More

    ಕರೊನಾ ಸೋಂಕಿತರಿಗೆ ಅಂಚೆ ಮತದಾನ ಅವಕಾಶ

    ರಾಯಚೂರು: ಮಸ್ಕಿ ವಿಧಾನಸಭೆ ಉಪ ಚುನಾವಣೆಯಲ್ಲಿ ಅಂವಿಕಲರು, 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ಕರೊನಾ ಸೋಂಕಿತರಿಗೆ ಅಂಚೆ ಮೂಲಕ ಮತ ಚಲಾಯಿಸಲು ಅವಕಾಶ ನೀಡಲಾಗಿದೆ.

    ಈ ಮೊದಲು ಸರ್ಕಾರಿ ನೌಕರರು ಮತ್ತು ಸೈನಿಕರು ಈ ಅವಕಾಶ ನೀಡುತ್ತ ಬರಲಾಗಿದ್ದು, ಇದೇ ಮೊದಲ ಬಾರಿಗೆ ಇದನ್ನು ವಿಸ್ತರಿಸಲಾಗಿದೆ. ಅಂಗವಿಕಲರು ಮತಗಟ್ಟೆಗೆ ಬರುವಾಗ ಎದುರಿಸುವ ಸಮಸ್ಯೆ ಗಮನಿಸಿ, ಕರೊನಾ ಸೋಂಕಿತರು ಮತಗಟ್ಟೆಗೆ ಬಂದಲ್ಲಿ ಮತಗಟ್ಟೆ ಸಿಬ್ಬಂದಿ ಪಿಪಿಇ ಕಿಟ್ ಧರಿಸಬೇಕಾಗುವುದನ್ನು ಮನಗಂಡು, 80 ವರ್ಷ ಮೇಲ್ಪಟ್ಟವರು ಮತಗಟ್ಟೆಗೆ ಬರಲು ಹೆಣಗಾಡುವುದನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

    ಕ್ಷೇತ್ರದ ಒಟ್ಟು 2,06 ಲಕ್ಷ ಮತದಾರರಲ್ಲಿ 70 ವರ್ಷಕ್ಕಿಂತ ಮೇಲ್ಪಟ್ಟ 3,334 ಮತದಾರರಿದ್ದಾರೆ. ಈ ಪೈಕಿ ಶೇ.40 ಮತದಾರರು 80 ವರ್ಷ ಮೇಲ್ಪಟ್ಟವರಿದ್ದಾರೆ. 2,400 ಅಂಗವಿಕಲರು, ಸೇನೆಯಲ್ಲಿ 14 ಮತದಾರರಿದ್ದಾರೆ.

    ಅಂಗವಿಕಲರು, ಹಿರಿಯ ನಾಗರಿಕರು ಮತಗಟ್ಟೆಗೂ ಆಗಮಿಸಿ ಮತದಾನ ಮಾಡಬಹುದು. ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಅಂಚೆ ಮತದಾನ ಮಾಡಬಯಸುವವರು ತಮ್ಮ ವ್ಯಾಪ್ತಿಯ ಬಿಎಲ್‌ಒಗಳಿಂದ ಅವಕಾಶ ಕೋರಿ ಅರ್ಜಿ ಸಲ್ಲಿಸಬಹುದು. ಇಲ್ಲವೇ ಆನ್‌ಲೈನ್‌ನಲ್ಲೂ ಅರ್ಜಿ ಸಲ್ಲಿಸಿ ಬ್ಯಾಲೆಟ್ ಪೇಪರ್ ಪಡೆದು, ಮತದಾನ ಮಾಡಬಹುದು. ಮತ ಎಣಿಕೆ ಒಂದು ದಿನ ಮುಂಚೆ ತಲುಪಿದ ಅಂಚೆ ಮತಗಳನ್ನು ಮಾತ್ರ ಎಣಿಕೆಗೆ ಪರಿಗಣಿಸಲಾಗುತ್ತದೆ.

    ಮತಗಟ್ಟೆಗಳಲ್ಲಿ ಹಿರಿಯ ನಾಗರಿಕರು, ಅಂಗವಿಕಲರಿಗೆ ವೀಲ್‌ಚೇರ್ ವ್ಯವಸ್ಥೆ ಮಾಡಲಾಗುವುದು. ಆದರೂ ಮತಗಟ್ಟೆಗೆ ಬರಲು ಆಗದವರು ಅಂಚೆ ಮೂಲಕ ಮತದಾನ ಮಾಡಲು ಮಸ್ಕಿ ಉಪ ಚುನಾವಣೆಯಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ. ಮತದಾನ ಯಾವ ರೀತಿ ಮಾಡಬೇಕು ಎನ್ನುವುದನ್ನು ಅವರ ವಿವೇಚನೆಗೆ ಬಿಡಲಾಗುವುದು.
    | ಶೇಖ್ ತನ್ವೀರ್ ಆಸೀಫ್ ರಾಯಚೂರು ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts