More

    ರಸ್ತೆ ಮಧ್ಯೆಯೇ ದೊಡ್ಡ ಹೊಂಡ! ಕೇಜ್ರಿವಾಲ್ ನಾಡಿನ ಅವಸ್ಥೆ ಬಗ್ಗೆ ಟೀಕಿಸಿದ ಬಿಜೆಪಿ

    ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಹೌಜ್ ಖಾಸ್ ಪ್ರದೇಶದಲ್ಲಿರುವ ಐಐಟಿ ದೆಹಲಿ ಫ್ಲೈಓವರ್ ಕೆಳಗೆ ಶನಿವಾರ ಬೆಳಗ್ಗೆ ದೊಡ್ಡದೊಂದು ಹೊಂಡ ಕಾಣಿಸಿಕೊಂಡಿದೆ. ಅದರಿಂದಾಗಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸಾಕಷ್ಟು ಅಡ್ಡಿಯಾಗಿರುವುದಾಗಿ ಹೇಳಲಾಗಿದೆ.

    ದೆಹಲಿ ಜಲ ಮಂಡಳಿಗೆ ಸಂಪರ್ಕ ಹೊಂದಿರುವ ಒಳಚರಂಡಿಯಲ್ಲಿ ಈ ರೀತಿ ಹೊಂಡ ಕಾಣಿಸಿಕೊಂಡಿರುವುದಾಗಿ ಹೇಳಲಾಗಿದೆ. ಶನಿವಾರ ಬೆಳಗ್ಗೆ ಸುಮಾರು 9.30- 10 ಗಂಟೆ ವೇಳೆಗೆ ಈ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಸಂಚಾರ ಪೊಲೀಸರ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ. ಆ ರಸ್ತೆಯಲ್ಲಿ ಸಂಚಾರ ಮಾಡುವವರು ಇಂದು ಬೇರೆ ರಸ್ತೆಯಲ್ಲಿ ಸಂಚರಿಸಿ ಎಂದು ಕೋರಲಾಗಿದೆ.

    ಈ ಬಗ್ಗೆ ಬಿಜೆಪಿ ಮುಖಂಡರು ನವದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಕಾಲೆಳೆಯಲಾರಂಭಿಸಿದ್ದಾರೆ. “ದೆಹಲಿ ಸರ್ಕಾರದ ಪಿಡಬ್ಲ್ಯುಡಿ ಇಲಾಖೆಯು ರಸ್ತೆಯಲ್ಲಿ ಸಾರ್ವಜನಿಕರಿಗಾಗಿ ಸಾವಿನ ಬಾವಿಗಳನ್ನೂ ತೋಡಿಸಿದೆ. ಕೇಜ್ರಿವಾಲ್ ಅವರ ವಿಶ್ವ ದರ್ಜೆಯ ದೆಹಲಿ ಮಾದರಿಯನ್ನು ನೋಡಿ” ಎಂದು ಪಶ್ಚಿಮ ದೆಹಲಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ಅವರು ಹೌಜ್ ಖಾಸ್ ರಸ್ತೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. (ಏಜೆನ್ಸೀಸ್)

    ಆನ್​ಲೈನ್​ ಗೇಮ್​ನಲ್ಲಿ 40 ಸಾವಿರ ಕಳೆದುಕೊಂಡ ಬಾಲಕ! ಅಮ್ಮ ಬೈದಿದ್ದಕ್ಕೆ ಮನನೊಂದು ಆತ್ಮಹತ್ಯೆ

    ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಗೆದ್ದ ಮೀರಾಗೆ ಆ ಟ್ರಕ್ಸ್​ ಚಾಲಕರು ಬೇಕಂತೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts