More

    ಮಾಸ್ಕ್ ಧರಿಸದೆ ವಾಗ್ವಾದಕ್ಕಿಳಿದ ವೈದ್ಯ, ಕೊನೆಗೂ ಮಾಸ್ಕ್ ಧರಿಸಿ ಪೊಲೀಸರೆದುರು ವಿಚಾರಣೆಗೆ ಹಾಜರು!

    ಮಂಗಳೂರು: ಮಾಸ್ಕ್ ಧರಿಸದೆ ಕದ್ರಿ ಸೂಪರ್ ಮಾರ್ಕೆಟ್‌ಗೆ ತೆರಳಿದ್ದ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ ನಡೆಗೆ ಆಕ್ಷೇಪ ವ್ಯಕ್ತವಾಗಿದೆ. ಮಾಸ್ಕ್ ಧರಿಸದೆ ಇರುವ ಬಗ್ಗೆ ಸ್ಟೋರ್ ಮ್ಯಾನೇಜರ್ ಪ್ರಶ್ನಿಸಿದಾಗ, ‘ಸರ್ಕಾರದ ನಿರ್ಧಾರ ಮೂರ್ಖತನದ್ದು. ಸರ್ಕಾರ ಹೇಳಿದ್ದೆಲ್ಲ ನೀವು ಕೇಳ್ತೀರಾ?’ ಎಂದು ವಾದಕ್ಕಿಳಿದರು. ಈ ದೃಶ್ಯ ಜಾಲತಾಣದಲ್ಲಿ ವೈರಲ್ ಆಗಿತ್ತು. ಸ್ಟೋರ್ ಮ್ಯಾನೇಜರ್ ನೀಡಿದ ದೂರಿನಂತೆ ಡಾ.ಕಕ್ಕಿಲ್ಲಾಯ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಮಾಸ್ಕ್ ಧರಿಸಿಯೇ ಬುಧವಾರ ಠಾಣೆಗೆ ಹಾಜರಾದ ಡಾ. ಕಕ್ಕಿಲ್ಲಾಯ, ಹೇಳಿಕೆ ದಾಖಲಿಸಿದ್ದಾರೆ.

    ಮಾಸ್ಕ್ ಹಾಕಬೇಡಿ ಎಂದಿಲ್ಲ: ಈ ಬಗ್ಗೆ ‘ವಿಜಯವಾಣಿ’ ಜತೆ ಮಾತನಾಡಿದ ಡಾ.ಶ್ರೀನಿವಾಸ ಕಕ್ಕಿಲ್ಲಾಯ, ನಾನು ಜನರು ಮಾಸ್ಕ್ ಹಾಕಬಾರದು ಎಂದು ಹೇಳಿಲ್ಲ. ಸೋಂಕು ತಗಲದೆ ಇರುವವರು ಮಾತ್ರ ಧರಿಸಿದರೆ ಸಾಕು, ನಾನು ಕೋವಿಡ್ ಪಾಸಿಟಿವ್ ಆಗಿ ರೋಗ ನಿರೋಧಕ ಶಕ್ತಿ ಬಂದಾಗಿದೆ, ನನ್ನಿಂದ ಇತರರಿಗೆ ಹಬ್ಬುವುದಿಲ್ಲ ಎಂಬ ಕಾರಣಕ್ಕೆ ಧರಿಸಿಲ್ಲ. ಅದಕ್ಕೆ ವಿಧಿಸುವ ದಂಡವನ್ನು ಪಾವತಿಸುತ್ತೇನೆ ಎಂದು ಹೇಳಿದ್ದಾರೆ.

    ಡಾಕ್ಟರ್ ವರ್ತನೆಗೆ ಐಎಂಎ ಆಕ್ಷೇಪ: ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪಕ್ಕೆ ಗುರಿಯಾಗಿರುವ ಡಾ.ಕಕ್ಕಿಲ್ಲಾಯರ ವರ್ತನೆಗೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್(ಐಎಂಎ) ಮಂಗಳೂರು ಚಾಪ್ಟರ್ ಆಕ್ಷೇಪ ವ್ಯಕ್ತಪಡಿಸಿದೆ. ವಿಡಿಯೋದಲ್ಲಿ ಕಂಡುಬರುವ ಪ್ರಕಾರ, ಇದು ಮಾಸ್ಕ್ ಧರಿಸುವ ವಿಚಾರದಲ್ಲಿ ಜನತೆಯ ಹಾದಿತಪ್ಪಿಸುವ ಕೆಲಸ. ಸರ್ಕಾರದ ಮಾರ್ಗಸೂಚಿ ಉಲ್ಲಂಘನೆ. ಐಎಂಎ ಸಂಘಟನೆ ಸರ್ಕಾರದ ಕೋವಿಡ್ ನಿಯಮಗಳಿಗೆ ಬದ್ಧ. ಅದನ್ನು ಎಲ್ಲರೂ ಪಾಲಿಸಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

    ಇದನ್ನೂ ಓದಿ: ಗೆಸ್ಟ್‌ಹೌಸ್‌ನಲ್ಲಿ ಲಸಿಕೆ ಹಾಕಿಸಿಕೊಂಡು ವಿವಾದಕ್ಕೀಡಾದ ಕ್ರಿಕೆಟಿಗ ಕುಲದೀಪ್ ಯಾದವ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts