More

    ಮ್ಯಾಕ್ಸ್​ವೆಲ್, ಹ್ಯಾಸಲ್​ವುಡ್ ಡೌಟ್; IPL ಆರಂಭಕ್ಕೆ ಮೊದಲೇ ಆರ್​ಸಿಬಿ ತಂಡಕ್ಕೆ ಹಿನ್ನಡೆ

    ಬೆಂಗಳೂರು: ಹಿಮ್ಮಡಿ ನೋವಿನಿಂದ ಚೇತರಿಸಿ ಕೊಳ್ಳುತ್ತಿರುವ ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಸಲ್​ವುಡ್ ಐಪಿಎಲ್ ಟೂರ್ನಿಯ ಆರಂಭಿಕ ಕೆಲ ಪಂದ್ಯಗಳಿಗೆ ಅಲಭ್ಯರಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹಿನ್ನಡೆ ಉಂಟು ಮಾಡಿದೆ. ಇದರೊಂದಿಗೆ ಆಸೀಸ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್​ವೆಲ್ ಕೂಡ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಆಡುವುದು ಅನುಮಾನ ಮೂಡಿಸಿದೆ.

    32 ವರ್ಷದ ಹ್ಯಾಸಲ್​ವುಡ್ ಗಾಯದ ಸಮಸ್ಯೆಯಿಂದ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಿಂದಲೂ ಹೊರಗುಳಿದಿದ್ದರು. ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿರುವುದನ್ನು ಖಚಿತಪಡಿಸಿರುವ ಹ್ಯಾಸಲ್​ವುಡ್, ಆಸೀಸ್ ತಂಡದ ವೈದ್ಯಕೀಯ ಸಿಬ್ಬಂದಿ ಸಲಹೆ ಮೇರೆಗೆ ಉಳಿದ ಪಂದ್ಯಗಳ ಲಭ್ಯತೆಯ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ.

    ಹ್ಯಾಸಲ್​ವುಡ್ ಆರ್​ಸಿಬಿ ಪರ 12 ಪಂದ್ಯಗಳಲ್ಲಿ 20 ವಿಕೆಟ್ ಕಬಳಿಸಿ, 2022ರ ಆವೃತ್ತಿಯಲ್ಲಿ ತಂಡದ 2ನೇ ಯಶಸ್ವಿ ಬೌಲರ್ ಎನಿಸಿದ್ದರು. 2022ರ ಹರಾಜು ಪ್ರಕ್ರಿಯೆಯಲ್ಲಿ ಆರ್​ಸಿಬಿ 7.75 ಕೋಟಿ ರೂ. ನೀಡಿ ಅವರನ್ನು ಖರೀದಿಸಿತ್ತು.

    ಕಾಲು ಮುರಿತಕ್ಕೆ ಒಳಗಾಗಿದ್ದ ಮ್ಯಾಕ್ಸ್​ವೆಲ್ ಸಂಪೂರ್ಣ ಫಿಟ್ ಆಗಲು ಕೆಲವು ಸಮಯ ಹಿಡಿಯಲಿದೆ ಎನ್ನಲಾಗಿದೆ. ಈಗಾಗಲೆ ಆರ್​ಸಿಬಿ ತಂಡ ಕೂಡಿಕೊಂಡಿರುವ ಮ್ಯಾಕ್ಸ್​ವೆಲ್ ಅಭ್ಯಾಸ ಆರಂಭಿಸಿದ್ದಾರೆ. ಭಾನುವಾರ ಮುಂಬೈ ತಂಡದ ಎದುರು ಆರ್​ಸಿಬಿ ತನ್ನ ಮೊದಲ ಪಂದ್ಯವನ್ನಾಡಲಿದೆ.

    ಸನ್ ಮೊದಲ ಪಂದ್ಯಕ್ಕೆ ಭುವಿ ನಾಯಕ

    ನವದೆಹಲಿ: ಮುಂಬರುವ ಏಕದಿನ ವಿಶ್ವಕಪ್​ಗೆ ನೇರಅರ್ಹತೆ ಪಡೆಯುವ ದೃಷ್ಟಿಯಿಂದ ದಕ್ಷಿಣ ಆಫ್ರಿಕಾ ತಂಡಕ್ಕೆ ಮಹತ್ವ ಎನಿಸಿರುವ ನೆದರ್ಲೆಂಡ್ ವಿರುದ್ಧದ ಕೊನೇ 2 ಪಂದ್ಯಗಳಲ್ಲಿ ಸನ್​ರೈಸರ್ಸ್ ತಂಡದ ನಾಯಕ ಏಡನ್ ಮಾರ್ಕ್ರಮ್ ಭಾಗವಹಿಸಲಿದ್ದು, ಐಪಿಎಲ್​ನ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಮಾರ್ಕ್ರಮ್ ಅನುಪಸ್ಥಿಯಲ್ಲಿ ಟೀಮ್ ಇಂಡಿಯಾ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಹಂಗಾಮಿ ನಾಯಕರಾಗಿ ಸನ್​ರೈಸರ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಸನರೈಸರ್ಸ್ ತಂಡ ಭಾನುವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ. 2ನೇ ಪಂದ್ಯದ ವೇಳೆಗೆ ಮಾರ್ಕ್ರಮ್ ತಂಡ ಸೇರಿಕೊಳ್ಳಲಿದ್ದಾರೆ. 2013ರಿಂದಲೂ ಸನ್​ರೈಸರ್ಸ್ ತಂಡದ ಭಾಗವಾಗಿರುವ ಭುವನೇಶ್ವರ್​ಗೆ ಆಡಳಿತ ಮಂಡಳಿ ಮಣೆ ಹಾಕಿದೆ. ಸನ್​ರೈಸರ್ಸ್ ತಂಡವನ್ನು ಇದಕ್ಕೂ ಮುನ್ನ ಏಳು ಬಾರಿ ಮುನ್ನಡೆಸಿರುವ ಭುವಿ, ಎರಡೂ ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts