More

    ನೀತಿ ಸಂಹಿತೆ ಉಲ್ಲಂಘಿಸಿದರೆ ಕಠಿಣ ಕ್ರಮ

    ಮಸ್ಕಿ: 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಈಗಾಗಲೇ ದಿನಾಂಕ ಘೊಷಣೆಯಾಗಿದ್ದು, ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡವರು ಕಟ್ಟೆಚ್ಚರ ವಹಿಸಬೇಕೆಂದು ಚುನಾವಣಾಧಿಕಾರಿ ದೇವಿಕಾ ತಿಳಿಸಿದರು.

    ಪಟ್ಟಣದ ತಹಸಿಲ್ ಕಚೇರಿಯಲ್ಲಿ ಗುರುವಾರ ಸುದ್ದಿಗೊಷ್ಠಿ ನಡೆಸಿದ ಅವರು, ಏ.13ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆ ದಿನ. 21ರಂದು ಉಮೇದುವಾರಿಕೆಗಳ ಪರಿಶೀಲಿನೆ ನಡೆಯಲಿದೆ. 24ರಂದು ನಾಮಪತ್ರ ವಾಪಸ್‌ಗೆ ಕೊನೆದಿನ. ಮೇ 10ರಂದು ಮತದಾನ, 13ಕ್ಕೆ ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದರು.

    ಕ್ಷೇತ್ರದಲ್ಲಿ ಒಟ್ಟು 207515 ಮತದಾರರಿದ್ದು, 101908 ಮಹಿಳಾ, 105600 ಪುರುಷ, 07 ಇತರೆ ಮತದಾರರಿದ್ದಾರೆ. 80 ವರ್ಷ ಮೇಲ್ಪಟ್ಟ ಮತದಾರರು 3543 ಮತ್ತು 2485 ಅಂಗವಿಕಲ ಮತದಾರರಿಗೆ ಮನೆಯಲ್ಲೇ ಹಕ್ಕುಚಲಾಯಿಸುವ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸೂಕ್ಷ್ಮ ಮತಗಟ್ಟೆ 48, ಸಾಮಾನ್ಯ 183 ಮತಗಟ್ಟೆಗಳಿವೆ ಎಂದು ಮಾಹಿತಿ ನೀಡಿದರು.

    ಎಸ್‌ಎಸ್‌ಟಿ-4, ಎಫ್‌ಎಸ್‌ಟಿ-7, ವಿಎಸ್‌ಟಿ-6, ವಿವಿಟಿ-1, ಅಂಚೆ ಮತಪತ್ರ-1, ಅಕೌಂಟಿಂಗ್-2 ತಂಡಗಳನ್ನು ರಚಿಸಲಾಗಿದೆ. ಕಂಟ್ರೋಲ್ ಮಾನಿಟರಿಂಗ್ ಸೆಲ್ 3 ತಂಡ, ಸಿಂಗಲ್ ವಿಂಡೋ ಸಿಸ್ಟಮ್ 8 ಜನ ಅಧಿಕಾರಿಗಳನ್ನು ನೇಮಿಸಲಾಗಿದೆ. ಚುನಾವಣೆ ಅಧಿಕಾರಿಗಳ ಕಚೇರಿಯನ್ನು ತಾಲೂಕು ಪಂಚಾಯಿತಿ ಕಟ್ಟಡದಲ್ಲಿ ಆರಂಭಿಸಲಾಗಿದೆ. ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಹಾಗೂ ಭದ್ರತಾ ಕೊಠಡಿ ಕೇಂದ್ರವನ್ನು ದೇವನಾಂಪ್ರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಥಾಪಿಸಲಾಗಿದ್ದು, ಅಧಿಕಾರಿಗಳಿಗೆ ಚುನಾವಣೆ ಕರ್ತವ್ಯ ನಿರ್ವಹಿಸುವ ಬಗ್ಗೆ ಕಾಲೇಜಿನಲ್ಲಿಯೇ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.
    ಸುದ್ದಿಗೋಷ್ಠಿಯಲ್ಲಿ ತಹಸೀಲ್ದಾರ್ ಅರಮನೆ ಸುಧಾ, ಗ್ರೇಡ್-2 ತಹಸೀಲ್ದಾರ್ ಷಣ್ಮುಖಪ್ಪ, ಅರುಣಕುಮಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts