More

    ಮತ್ತೆ ಮಾಸ್ಕ್​ ಹಾಕುವ ಕಾಲ ಬಂದಿದೆ ಎಂದ ಕೇಂದ್ರ ಆರೋಗ್ಯ ಸಚಿವಾಲಯ..!

    ಬೆಂಗಳೂರು: ಚೀನಾದಲ್ಲಿ ಕೋವಿಡ್ -19 ನಿರ್ಬಂಧಗಳನ್ನು ಸಡಿಲಿಸಿದ ನಂತರ ಕರೊನಾ ವೈರಸ್ ಪ್ರಕರಣಗಳಲ್ಲಿ ಭಾರಿ ಏರಿಕೆಯಾಗುತ್ತಿದ್ದು, ಆಸ್ಪತ್ರೆಗಳು, ಸ್ಮಶಾನಗಳು ತುಂಬಿತುಳುಕುತ್ತಿವೆ. ಮುಂದಿನ 3 ತಿಂಗಳಲ್ಲಿ ಚೀನಾದ ಶೇ. 60ಕ್ಕಿಂತ ಹೆಚ್ಚು ಮತ್ತು ವಿಶ್ವದ ಜಸಂಖ್ಯೆಯ ಶೇ.10ರಷ್ಟು ಜನರು ಸೋಂಕಿಗೆ ಒಳಗಾಗುವ ಮತ್ತು ಲಕ್ಷಾಂತರ ಜನರು ಸಾವಿಗೀಡಾಗುವ ಸಾಧ್ಯತೆ ಇದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಹಾಗೂ ಆರೋಗ್ಯ ಅರ್ಥಶಾಸ್ತ್ರಜ್ಞ ಎರಿಕ್ ಪೀಗಲ್ -ಡಿಂಗ್ ಎಚ್ಚರಿಕೆ ನೀಡಿದ್ದಾರೆ.

    ಚೀನಾದಲ್ಲಿನ ಕರೊನಾ ಆರ್ಭಟ ಹಿನ್ನೆಲೆಯಲ್ಲಿ ನೆಟ್​ವರ್ಕ್ ಮೂಲಕ ಕರೊನಾ ವೈರಸ್ ರೂಪಾಂತರಗಳನ್ನು ಪತ್ತೆ ಹಚ್ಚಲು ಪಾಸಿಟಿವ್ ಪ್ರಕರಣಗಳ ಮಾದರಿಯ ಜಿನೋಮ್ ಸೀಕ್ವೆನಿಂಗ್ (ಅನುಕ್ರಮ) ಹೆಚ್ಚಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲ ರಾಜ್ಯಗಳಿಗೆ ಪತ್ರ ಬರೆದಿದೆ. ಕರೊನಾ ವೈರಸ್ ಹೊಸ ರೂಪಾಂತರಗಳನ್ನು ಗುರುತಿಸಲು ಮತ್ತು ಟ್ರಾ್ಯಕ್ ಮಾಡಲು ಜೀನೋಮ್ ಸೀಕ್ವೆನಿಂಗ್ ನಿರ್ಣಾಯಕವಾಗಿದೆ. ಅಮೆರಿಕ, ಕೊರಿಯಾ, ಬ್ರೆಜಿಲ್ ಮತ್ತು ಚೀನಾದಲ್ಲಿ ಕರೊನಾ ವೈರಸ್ ಸೋಂಕಿನ ಏಕಾಏಕಿ ಹೆಚ್ಚಳದ ಹಿನ್ನೆಲೆಯಲ್ಲಿ ಹೊಸ ರೂಪಾಂತರಗಳನ್ನು ಸಮಯೋಚಿತವಾಗಿ ಪತ್ತೆ ಹಚ್ಚಲು ಜೀನೋಮ್ ಸೀಕ್ವೆನಿಂಗ್ ಹೆಚ್ಚಿಸುವುದು ಅಗತ್ಯವಾಗಿದೆ ಎಂದು ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರದಲ್ಲಿ ತಿಳಿಸಿದ್ದಾರೆ.

    ಇದೀಗ ಕೇಂದ್ರ ಆರೋಗ್ಯ ಸಚಿವಾಲಯ ಕೆಲವು ಸೂಚನೆಗಳನ್ನು ಬಿಡುಗಡೆ ಮಾಡಿದ್ದು ಸಂಭಾವ್ಯ ರೋಗಿಗಳನ್ನು ನಾಲ್ಕು ವಿಭಾಗದಲ್ಲಿ ವಿಂಗಡಿಸಿದೆ.
    1. ಅಸಿಂಪ್ಟಮ್ಯಾಟಿಕ್​
    ಈ ರೀತಿಯ ರೋಗಿಗಳಿಗೆ ಕರೊನಾ ಪಾಸಿಟಿವ್​ ಎಂದು ಬಂದರೂ ಯಾಉದೇ ರೀತಿಯ ರೋಗಲಕ್ಷಣಗಳು ಇರುವುದಿಲ್ಲ. ಇವರು ಮನೆಯಲ್ಲೇ ಕ್ವಾರಂಟೈನ್​ ಆಗಿರಬೇಕು. ಇವರು ನೀರಿನ ಅಂಶ ಇರುವ ಆಹಾರವನ್ನೇ ಸೇವಿಸಬೇಕು ಎಂದು ತಿಳಿಸಲಾಗಿದೆ.

    2. ಮೈಲ್ಡ್​
    ಈ ರೀತಿಯ ರೋಗಿಗಳಿಗೆ ಕರೊನಾ ಪಾಸಿಟಿವ್​ ಎಂದು ಬಂದು ಜೊತೆಗೆ ಸಣ್ಣ ಪ್ರಮಾಣದಲ್ಲಿ ಕೆಮ್ಮು, ಗಂಟಲಿನಲ್ಲಿ ಕೆರೆತ, ಅಥವಾ ಉಸಿರಾಟದ ತೊಂದರೆ ಇರುತ್ತದೆ. ಇಂತಹವರು, ನಿತ್ಯವೂ ವೈದ್ಯರು ಹೇಳಿರುವ ಮಾತ್ರೆಗನ್ನು ಸೇವಿಸಬೇಕು. (ಇದು ಸಾಧಾರಣವಾಗಿ ಪ್ಯಾರಾಸಿಟಮೋಲ್​ ರೀತಿಯ ಮಾತ್ರೆ ಆಗಿರುತ್ತದೆ) ಇವರು ಆರೋಗ್ಯಕರ ಆಹಾರದ ಜೊತೆಗೆ ಹೆಚ್ಚು ನೀರಿನ ಅಂಶ ಇರುವ ಆಹಾರವನ್ನು ಸೇವಿಸಬೇಕು.

    3. ಮಾಡರೇಟ್​ ಹಾಗೂ ಸಿವೀಯರ್
    ಇವರಲ್ಲಿ ಕರೊನಾ ಪಾಸಿಟಿವ್​ ಎಂದು ಬಂದು ತೀವ್ರವಾಗಿ ರೋಗಗ್ರಸ್ಥ ಆಗಿರುತ್ತಾರೆ. ಇಂತಹವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಬೇಕು.

    ಮಾಸ್ಕ್​:
    5 ವರ್ಷ ಕೆಳಗಿನ ಮಕ್ಕಳು ಮಾಸ್ಕ್​ ಧರಿಸಬಾರದು ಎಂದು ಸಲಹೆ ನೀಡಲಾಗಿದೆ. 6-11 ವರ್ಷ ವಯಸ್ಸಿನ ಮಕ್ಕಳು ಮಾಸ್ಕ್ ಅನ್ನು ಮಗುವಿನ ಸಾಮರ್ಥ್ಯದ ಆಧಾರದ ಮೇಲೆ ಸುರಕ್ಷಿತವಾಗಿ ಮತ್ತು ಸೂಕ್ತವಾಗಿ ಪೋಷಕರ ನೇರ ಮೇಲ್ವಿಚಾರಣೆಯಲ್ಲಿ ಧರಿಸಬೇಕು. 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು ವಯಸ್ಕರಂತೆ ಮಾಸ್ಕ್​ ಧರಿಸಬೇಕು ಎಂದು ಸೂಚಿಸಲಾಗಿದೆ.

    ಮಾಸ್ಕ್​ಗಳನ್ನು ನಿರ್ವಹಿಸುವಾಗ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಅಥವಾ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ರಬ್‌ನಿಂದ ಸ್ವಚ್ಛವಾಗಿ ಇರಿಸಿಕೊಳ್ಳಬೇಕು ಎಂದೂ ಸಲಹೆ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts