More

    ನ್ಯೂಜಿಲೆಂಡ್​ನಲ್ಲಿ ಸುನಾಮಿ ಅಪ್ಪಳಿಸುವ ಭೀತಿ: ಸಾವಿರಾರು ಜನರ ಸ್ಥಳಾಂತರ

    ವೆಲ್ಲಿಂಗ್ಟನ್​: ಪೆಸಿಫಿಕ್​ ಸಾಗರದಲ್ಲಿ ಉಂಟಾದ ಪ್ರಬಲ ಭೂಕಂಪಗಳ ಸಮೂಹದಿಂದಾಗಿ ಸುನಾಮಿ ಅಪ್ಪಳಿಸುವ ಭೀತಿ ಎದುರಾಗಿದ್ದು, ಶುಕ್ರವಾರ ನ್ಯೂಜಿಲೆಂಡ್​, ನ್ಯೂ ಕಲೆಡೊನಿಯಾ ಮತ್ತು ವನೌಟು ರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಸಾವಿರಾರು ನಿವಾಸಿಗಳನ್ನು ಸುರಕ್ಷಿತ ತಾಣಕ್ಕೆ ಸ್ಥಳಾಂತರಿಸಲಾಗುತ್ತಿದೆ.

    ನ್ಯೂ ಕಲೆಡೊನಿಯಾ ರಾಜಧಾನಿ ನೌಮಿಯಾ ಸುತ್ತ ಭೂಕಂಪ ಭಾರಿ ಎಚ್ಚರಿಕೆ ಗಂಟೆ ಬಾರಿಸಿದೆ. 3 ಮೀಟರ್​ (10 ಅಡಿ) ಎತ್ತರದ ಸುನಾಮಿ ಅಲೆಗಳ ಅಪ್ಪಳಿಸುವಿಕೆ ಎಚ್ಚರದ ನಡುವೆಯೂ ಸ್ಥಳಾಂತರ ಕೆಲಸ ಸಾಗುತ್ತಿದ್ದು, ಕರಾವಳಿ ಪ್ರದೇಶದ ನಿವಾಸಿಗಳನ್ನು ಫ್ರೆಂಚ್​ ದೇಶದ ಕಡೆಗೆ ಸಾಗಿಸಲಾಗುತ್ತಿದೆ.

    ಕರಾವಳಿ ಪ್ರದೇಶದ ಎಲ್ಲ ಜನರು ಸಾಗರ ಚಟುವಟಿಕೆಗಳನ್ನು ಬಿಟ್ಟು ಈ ಕೂಡಲೇ ಸಮುದ್ರ ತೀರವನ್ನು ಬಿಡಬೇಕು ಮತ್ತು ಟ್ರಾಫಿಕ್​ ಜಾಮ್​ಗಳನ್ನು ನಿಯಂತ್ರಿಸಲು ಜನರು ತಮ್ಮ ಮಕ್ಕಳನ್ನು ಶಾಲೆಗೆ ಕರೆದೊಯ್ಯಬಾರದು ಎಂದು ತುರ್ತುಸೇವಾ ವಕ್ತಾರ ಅಲೆಕ್ಸಾಂಡ್ರೆ ರೊಸಿಗ್ನೋಲ್​ ಸಾರ್ವಜನಿಕ ರೇಡಿಯೋದಲ್ಲಿ ಎಚ್ಚರಿಕೆ ಘೋಷಣೆ ಕೂಗಿದ್ದಾರೆ.

    ಇದನ್ನೂ ಓದಿರಿ: ಬದುಕುವುದಕ್ಕೆ ಬೆಂಗಳೂರು ನಗರವೇ ಬೆಸ್ಟ್: ಕೇಂದ್ರ ಸರ್ಕಾರದ ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕದಲ್ಲಿ ರಾಜಧಾನಿ ಫಸ್ಟ್, ದಾವಣಗೆರೆಗೂ ಗರಿ

    ನ್ಯೂಜಿಲೆಂಡ್​ನಲ್ಲಿ ಉತ್ತರ ದ್ವೀಪದ ಕಡೆ ಹರಡಿಕೊಂಡಿರುವ ಸಮುದಾಯಗಳಿಗೆ ಸುನಾಮಿ ಅಪ್ಪಳಿಸುವ ಸಾಧ್ಯತೆ ಇದ್ದು, ಅಲ್ಲಿನ ನಿವಾಸಿಗಳು ಕೂಡಲೇ ಸ್ಥಳವನ್ನು ಖಾಲಿ ಮಾಡಲು ಎಚ್ಚರಿಕೆ ನೀಡಲಾಗಿದೆ. ಒಟ್ಟು ಮೂರು ಬಾರಿ ಒಂದೇ ಸ್ಥಳದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಮೊದಲ ಬಾರಿ 7.3, ಎರಡನೇ ಬಾರಿ 7.4 ಮತ್ತು ಮೂರನೇ ಬಾರಿ 8.1ರ ತೀವ್ರತೆ ರಿಕ್ಟರ್​ ಮಾಪಕದಲ್ಲಿ ದಾಖಲಾಗಿದೆ.

    ಯಾವುದೇ ಕಾರಣಕ್ಕೂ ಯಾರೊಬ್ಬರು ಮನೆಯಲ್ಲಿ ಉಳಿಯಬಾರದು ಎಂದು ನ್ಯೂಜಿಲೆಂಡ್​ನ ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆ ಎಚ್ಚರಿಕೆ ನೀಡಿದೆ. ಕರಾವಳಿ ಪ್ರದೇಶದಲ್ಲಿರುವ ಜನರು ತಕ್ಷಣ ಹತ್ತಿರದ ಎತ್ತರದ ಪ್ರದೇಶಗಳಿಗೆ ತೆರಳಲು ಸೂಚಿಸಿದೆ. ಹೀಗಾಗಿ ಸಾವಿರಾರು ಮಂದಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

    ಇನ್ನು ದಕ್ಷಿಣ ಪೆಸಿಫಿಕ್ ಪ್ರಬಲ ಭೂಕಂಪಗಳ ನಂತರ ಸುನಾಮಿ ಅಲೆಗಳನ್ನು ಗಮನಿಸಲಾಗಿದೆ. ನ್ಯೂಜಿಲೆಂಡ್ ಕರಾವಳಿಯಲ್ಲಿ ಬೆಳಿಗ್ಗೆ 8: 28ಕ್ಕೆ (1928 ಗುರುವಾರ ಜಿಎಂಟಿ) ಸುಮಾರು 1,000 ಕಿಲೋಮೀಟರ್ (640 ಮೈಲಿ) ಭೂಕಂಪನ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ವನೌಟು ಮತ್ತು ನ್ಯೂ ಕ್ಯಾಲೆಡೋನಿಯಾ ಅತಿದೊಡ್ಡ ಅಲೆಗಳನ್ನು ಅನುಭವಿಸುವ ಸಾಧ್ಯತೆಯಿದೆ ಎಂದು ಹೇಳಿದೆ. ಸಂಭವನೀಯ ಸುನಾಮಿ ಅಲೆಗಳು ಮೂರು ಮೀಟರ್​ವರೆಗೆ ಎತ್ತರವಿರಲಿದೆ.

    ಇದನ್ನೂ ಓದಿರಿ: ತಮ್ಮ ಮುಂದಿನ ಚಿತ್ರಕ್ಕೆ ಪೂಜಾ ಹೆಗ್ಡೆ ತೆಗೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

    ಈಗಾಗಲೇ ಸಂಭವಿಸಿರುವ ಭೂಕಂಪಗಳಿಂದಾಗಿ ಈವರೆಗೂ ಯಾವುದೇ ಸಾವು-ನೋವು ಹಾನಿ ಸಂಭವಿಸಿಲ್ಲ. ಆದರೆ, ಸುನಾಮಿ ಎಚ್ಚರಿಕೆ ಇರುವುದರಿಂದ ಮುಂದೆ ಬಹುದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನ್ಯೂಜಿಲೆಂಡ್​ ಪ್ರಧಾನಿ ಜಸಿಂಡಾ ಅರ್ಡೆರ್ನ್ ಸಹ ಜನರಲ್ಲಿ ಸುರಕ್ಷಿತ ತಾಣಕ್ಕೆ ತೆರಳಲು ಮನವಿ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​)

    ಬಾಯ್​ಫ್ರೆಂಡ್​ ಭೇಟಿಗಾಗಿ ಈಕೆ ಸೃಷ್ಟಿಸಿದ್ದು ಅಂತಿಂಥ ಕತೆಯಲ್ಲ: ಈಕೆಯ ಡ್ರಾಮಾ ನೋಡಿ ಪೊಲೀಸರೇ ಕಂಗಾಲು!

    ಡಿಕೆಡಿ ಸ್ಪರ್ಧಿಗಳ ಜತೆ ಪವರ್​ಸ್ಟಾರ್; ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಜೀ ಕನ್ನಡದಲ್ಲಿ..

    ಪ್ರವಾಹ ಫಜೀತಿ, ಕರೊನಾ ಕಾಟ; ಅರ್ಥವ್ಯವಸ್ಥೆ ಅಲುಗಾಟ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts