More

    ಮುಂಬೈನಲ್ಲಿ ಬೆಂಕಿ ಅನಾಹುತ: 37 ಜನರ ರಕ್ಷಣೆ

    ಮುಂಬೈ: ಮಿಲನ್ ಸುರಂಗಮಾರ್ಗದ ವಾಣಿಜ್ಯ ಕೇಂದ್ರದಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 37 ಜನರನ್ನು ರಕ್ಷಿಸಲಾಗಿದೆ. ಯಾವುದೇಪ್ರಾಣಾಪಾಯವಾದ ಬಗ್ಗೆ ವರದಿಯಾಗಿಲ್ಲ

    ಸಾಂತಾಕ್ರೂಜ್ ವೆಸ್ಟ್‌ನ ಮಿಲನ್ ಸಬ್‌ವೇ ಬಳಿ ಇರುವ ಆಪ್ಷನ್ಸ್ ಕಮರ್ಷಿಯಲ್ ಸೆಂಟರ್‌ನಲ್ಲಿ ಸೋಮವಾರ ಸಂಜೆ ಬೆಂಕಿ ಅವಘಡ ಸಂಭವಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ 37 ಜನರನ್ನು ರಕ್ಷಿಸಿದ್ದಾರೆ.

    ಇದನ್ನೂ ಓದಿ: ಧ್ರುವ್ ಜುರೆಲ್‌ಗೆ ‘ಹೆಕ್ಟರ್’ ಉಡುಗೊರೆ! ಥಾರ್ ಯಾವಾಗ ‘ಮಹೀಂದ್ರಾ’ ಎಂದ ನೆಟ್ಟಿಗರು

    ವಾಣಿಜ್ಯ ಕಟ್ಟಡದ 2 ನೇ ಮಹಡಿಯ ಗಾಲಾದಲ್ಲಿ ವಿದ್ಯುತ್ ಶಾರ್ಟ್​ ಸರ್ಕ್ಯೂಟ್​ನಿಂದ ಬೆಂಕಿ ಕಾಣಿಸಿಕೊಂಡಿದೆ. ಕರೆ ಮಾಡಿದ ಕೆಲವೇ ನಿಮಿಷಗಳಲ್ಲಿ, ಸ್ಥಳಕ್ಕೆ ದಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ತುರ್ತು ಪರಿಸ್ಥಿತಿಯನ್ನು ಘೋಷಿಸಿತು,

    ಕೂಡಲೇ ನಾಲ್ಕು ಅಗ್ನಿಶಾಮಕ ಯಂತ್ರಗಳು, ಒಂದು ಮೊಬೈಲ್ ಫೈರ್ ಟೆಂಡರ್, ಒಂದು ಕ್ವಿಕ್ ರೆಸ್ಪಾನ್ಸ್ ವೆಹಿಕಲ್, ಒಂದು ಏರಿಯಲ್ ವಾಟರ್ ಟವರ್ ಟೆಂಡರ್, ಎರಡು ಜೆಟ್ ಟೆಂಡರ್‌ಗಳು, ಒಂದು ಟರ್ಂಟಬಲ್ ಲ್ಯಾಡರ್ ಮತ್ತು 108 ಆಂಬ್ಯುಲೆನ್ಸ್ ಅನ್ನು ಕರೆಸಿ ಕಾರ್ಯಾಚರಣೆ ನಡೆಸಲಾಯಿತು.

    ಅಗ್ನಿಶಾಮಕ ದಳದ ತುರ್ತು ಕಾರ್ಯಾಚರಣೆಯಿಂದ ಕಟ್ಟಡದ ಎರಡನೇ ಮಹಡಿ ಮತ್ತು ಟೆರೇಸ್‌ನಲ್ಲಿ ಸಿಲುಕಿದ್ದ 37 ಜನರನ್ನು ಯಶಸ್ವಿಯಾಗಿ ರಕ್ಷಿಸಲಾಯಿತು. ಅಗ್ನಿಶಾಮಕ ಸಿಬ್ಬಂದಿ ಟಿಟಿಎಲ್ ಮತ್ತು ಮೆಟ್ಟಿಲುಗಳೆರಡನ್ನೂ ಬಳಸಿಕೊಂಡು ನಿಖರ ಮತ್ತು ದಕ್ಷತೆಯಿಂದ ರಕ್ಷಣಾ ಕಾರ್ಯಾಚರಣೆಯನ್ನು ನಿರ್ವಹಿಸಿದರು.

    ಅದೃಷ್ಟವಶಾತ್ ಬೆಂಕಿ ಅನಾಹುತದಿಂದ ಯಾವುದೇ ಹಾನಿ ಸಂಭವಿಸಿಲ್ಲ. ಪ್ರಾಣಾಪಾಯವೂ ಸಂಭವಿಸಿದ ವರದಿಯಾಗಿಲ್ಲ.

    ಶಾಸಕ ನೇತೃತ್ವದಲ್ಲಿ ಹುಲಿ ಬೇಟೆ..! ವ್ಯಾಗ್ರನ ಹೊಡೆದುರುಳಿಸಿದವರಿಗೆ ಸಿಕ್ಕಿದ್ದಾದರೂ ಏನು? ವಿವರ ಇಲ್ಲಿದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts