More

    ಇನ್ನು ಪೆಟ್ರೋಲ್​ ಕಾರುಗಳು ಬರೊಲ್ಲ! ಗ್ಯಾಸ್​​ನಲ್ಲಿ ಓಡುವ ಈ ಹೊಸ ಕಾರ್​ ಕೊಡುತ್ತೆ ಅದ್ಭುತ ಮೈಲೇಜ್​…

    ಬೆಂಗಳೂರು: ಇತ್ತೀಚೆಗೆ ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ಮುಂದಿನ ಹತ್ತು ವರ್ಷಗಳಲ್ಲಿ ದೇಶದಲ್ಲಿ ಪೆಟ್ರೋಲ್​-ಡಿಸೇಲ್​ ಮೇಲೆ ಓಡುವ ವಾಹನಗಳು ಇರೊಲ್ಲ ಎಂದು ಹೇಳಿದ್ದರು. ಈಗ ದೇಶದಲ್ಲಿ ಸಿಎನ್​ಜಿ ಅಥವಾ ಕಂಪ್ರೆಸ್ಡ್​ ನ್ಯಾಚುರಲ್​​ ಗ್ಯಾಸ್​ ಮೇಲೆ ಓಡುವ ಕಾರುಗಳ ಉತ್ಪಾದನೆ ಹೆಚ್ಚಾಗಿದೆ. ದಿನೇ ದಿನೇ ಸಿಎನ್​ಜಿ ಮೇಲೆ ಓಡುವ ಕಾರುಗಳ ಪಟ್ಟಿ ಬೆಳೆಯುತ್ತಿದ್ದು ಈಗ ಮಾರುತಿ ಸುಝುಕಿ ತಯಾರು ಮಾಡಿರುವ ಹೊಸ ಕಾರು ಈ ಪಟ್ಟಿಗೆ ಸೇರಿದೆ.

    ಮಾರುತಿ ಈ ಹಿಂದೆ ಭಾರತೀಯ ಕಂಪೆನಿಯಾಗಿತ್ತು. ಕೆಲವು ವರ್ಷಗಳ ಹಿಂದೆ ಜಪಾನ್​ನ ಸುಝುಕಿ ಕಂಪೆನಿ ಮಾರುತಿಯನ್ನು ಖರೀದಿಸಿತ್ತು. ಸದ್ಯ ಭಾರತದಲ್ಲಿ ಸಿಎನ್​ಜಿ ಕಾರುಗಳನ್ನು ತಯಾರಿಸುವಲ್ಲಿ ಮಾರುತಿ ಸುಝುಕಿ ಅಗ್ರ ಸ್ಥಾನದಲ್ಲಿದೆ. ಈಗ ಇದೇ ಕಂಪೆನಿ ಸಿಎನ್​ಜಿ ಮೇಲೆ ಓಡುವ ಮತ್ತೊಂದು ಕಾರನ್ನು ತಯಾರಿಸಿದ್ದು ಮಾರುಕಟ್ಟೆಗೂ ಬಿಡುಗಡೆ ಮಾಡಿದೆ.

    ಆ ಕಾರು ಯಾವುದು ಕೇಳುತ್ತೀರಾ? ಮಾರುತಿ ಸುಝುಕಿಯ ಬಲೆನೊ ಕಾರು. ಹೌದು, ಈಗ ಕಂಪೆನಿಗಳು ತಮ್ಮ ಪ್ರಮುಖ ಕಾರು ಮಾಡಲ್​ಗಳಲ್ಲಿ ಸಿteಎನ್​ಜಿ ಇಂಜಿನ್​ ಅಳವಡಿಸಿ ಮಾರಾಟ ಮಾಡುತ್ತಿವೆ. ಅದರಂತೆಯೇ ಬಲೆನೊ ಹೆಚ್​ ಬ್ಯಾಕ್​ ಮಾದರಿಯ ಕಾರು ಈಗ ಸಿಎನ್​ಜಿಯಲ್ಲೂ ಲಭ್ಯವಿದೆ. ಅಷ್ಟೇ ಅಲ್ಲದೇ ಬಲೆನೊ ಕಾರಿನ ಡೆಲ್ಟಾ ಮತ್ತು ಜಿಟಾ ವೇರಿಯೆಂಟ್​ಗಳೂ ಸಿಎನ್​ಜಿ ಮೇಲೆ ಓಡಲು ಸಿದ್ಧವಾಗಿವೆ.

    ಡೆಲ್ಟಾ ಮತ್ತು ಜಿಟಾ ವೇರಿಯೆಂಟ್​ಗಳು ದೆಹಲಿಯ ಎಕ್ಸ್​ ಶೋರೂಂನಲ್ಲಿ 8.20 ಲಕ್ಷ ರೂ. ಅರಂಭಿಕ ಬೆಲೆ ಹೊಂದಿವೆ. ಇದರ ಟಾಪ್​ ಎಂಡ್​ ಮಾಡೆಲ್​ 9.92 ಲಕ್ಷ ರೂ. ಬೆಲೆ ಬಾಳಲಿದೆ. ಇದು ಪೆಟ್ರೋಲ್​ ಕಾರುಗಳ ಜೊತೆ ಹೋಲಿಸಿದರೆ ತುಸು ದುಬಾರಿಯೇ ಆಗಿದೆ. ಮಾರುತಿ ಸುಝುಕಿ ಕಂಪೆನಿಯ ನೆಕ್ಸಾ ಕಾರಿನ ಮಾದರಿಯಲ್ಲೇ ಬಲೆನೊ ಕಾರು ಇದೇ ಮೊದಲ ಬಾರಿಗೆ ಸಿಎನ್​ಜಿ ಎಂಜಿನ್​ನೊಂದಿಗೆ ಬಿಡುಗಡೆ ಆಗಿದೆ. ಇದು ಬಲೆನೊನ ಪೆಟ್ರೋಲ್​ ಕಾರಿಗಿಂತ 95 ಸಾವಿರ ರೂ. ಜಾಸ್ತಿ ಬೆಲೆ ಹೊಂದಿರಲಿದೆ.

    ಈ ಕಾರು 5 ಗೇರ್​ಗಳನ್ನು ಹೊಂದಿದ್ದು ಇವು ಮ್ಯಾನ್ಯುವಲ್​ ಆಗಿರುತ್ತವೆ. ಈ ಕಾರು 76 ಬಿಎಚ್​ಪಿ ಮತ್ತು 98.5 ಎನ್​ಎಂಪಿ ಟಾರ್ಕ್​ ಉತ್ಪಾದನೆ ಮಾಡುತ್ತದೆ. ಈ ಮೂಲಕ ಪ್ರತಿ ಕೆಜಿ ಸಿಎನ್​ಜಿಗೆ ಹೊಸ ಬಲೆನೊ ಕಾರು ಗರಿಷ್ಟ 30.6 ಕಿ.ಮೀ ಮೈಲೇಜ್​ ನೀಡುತ್ತದೆ.

    ಈ ಕಾರಿನ ವಿನ್ಯಾಸ ಬಹುತೇಕ ಪೆಟ್ರೋಲ್​ ಕಾರಿನಂತೆಯೆ ಇದೆ. ಹೊಸ ಕಾರಿನಲ್ಲಿ ಎಲ್​.ಇ.ಡಿ ಪ್ರೊಜೆಕ್ಟರ್​ ಹೆಡ್​ ಲ್ಯಾಂಪ್, ಆ್ಯಪಲ್​ ಕಾರ್​ ಪ್ಲೇ, 7 ಇಂಚಿನ ಇಂಪೊಟೈನ್​ ಸಿಸ್ಟಮ್​, ಆಂಡ್ರಾಯಿಡ್​ ಅಟೋ ಕನೆಕ್ಟಿವಿಟಿ, ವಾಯ್ಸ್​ ಅಸಿಸ್ಟ್​ ಮತ್ತು ಸ್ಟಾಪ್​ ಬಟನ್​ ಸೌಲಭ್ಯಗಳನ್ನು ನೀಡಿದೆ.

    ಕಾರಿನಲ್ಲಿ ಸುರಕ್ಷತೆಗಾಗಿ ಎಬಿಎಸ್​ ಜೊತೆಗೆ ಇಬಿಡಿ, ಆರು ಏರ್​ ಬ್ಯಾಗ್​ಗಳನ್ನು ನೀಡಲಾಗಿದ್ದು ರೇರ್​ವ್ಯೂ ಕ್ಯಾಮರಾ, ರೇರ್ ಪಾರ್ಕಿಂಗ್​ ಸೆನ್ಸರ್​ ಪವರ್​ ವಿಂಡೋ ನೀಡಿದೆ. ಸದ್ಯ ಭಾರತದಲ್ಲಿ ಸಿಎನ್​ಜಿ ಕಾರುಗಳ ಮಾರಾಟದಲ್ಲಿ ಮಾರುತಿ ಸುಝುಕಿ ಪ್ರಥಮ ಸ್ಥಾನ ಕಾಯ್ದುಕೊಂಡಿದ್ದು ಒಂದು ಮಿಲಿಯನ್​ಗೂ ಹೆಚ್ಚಿನ ಕಾರುಗಳನ್ನು ಮಾರಾಟ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts