More

    ತುಟಿ ಚಲನೆಯ ಮಾಹಿತಿ ಕೊಡುವ ಫೇಸ್​ ಮಾಸ್ಕ್​!

    ನವದೆಹಲಿ: ಕೋವಿಡ್​-19 ಪಿಡುಗಿನ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಫೇಸ್​ ಮಾಸ್ಕ್​ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಬಗೆಯ ಮಾಸ್ಕ್​ಗಳಿಗೆ ವಿಶ್ವದೆಲ್ಲೆಡೆ ಭಾರಿ ಬೇಡಿಕೆ ಇದೆ.

    ಆದರೆ, ಮಾಸ್ಕ್​ ಹಾಕಿಕೊಂಡಾಗ ಆ ವ್ಯಕ್ತಿ ಮಾತನಾಡುತ್ತಿದ್ದಾನೋ, ನಗುತ್ತಿದ್ದಾನೋ ಎಂಬುದೇ ಗೊತ್ತಾಗುವುದಿಲ್ಲ. ಜನರ ಈ ಸಂಕಷ್ಟವನ್ನು ಅರ್ಥ ಮಾಡಿಕೊಂಡ ಅಮೆರಿಕದ ಕ್ಯಾಲಿಫೋರ್ನಿಯಾದ ಗೇಮ್ಸ್​ ಡೆವೆಲಪರ್​ ಟೈಲರ್​ ಗ್ಲಾಯಿಲ್​ ಧ್ವನಿನಿಯಂತ್ರಿತ ಫೇಸ್​ ಮಾಸ್ಕ್​ ಅನ್ನು ಅಭಿವೃದ್ಧಿಪಡಿಸಿದ್ದಾರೆ.

    ಈ ಮಾಸ್ಕ್​ನಲ್ಲಿ ಮಿನಿ ಕಂಪ್ಯೂಟರ್​ ಅಳವಡಿಸಿರುವ ಅವರು, ಮಾಸ್ಕ್​ನ ಹೊರಭಾಗದಲ್ಲಿ ಬಾಯಿಯಾಕಾರದ ಎಲ್​ಇಡಿ ದೀಪಗಳ ಸಾಲುಗಳನ್ನು ಅಳವಡಿಸಿದ್ದಾರೆ. ಇದನ್ನು ಧರಿಸಿರುವವರು ಮಾತನಾಡುವಾಗ ಅವರ ತುಟಿ ಚಲನೆಯನ್ನು ಆಧರಿಸಿ ಎಲ್​ಇಡಿ ಲೈಟ್​ಗಳು ಕೂಡ ಚಲಿಸುತ್ತವೆ. ನಾಲಿಗೆಯಲ್ಲಿ ಶಬ್ಧ ಮಾಡಿದರೆ, ನಗುತ್ತಿರುವ ರೀತಿಯಲ್ಲಿ ಎಲ್​ಇಡಿ ಲೈಟ್​ಗಳು ಬೆಳಗಿ, ಮಾಸ್ಕ್​ಧಾರಿ ನಗುತ್ತಿರುವುದನ್ನು ತಿಳಿಸುತ್ತವೆ.

    ಇದನ್ನೂ ಓದಿ: ಚೀನಿಯರದ್ದು ಯೋಜಿತ ದಾಳಿ; ಕರ್ನಲ್ ಸಂತೋಷ್​​ ಬಾಬು ಅವರ ಮರಣೋತ್ತರ ಪರೀಕ್ಷೆಯಲ್ಲಿ ದೃಢ

    ತುಟಿಚಲನೆಯನ್ನು ಆಧರಿಸಿ ಎಲ್​ಇಡಿ ದೀಪಗಳನ್ನು ಬೆಳಗಿಸುವ ಮಾಸ್ಕ್​ಗಳ ಬಗ್ಗೆ ಇಂಟರ್​ನೆಟ್​ನಲ್ಲಿ ತಡಕಾಡಿದೆ. ಆದರೆ, ಇಂಥ ಯಾವುದೇ ಮಾಸ್ಕ್​ಗಳು ಇಲ್ಲದಿರುವುದು ಖಚಿತಪಟ್ಟಿತು. ಆದ್ದರಿಂದ, ಅಂಥ ಒಂದು ಮಾಸ್ಕ್​ ಅನ್ನು ವಿನ್ಯಾಸಗೊಳಿಸಲು ಮುಂದಾದೆ ಎಂದು ಖಾಸಗಿ ಟಿವಿ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಟೈಲರ್​ ಹೇಳಿದ್ದಾರೆ.

    ಎಲ್​ಇಡಿ ಮ್ಯಾಟ್ರಿಕ್ಸ್​, ಸಣ್ಣದೊಂದು ಮೈಕ್ರೋಫೋನ್​, ಒಂದಷ್ಟು ವೈರ್​ಗಳು, ಕನ್ವರ್ಟರ್​, ರೆಸಿಸ್ಟರ್​ ಮತ್ತು ಕೆಪಾಸಿಟರ್​ಗಳನ್ನು ಬಳಸಿ ಮಾತನಾಡುವ ಮಾಸ್ಕ್​ ಅನ್ನು ವಿನ್ಯಾಸಗೊಳಿಸಿರುವುದಾಗಿ ಹೇಳಿದ್ದಾರೆ.

    ಈ ಮಾಹಿತಿಯನ್ನು ಬಹಿರಂಗಪಡಿಸುವ ಮೊದಲು ಒಂದು ತಿಂಗಳು ಈ ಮಾಸ್ಕ್​ ಅನ್ನು ಸ್ವತಃ ತಾವೇ ಧರಿಸಿ, ಆಮೂಲಾಗ್ರವಾಗಿ ಪರೀಕ್ಷಿಸಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ, ಈ ಆರ್ಡ್ಯುಯಿನೋ ನ್ಯಾನೋ ಎಂಬ ಪ್ರೋಗ್ರಾಮಬಲ್​ ಮೈಕ್ರೋಕಂಪ್ಯೂಟರ್​ ಆಧಾರಿತವಾದ ಈ ಮಾಸ್ಕ್​ನ ನಿರ್ಮಾಣದ ವಿವರಗಳನ್ನು ಅವರು ಪ್ರಕಟಿಸಿದ್ದಾರೆ.

    ವಿಷ ಕನ್ಯೆ| ಆಕೆಯ ತುಟಿಗೆ ಕಿಸ್​ ಕೊಟ್ಟ ವ್ಯಕ್ತಿಯ ಬದುಕೇ ಬದಲಾಗಿಬಿಟ್ಟಿತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts