More

    ಪಾಕ್‌ನಲ್ಲಿ ಅಪರಿಚಿತರ ಗುಂಡೇಟಿಗೆ ಜೈಶ್​ ಎ ಮೊಹಮ್ಮದ್‌ ಉಗ್ರ ಬಲಿ: ವಾರದಲ್ಲಿ ಇಬ್ಬರು ಉಗ್ರರ ಹತ್ಯೆ!

    ಕರಾಚಿ: ಪಾಕಿಸ್ತಾನದಿಂದ ದೊಡ್ಡ ಸುದ್ದಿ ಹೊರಬಿದ್ದಿದೆ. ಭಾರತದ ವಿರುದ್ಧ ಭಾಷಣಗಳಲ್ಲಿ ಕೆಂಡ ಕಾರುತ್ತಿದ್ದ ಉಗ್ರ ಮೌಲಾನಾ ರಹೀಮುಲ್ಲಾ ತಾರಿಕ್ ನನ್ನು ಅಪರಿಚಿತರು ಗುಂಡಿಕ್ಕಿ ಕೊಂದಿದ್ದಾರೆ.

    ಇದನ್ನೂ ಓದಿ: Dollar Vs Rupee: ಡಾಲರ್ ವಿರುದ್ಧ ರೂಪಾಯಿ ದುರ್ಬಲ : 83.32 ತಲುಪಿದ ಭಾರತದ ಕರೆನ್ಸಿ- ಸೋಮವಾರ ಕುಸಿತ ಕಂಡಿದ್ದೆಷ್ಟು?
    ಧಾರ್ಮಿಕ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ಹಂತಕರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ತಾರಿಕ್ ಜೈಶ್ ಸಂಸ್ಥಾಪಕ ಮಸೂದ್ ಅಜರ್ ಗೆ ಆಪ್ತನಾಗಿದ್ದ ಎನ್ನಲಾಗಿದೆ.

    ಮಾಹಿತಿಯ ಪ್ರಕಾರ ಕರಾಚಿಯ ಓರಂಗಿ ಟೌನ್‌ನಲ್ಲಿ ಭಾರತ ವಿರೋಧಿ ರ್‍ಯಾಲಿಯನ್ನು ಆಯೋಜಿಸಲಾಗಿತ್ತು. ಇದರಲ್ಲಿ ಮೌಲಾನಾ ರಹೀಮುಲ್ಲಾ ಪಾಲ್ಗೊಳ್ಳಬೇಕಾಗಿತ್ತು. ಆದರೆ ಮಾರ್ಗ ಮಧ್ಯೆ ಬೈಕ್‌ನಲ್ಲಿ ಬಂದ ಅಪರಿಚಿತ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಅಪರಿಚಿತರು ಮನಸೋಇಚ್ಛೆ ಗುಂಡು ಹಾರಿಸಿದ್ದರಿಂದ ಆತ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಪ್ರಕರಣವು ಟಾರ್ಗೆಟ್ ಕೊಲೆಯಂತೆ ತೋರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕಳೆದ ಒಂದು ವಾರದಿಂದ ಅಪರಿಚಿತರ ಗುಂಡೇಟಿಗೆ ಇಬ್ಬರು ಉಗ್ರರು ಬಲಿಯಾಗಿದ್ದಾರೆ. ಖೈಬರ್‌ ಪಖ್ತುಂಖ್ವಾದಲ್ಲಿ ವಾರದ ಹಿಂದೆ ಲಷ್ಕರೆ ತೊಯ್ಬಾ ಕಮಾಂಡರ್‌ ಅಕ್ರಮ್‌ ಘಾಜಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈಗ ಜೈಶೆ ಮೊಹಮ್ಮದ್‌ ಉಗ್ರ ಸಂಘಟನೆಯ ಮತ್ತೊಬ್ಬ ಉಗ್ರ ಅಪರಿಚಿತರ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ.ಇವರಿಬ್ಬರೂ ಭಾರತ ವಿರೋಧಿ ಕೃತ್ಯಗಳಿಗೆ ಪಿತೂರಿ ನಡೆಸಿದ್ದರು.

    ಮೌಲಾನಾ ರಹೀಮ್‌ ಉಲ್ಲಾ ತಾರಿಕ್‌ ಭಾರತ ವಿರೋಧಿ ಸಭೆಗಳಲ್ಲಿ ಪಾಲ್ಗೊಂಡು, ಭಾರತದ ವಿರುದ್ಧ ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತಿದ್ದ. ಕೆಲ ದಿನಗಳ ಹಿಂದಷ್ಟೇ ಹತ್ಯೆಗೀಡಾಗಿದ್ದ ಅಕ್ರಮ್‌ ಘಾಜಿ ಕೂಡ ಜಮ್ಮು-ಕಾಶ್ಮೀರದಲ್ಲಿ ಹಲವು ಉಗ್ರ ದಾಳಿಗಳ ರೂವಾರಿಯಾಗಿದ್ದ ಎಂಬುದು ಗಮನಾರ್ಹ ಸಂಗತಿಯಾಗಿದೆ.
    ಉಗ್ರರಿಗೆ ಸಿಗುತ್ತಿಲ್ಲ ನೆರವು: ಪಾಕಿಸ್ತಾನ ಸರ್ಕಾರವು ಐಎಸ್‌ಐ ಮೂಲಕ ಉಗ್ರರಿಗೆ ಹಲವು ರೀತಿಯಲ್ಲಿ ನೆರವು ನೀಡುತ್ತಿದ್ದರೂ ಇತ್ತೀಚೆಗೆ ಉಗ್ರರಿಗೆ ಸಾಕಷ್ಟು ಪ್ರಮಾಣದಲ್ಲಿ ಹಣ ಸರಬರಾಜು ಆಗುತ್ತಿಲ್ಲ. ಆ ದೇಶ ದಿವಾಳಿಯಾಗಿದ್ದು, ಹಣ ನೀಡುತ್ಇತಿಲ್ದಲ. ಇದರಿಂದಾಗಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಆಗುತ್ತಿಲ್ಲ. ಇದು ಉಗ್ರರ ಮಧ್ಯೆ ಒಳಜಗಳಕ್ಕೆ ಕಾರಣವಾಗಿದೆ. ಹಾಗಾಗಿಯೇ ಉಗ್ರರ ನಡುವೆ ಹತ್ಯೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

    VIDEO | ಹಿಂದೂ ಸಮುದಾಯದೊಂದಿಗೆ ದೀಪಾವಳಿ ಆಚರಿಸಿದ ನ್ಯೂಯಾರ್ಕ್ ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts