More

    ಆತಿಥೇಯ ಗುಜರಾತ್ ಜೈಂಟ್ಸ್ ಶುಭಾರಂಭ: ಡಿಸೆಂಬರ್ 8 ರಿಂದ ಬೆಂಗಳೂರಿನಲ್ಲಿ ಪ್ರೊ ಕಬಡ್ಡಿ, 12 ಚರಣಗಳ ವೇಳಾಪಟ್ಟಿ ಇಂತಿದೆ!

    ಅಹಮದಾಬಾದ್: ಆರಂಭಿಕ ಹಿನ್ನಡೆಯ ಬಳಿಕ ಸರ್ವಾಂಗೀಣ ನಿರ್ವಹಣೆ ತೋರಿದ ಆತಿಥೇಯ ಗುಜರಾತ್ ಜೈಂಟ್ಸ್ ತಂಡ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಎದುರು 38-32 ಅಂಕಗಳಿಂದ ಗೆದ್ದು ಶುಭಾರಂಭ ಕಂಡಿದೆ.

    ಟ್ರಾನ್ಸ್ ಸ್ಟಡಿಯ ಕ್ರೀಡಾಂಗಣದಲ್ಲಿ ಶನಿವಾರ ಆರಂಭಗೊಂಡ ಟೂರ್ನಿಯ ಮೊದಲ ಪಂದ್ಯದಲ್ಲಿ 2 ಬಾರಿಯ ೈನಲಿಸ್ಟ್ ಗುಜರಾತ್ ಜೈಂಟ್ಸ್ ಮೊದಲಾರ್ಧದಲ್ಲಿ 13-16ರಿಂದ ಹಿನ್ನಡೆ ಅನುಭವಿಸಿತು. ಯುವ ರೈಡರ್ ಸೋನು ಸೂಪರ್ ರೈಡ್‌ನೊಂದಿಗೆ 5 ಅಂಕ ಕಸಿದು ಗುಜರಾತ್ ಹಿನ್ನಡೆಯನ್ನು ತಗ್ಗಿಸಿದರು. ಟೂರ್ನಿಯ ದುಬಾರಿ ಆಟಗಾರ ಪವನ್ ಶೆರಾವತ್ (11 ಅಂಕ) ನೇತೃತ್ವದ ತೆಲುಗು ಟೈಟಾನ್ಸ್ ತಂಡವನ್ನು ದ್ವಿತೀಯಾರ್ಧದಲ್ಲಿ ಎರಡು ಬಾರಿ ಆಲೌಟ್ ಬಲೆಗೆ ಕೆಡವಿದ ಗುಜರಾತ್ ಜೈಂಟ್ಸ್ ಪಂದ್ಯದಲ್ಲಿ ಮುನ್ನಡೆ ಕಂಡಿತು. ಗುಜರಾತ್ ಪರ ರೈಡರ್ ಸೋನು 11, ರಾಕೇಶ್ 5, ಮೊಹಮದ್ ನಬಿಭಕ್ಷ್ 4 ಹಾಗೂ ನಾಯಕ ಜಲ್ ಅಟ್ರಾಚಲಿ 3 ಅಂಕ ಕಲೆಹಾಕಿದರೆ, ಟೈಟಾನ್ಸ್ ಪರ ರಜನೀಶ್ 5 ಅಂಕ ಕಲೆಹಾಕಿದರು.

    4. ಪವನ್ ಶೆರಾವತ್ ಪ್ರೊ ಕಬಡ್ಡಿ ಟೂರ್ನಿಯಲ್ಲಿ 50 ಬಾರಿ ಸೂಪರ್-10 ಪೂರೈಸಿದ 4ನೇ ರೈಡರ್ ಎನಿಸಿದರು.

    ಇಂದಿನ ಪಂದ್ಯಗಳು
    ತಮಿಳ್ ತಲೈವಾಸ್- ದಬಾಂಗ್ ಡೆಲ್ಲಿ
    ಗುಜರಾತ್ ಜೈಂಟ್ಸ್-ಬೆಂಗಳೂರು ಬುಲ್ಸ್

    12 ಚರಣಗಳು
    ಅಹಮದಾಬಾದ್: ಡಿಸೆಂಬರ್ 2-7
    ಬೆಂಗಳೂರು: ಡಿಸೆಂಬರ್ 8-13
    ಪುಣೆ: ಡಿಸೆಂಬರ್ 15-20
    ಚೆನ್ನೈ: ಡಿಸೆಂಬರ್ 22-27
    ನೋಯ್ಡ: ಡಿ.29-ಜನವರಿ 3
    ಮುಂಬೈ: ಜನವರಿ 5-10
    ಜೈಪುರ: ಜನವರಿ 12-17
    ಹೈದರಾಬಾದ್: ಜನವರಿ 19-24
    ಪಟನಾ: ಜನವರಿ 26-31
    ನವದೆಹಲಿ: ೆಬ್ರವರಿ 2-7
    ಕೋಲ್ಕತ: ೆಬ್ರವರಿ 9-14
    ಪಂಚಕುಲಾ: ೆಬ್ರವರಿ 16-21

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts