More

    ಶೃಂಗೇರಿಯಲ್ಲಿ ಶ್ರೀ ಉಮಾಮಹೇಶ್ವರ ಸ್ವಾಮಿ ತೆಪ್ಪೋತ್ಸವ

    ಶೃಂಗೇರಿ: ಶಾರದಾ ಮಠದಲ್ಲಿ ಮಂಗಳವಾರ ತುಂಗಾ ಪುಷ್ಕರ ಅಂಗವಾಗಿ ಬೆಳಗ್ಗೆ 8 ಗಂಟೆಗೆ ತುಂಗಾ ನದಿಗೆ ಕಲ್ಪೋಕ್ತ ಪೂಜೆ ನೆರವೇರಿಸಿ ತುಂಗಾಕಲಶ ಜಲವನ್ನು ಉತ್ಸವದಲ್ಲಿ ತರಲಾಯಿತು. ಬಳಿಕ ಶ್ರೀ ಶಾರದಾಂಬ, ಶ್ರೀ ಶಂಕರಭಗವತ್ಪಾದರ ಹಾಗೂ ಶ್ರೀವಿದ್ಯಾಶಂಕರ ದೇವರ ಸನ್ನಿಧಿಯಲ್ಲಿ ಅಭಿಷೇಕ ನೆರವೇರಿಸಲಾಯಿತು.

    ರಾತ್ರಿ ಮಠದ ಯತಿಗಳು ತುಂಗಾ ದಡದಲ್ಲಿರುವ ತುಂಗೆ, ಶ್ರೀ ವರಾಹಮೂರ್ತಿ, ಶ್ರೀ ಶಾರದಾ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸಾಲಂಕೃತಗೊಂಡ ದೋಣಿಯಲ್ಲಿ ವಿವಿಧ ಪುಷ್ಪಗಳು ಹಾಗೂ ಆಭರಣಗಳಿಂದ ಕಂಗೊಳಿಸುತ್ತಿದ್ದ ಉಮಾಮಹೇಶ್ವರ ಸ್ವಾಮಿಗೆ ಜಗದ್ಗುರು ಶ್ರೀ ವಿಧುಶೇಖರಭಾರತೀ ಪೂಜೆ ಸಲ್ಲಿಸಿದ ನಂತರ ತೆಪ್ಪೋತ್ಸವ ನೆರವೇರಿತು.

    ಮಠದ ಋತ್ವಿ್ವರು ತುಂಗಾರತಿ ಬೆಳಗಿದರು. ತಾಲೂಕಿನ ಭಕ್ತರು ಸಂಭ್ರಮದಿಂದ ತೆಪ್ಪೋತ್ಸದಲ್ಲಿ ಪಾಲ್ಗೊಂಡರು. ಸುಮಂಗಲಿಯರು ನದಿಗೆ ಸಮರ್ಪಿಸಿದ ದೀಪಗಳ ಸಾಲುಗಳು ಕಣ್ಮನ ಸೆಳೆದವು. ನ.25ರಂದು ಶ್ರೀ ಜನಾರ್ದನಸ್ವಾಮಿ ಸನ್ನಿಧಿಯಲ್ಲಿ ಬೆಳಗ್ಗೆ ಲಕ್ಷ ತುಳಸಿ ಅರ್ಚನೆ ಹಾಗೂ ರಾತ್ರಿ ಶ್ರೀ ಜನಾರ್ದನ ಸ್ವಾಮಿ ತೆಪ್ಪೋತ್ಸವ ಜರುಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts