಿ ದೇಗುಲ ಆವರಣದಿಂದ ಹೊರಟ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂಬೇಡ್ಕರ್ ಭವನಕ್ಕೆ ಆಗಮಿಸಿತು.

  ಬೆಂಗಳೂರಿನ ಮೂಡಲಗಿರಿಯಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಡಿವಾಳ ಮಾಚಿದೇವರ ಸಂಘದ ಅಧ್ಯಕ್ಷ ನಂಜಪ್ಪ, ಉಪಾಧ್ಯಕ್ಷ ರಾಜಣ್ಣ, ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಜಿಲ್ಲಾ ಅಹಿಂದ ಅಧ್ಯಕ್ಷ ಸಂದೇಶ್, ಪೊಲೀಸ್ ಮಹಾದೇವಯ್ಯ, ಸಂಘದ ತಾಲೂಕು ಗೌರವಾಧ್ಯಕ್ಷ ಚನ್ನವೀರಯ್ಯ, ಕಾರ್ಯದರ್ಶಿ ಪುಟ್ಟಸ್ವಾಮಿ, ಉಪಾಧ್ಯಕ್ಷ ಸಿ.ಬೆಟ್ಟಯ್ಯ, ಖಜಾಂಚಿ ಉಮಾಶಂಕರ್, ಸಹ ಕಾರ್ಯದರ್ಶಿ ಬಸವರಾಜು, ನಿರ್ದೇಶಕರಾದ ಎಚ್.ಎಂ.ಶಂಕರ್, ರಾಜೇಶ್, ರುದ್ರಣ್ಣ, ಚನ್ನಪ್ಪ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts