More

    6ನೇ ತರಗತಿ ವಿದ್ಯಾರ್ಥಿ ರೇಪ್ ಮಾಡಿ ರಾಷ್ಟ್ರ ಕುಖ್ಯಾತಿ ಪಡೆದ ಶಿಕ್ಷಕಿಯ ದುರಂತ ಕತೆ ಇದು!

    ವಾಷಿಂಗ್ಟನ್​: ಆರನೇ ತರಗತಿ ವಿದ್ಯಾರ್ಥಿ ಜತೆ ಲೈಂಗಿಕ ಸಂಬಂಧ ಇದೆ ಎಂದು ಒಪ್ಪಿಕೊಂಡು 90ರ ದಶಕದಲ್ಲಿ ರಾಷ್ಟ್ರ ಕುಖ್ಯಾತಿ ಪಡೆದಿದ್ದ ಅಮೆರಿಕ ಸಿಯಾಟಲ್​ ನಗರದ ಮಾಧ್ಯಮಿಕ ಶಾಲಾ ಶಿಕ್ಷಕಿ ಮೇರಿ ಕೇ ಲೆಟರ್ನೌ ಮೃತಪಟ್ಟಿದ್ದಾರೆ.

    58 ವರ್ಷದ ಮೇರಿ ಕ್ಯಾನ್ಸರ್​ ವಿರುದ್ಧದ ಸುದೀರ್ಫ ಹೋರಾಟದ ನಡುವೆ ಸಾವಿಗೀಡಾಗಿರುವುದಾಗಿ ಆಕೆಯ ವಕೀಲ ಡೇವಿಡ್​ ಗೆರ್ಕೆ ಮಂಗಳವಾರ ಬಹಿರಂಗ ಪಡಿಸಿದ್ದಾರೆ. ಮೇರಿ ಕೊನೆಯ ಹಂತದ ಕ್ಯಾನ್ಸರ್​ನಿಂದ ಬಳಲುತ್ತಿದ್ದಳು ಎಂದು ತಿಳಿದುಬಂದಿದೆ.

    ಇದನ್ನೂ ಓದಿ: ಕಾನ್ಪುರ ಪೊಲೀಸರ​ ಹತ್ಯೆ ಪ್ರಕರಣ: ಆರೋಪಿ​ ವಿಕಾಸ್​ ದುಬೆ ಆಪ್ತ ಅಮರ್​ ದುಬೆ ಎನ್​ಕೌಂಟರ್​ನಲ್ಲಿ ಫಿನಿಶ್​

    ಆರನೇ ತರಗತಿ ವಿದ್ಯಾರ್ಥಿಯನ್ನು ಬಲೆಗೆ ಕೆಡವಿದ್ದ ಮೇರಿ
    ಮೇರಿ 1996ರಲ್ಲಿ ಶೊರ್​​ವೂಡ್ ಎಲೆಮೆಂಟರಿ ಶಾಲೆಯಲ್ಲಿ​ ಆರನೇ ತರಗತಿ ಶಿಕ್ಷಕಿಯಾಗಿದ್ದರು. ಈ ವೇಳೆ ಆರನೇ ತರಗತಿ ವಿದ್ಯಾರ್ಥಿ 12 ವರ್ಷದ ವಿಲಿ ಫೌಲೋ ಜತೆ ಲೈಂಗಿಕ ಸಂಬಂಧ ಹೊಂದಿರುವುದು ಬಹಿರಂಗವಾಗಿತ್ತು. ವಿದ್ಯಾರ್ಥಿಯನ್ನು ಮೇರಿ ಅತ್ಯಾಚಾರ ಮಾಡಿದ್ದಾಳೆ ಎಂಬ ಆರೋಪವು ಕೇಳಿಬಂದು, ರಾಷ್ಟ್ರವ್ಯಾಪಿ ಭಾರಿ ಸುದ್ದಿಯಾಗಿತ್ತು.

    ಬಳಿಕ 1997ರಲ್ಲಿ ನಡೆದ ಕಾನೂನಿನ ಒಪ್ಪಂದ ಪ್ರಕಾರ ವಿಲಿ ಜತೆ ಮೇರಿ ಇನ್ಮುಂದೆ ಯಾವುದೇ ಲೈಂಗಿಕ ಸಂಬಂಧ ಹೊಂದುವ ಆಗಿಲ್ಲ ಎಂದು ಹೇಳಿ, ಆಕೆಗೆ 3 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. ಶಿಕ್ಷೆಯ ಅವಧಿಯಲ್ಲೇ ಮೇರಿ ಗರ್ಭಿಣಿಯಾಗಿದ್ದಳು. ಬಳಿಕ ಆಕೆ 1998ರಲ್ಲಿ ಪೆರೋಲ್​ ಮೇಲೆ ಹೊರ ಬಂದಿದ್ದಳು. ಇದಾದ ಬೆನ್ನಲ್ಲೇ ಆಕೆಯನ್ನು ಬಿಡುಗಡೆಯು ಮಾಡಲಾಗಿತ್ತು. ಇಷ್ಟಕ್ಕೆ ಸುಮ್ಮನಾಗದ ಮೇರಿ ಮತ್ತೆ ವಿಲಿ ಜತೆ ಕಾರೊಂದರಲ್ಲಿ ಲೈಂಗಿಕ ಕ್ರಿಯೆ ನಡೆಸುವಾಗ ಸಿಕ್ಕಿಬಿದ್ದಳು. ಇದಾದ ಬೆನ್ನಲ್ಲೇ ಆಕೆಗೆ ಎರಡನೇ ಹಂತದ ಮಕ್ಕಳ ಮೇಲಿನ ಅತ್ಯಾಚಾರ ಆರೋಪದಡಿ 7 ವರ್ಷ ಕಾರಾಗೃಹ ಶಿಕ್ಷೆ ವಿಧಿಸಲಾಯಿತು.

    ಇದನ್ನೂ ಓದಿ: ಕ್ಯಾಮೆರಾಗೆ ಪೋಸ್​ ನೀಡಿ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾದ್ರು!

    ಮೇರಿ ಜೈಲಿನಲ್ಲಿರುವಾಗಲೇ ವಿಲಿಯ ಎರಡನೇ ಮಗುವಿಗೆ ಜನ್ಮ ನೀಡಿದ್ದಳು. ಈ ವೇಳೆ ವಿಲಿಗೆ 15 ವರ್ಷವು ತುಂಬಿರಲಿಲ್ಲ. ಮೇರಿ ಜೈಲಿಂದ ಬಿಡುಗಡೆ ಆಗುವಷ್ಟರಲ್ಲಿ ವಿಲಿ ವಯಸ್ಕನಾಗಿದ್ದ. ಅಲ್ಲದೆ, ಒಬ್ಬರನೊಬ್ಬರು ಭೇಟಿಯಾಗಲು ಕೋರ್ಟ್​ ಅನುಮತಿಯನ್ನು ಕೋರಿ ವಿಲಿ ಅರ್ಜಿ ಸಲ್ಲಿಸಿದ್ದ. ಅದನ್ನು ಪುರಷ್ಕರಿಸಿದ ನ್ಯಾಯಾಲಯ ಮೇರಿ ವಿರುದ್ಧದ ನಿರ್ಬಂಧಿತ ಆದೇಶವನ್ನು ಕೈಬಿಟ್ಟಿತು.

    ಬಳಿಕ ಮೇರಿ ಮತ್ತು ವಿಲಿ 2005ರಲ್ಲಿ ವಿವಾಹವಾದರು. ಆದರೆ ಅವರ ವೈವಾಹಿಕ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಮೂಲಕ 2017ರಲ್ಲಿ ವಿಲಿ, ಮೇರಿ ಸಂಬಂಧವನ್ನು ಕಡಿದುಕೊಂಡನು. ಕಾನೂನಾತ್ಮಕವಾಗಿ ಬೇರೆಯಾದರೂ ಸಹ ಇಬ್ಬರು ಒಟ್ಟಿಗೆ ಜೀವಿಸುತ್ತಿದ್ದರು. ಆಗಾಗ ಇಬ್ಬರು ಸಿಯಾಟಲ್​ ನಗರದಲ್ಲಿ ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಭೇಟಿಯಾಗುತ್ತಿದ್ದರು.

    ಹೀಗೆ ಜೀವಿಸುತ್ತಿದ್ದ ದಂಪತಿ ಕಳೆದ ವರ್ಷ ಫೆಬ್ರವರಿಯಲ್ಲಿ ಶಾಶ್ವತವಾಗಿ ಪ್ರತೇಕವಾದರು. ಆದರೂ ಇಬ್ಬರ ನಡುವೆ ಯಾವುದೇ ದ್ವೇಷ ಇರಲಿಲ್ಲ. ಆದರೆ, ಅವರಿಬ್ಬರೂ ತಮ್ಮ ಜೀವನವನ್ನು ಮುಂದುವರೆಸಲು ಮತ್ತು ಮುಂದೆ ಸಾಗಲು ಎದುರು ನೋಡುತ್ತಿದ್ದರು ಎಂದು ಕುಟುಂಬ ಮೂಲಗಳು ಆ ಸಮಯದಲ್ಲಿ ತಿಳಿಸಿತ್ತು.

    ಇದನ್ನೂ ಓದಿ: ಕರೊನಾ ಕ್ವಾರಂಟೈನ್​ಗೆ ಮನನೊಂದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

    ಇದರ ನಡುವೆ ಇತ್ತೀಚಿನ ತಿಂಗಳುಗಳಲ್ಲಿ ಮೇರಿ ಆರೋಗ್ಯ ಬದಲಾವಣೆಯಾಗಲು ಆರಂಭಿಸಿತು. ದಿಢೀರನೇ ತೂಕವನ್ನು ಕಳೆದುಕೊಂಡಿದ್ದು ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು. ನಂತರದ ದಿನಗಳಲ್ಲಿ ಆಕೆಗೆ ಕ್ಯಾನ್ಸರ್​ ಇರುವುದು ತಿಳಿಯಿತು. ಆದರೆ, ಆಗಲೇ ಸಮಯ ಮೀರಿದ್ದರಿಂದ ಬದುಕುವುದಿಲ್ಲ ಎಂಬುದು ಖಾತ್ರಿಯಾಗಿತ್ತು. ಕೊನೆಯ ದಿನಗಳಲ್ಲಿ ವಿಲಿ ಆಕೆಯ ಪಾಲನೆಯನ್ನು ಮಾಡಿದ್ದ. ಆಕೆಗೆ ಕ್ಯಾನ್ಸರ್​ ಇರುವುದನ್ನು ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲೂ ಅಪ್​ಲೋಡ್​ ಮಾಡಿದ್ದ. ಆದರೆ, ಕೊನೆಗೂ ಕ್ಯಾನ್ಸರ್​ ಮಹಾಮಾರಿಗೆ ಮೇರಿ ಅಸುನೀಗಿದ್ದಾರೆ.

    ಅಂದಹಾಗೆ ಮೇರಿಗೆ ಮೊದಲೇ ಒಂದು ಮದುವೆಯಾಗಿತ್ತು. ಮೊದಲ ಪತಿ ಸ್ಟೀವ್ ಲೆಟರ್ನೌರೊಂದಿಗೆ ಮೂರು ಮಕ್ಕಳನ್ನು ಮೇರಿ ಹೊಂದಿದ್ದಳು. ಬಳಿಕ ವಿಲಿಗೆ ಇಬ್ಬರು ಹೆಣ್ಣು ಮಕ್ಕಳು ಜನಿಸಿದವು. (ಏಜೆನ್ಸೀಸ್​)​

    ಸತ್ತಿದ್ದು ಡಿಸೆಂಬರ್‌ನಲ್ಲಿ ಮೃತದೇಹ ಬಂದಿದ್ದು ಈಗ: ಕೆಲಸಕ್ಕೆಂದು ಮಲೇಷ್ಯಾಗೆ ಹೋಗಿ ಶವವಾದ ಯುವಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts