More

    ರೇಣುಕಾಚಾರ್ಯರ ಜಯಂತ್ಯುತ್ಸವ ಅದ್ದೂರಿ

    ಮಸ್ಕಿ: ಜಗದ್ಗುರು ರೇಣುಕಾಚಾರ್ಯರ ಜಯಂತಿ ನಿಮಿತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಾವಚಿತ್ರದ ಮೆರವಣಿಗೆ ಬುಧವಾರ ಅದ್ದೂರಿಯಾಗಿ ಜರುಗಿತು.

    ಗಚ್ಚಿನಮಠದಲ್ಲಿ ಬೆಳಗ್ಗೆ 5.30ಕ್ಕೆ ಕತೃ ಗದ್ದುಗೆಗೆ ವಿಶೇಷ ಪೂಜೆ, ರುದ್ರಾಭಿಷೇಕ ಮತ್ತು ನಾಮದ್ಫೋಷಗಳ ಕಾರ್ಯಕ್ರಮ ನಡೆದವು. ಬಳಿಕ ಪಂಚಾಚಾರ್ಯರ ಧ್ವಜಾರೋಹಣ ನೆರವೇರಿಸಲಾಯಿತು. ರೇಣುಕಾಚಾರ್ಯರ ಭಾವಚಿತ್ರಕ್ಕೆ ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಕಳಸ ಹಾಗೂ ಸಕಲ ವಾದ್ಯಗಳೊಂದಿಗೆ ಆರಂಭಗೊಂಡ ರೇಣುಕಾಚಾರ್ಯರ ಅಲಂಕೃತ ಭಾವಚಿತ್ರದ ಮೆರವಣಿಗೆ ಹಳೆ ಬಸ್‌ನಿಲ್ದಾಣ, ಅಶೋಕ ವೃತ್ತ, ಅಗಸಿ, ಮೇನ್ ಬಜಾರ, ದೈವದ ಕಟ್ಟೆ, ತೇರಬಜಾರ, ಕನಕವೃತ್ತದ ಮೂಲಕ ಸಾಗಿ ಗಚ್ಚಿನಮಠಕ್ಕೆ ತಲುಪಿತು.

    ಪ್ರಮುಖರಾದ ಮಹಾದೇವಪ್ಪಗೌಡ ಪೊ.ಪಾಟೀಲ್, ಮಲ್ಲಪ್ಪ ಕುಡತಿನಿ, ಅಪ್ಪಾಜಿಗೌಡ ಪಾಟೀಲ, ಡಾ.ಬಿ.ಎಚ್.ದಿವಟರ, ಡಾ.ಪಂಚಾಕ್ಷರಯ್ಯ ಹಿರೇಮಠ, ಸಿದ್ದಲಿಂಗಯ್ಯ ಗಚ್ಚಿನಮಠ, ಬಸಪ್ಪ ಬ್ಯಾಳಿ, ಶ್ರೀಶೈಲಪ್ಪ ಬ್ಯಾಳಿ, ಪಂಪಣ್ಣ ಗುಂಡಳ್ಳಿ, ಸಿದ್ದಲಿಂಗಯ್ಯ ಸೊಪ್ಪಿಮಠ, ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಘನಮಠದಯ್ಯ ಸಾಲಿಮಠ, ಎಂ.ಅಮರೇಶ, ದೊಡ್ಡಪ್ಪ ಬುಳ್ಳಾ, ಬಸವರಾಜ ಸ್ವಾಮಿ ಹಸಮಕಲ್, ಶರಣಬಸವ ಸೊಪ್ಪಿಮಠ, ವೀರೇಶ ಪಾಟೀಲ್, ಸೂಗಣ್ಣ ಬಾಳೆಕಾಯಿ, ಕರಿಬಸಯ್ಯ, ಸುರೇಶ ಹರಸೂರು, ಲಕ್ಷ್ಮೀಪತಿ ಶೆಟ್ಟಿ, ಆದಯ್ಯ ಸ್ವಾಮಿ ಕ್ಯಾತ್ನಟ್ಟಿ, ಮಲ್ಲಿಕಾರ್ಜುನ ನಾಯನೆಗಲಿ, ತಿಪ್ಪಯ್ಯ ಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts