More

    ಮಾರುತೇಶ್ವರ ಮೂರ್ತಿ, ಕಲಶದ ಮೆರವಣಿಗೆ

    ರಬಕವಿ/ಬನಹಟ್ಟಿ: ತಾಲೂಕಿನ ಆಸಂಗಿಯ ತೋಟದ ಭಾಗದ ಮಾರುತೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸುವ ಮೂರ್ತಿ ಮತ್ತು ಶಿಖರಕ್ಕೆ ಅಳವಡಿಸುವ ಕಲಶದ ಮೆರವಣಿಗೆ ಸಂಜೆ ಸಂಭ್ರಮದಿಂದ ನಡೆಯಿತು.

    ಬನಹಟ್ಟಿಯ ಬಿದರಿ ಕಲ್ಯಾಣ ಮಂಟಪದಿಂದ ಪ್ರಾರಂಭಗೊಂಡ ಮೆರವಣಿಗೆ ಆಸಂಗಿ ತೋಟದ ದೇವಸ್ಥಾನದವರೆಗೆ ಮುತ್ತೈದೆಯರ ಕುಂಭ ಮೇಳ, ನಾವಲಗಿಯ ಸಂಬಾಳ ವಾದನ ಸೇರಿ ಸಕಲ ವಾದ್ಯ ಮೇಳದೊಂದಿಗೆ ಸಂಭ್ರಮದಿಂದ ನಡೆಯಿತು.

    ಇದನ್ನೂ ಓದಿ: ಹೋರಾಟಗಾರರ ತ್ಯಾಗ, ಬಲಿದಾನ ಸ್ಮರಣೀಯ

    ಮಾರುತೇಶ್ವರ ಯುವಕ ಸಂಘದ ಮುಖಂಡರಾದ ದಾನೇಶ ಮೋಪಗಾರ, ಸೈಯದ ಗಡ್ಡೇಕಾರ, ಕಲ್ಮೇಶ ಭಜಂತ್ರಿ, ಈರಣ್ಣ ಚಿಂಚಖಂಡಿ, ಶಿವಾನಂದ ಗಾಯಕವಾಡ, ಅಶೋಕ ರಾವಳ, ಪಾಂಡುರಂಗ ಸಾಲ್ಗುಡೆ, ಅರುಣ ಚಲವಾದಿ, ಸಂಜಯ ಹುನಶ್ಯಾಳ, ವಿನಯ ಅಸ್ಕಿ, ಸಿದ್ದಪ್ಪ ದೂಪದಾಳ, ರವಿ ಭಜಂತ್ರಿ, ಬಸವರಾಜ ಚಿಂಚಖಂಡಿ, ಗುಂಡೇಶ ಮೋಪಗಾರ, ಕುಮಾರ ಮೋಪಗಾರ, ಶಂಕರಯ್ಯ ಬೆಣ್ಣಿ, ಈರಯ್ಯ ಬೆಣ್ಣಿ, ಜಗದೀಶ ಮಾಲೇದ, ಸಿದ್ದಪ್ಪ ಮರಡಿ, ರಂಗು ಛಲವಾದಿ, ಮಹಾಂತೇಶ ಚಿಂಚಖಂಡಿ, ಗಿರಮಲ್ಲಪ್ಪ ಅಸ್ಕಿ, ರಾಚಪ್ಪ ಚಿಂಚಖಂಡಿ, ಮಹಾದೇವ ಮೋಪಗಾರ, ರಫೀಕ ಗಡ್ಡೇಕಾರ, ವಿಲಾಸ ಅಸ್ಕಿ, ಕಾರ್ತಿಕ ಕೆಸರಗೊಪ್ಪ, ಬಂದೇನಮಾಜ ಗಡ್ಡೇಕಾರ, ಕಾಡಪ್ಪ ಮಠಪತಿ, ಬಸವಂತ ಪಾಟೀಲ, ಪ್ರವೀಣ ಭಜಂತ್ರಿ, ಕುಮಾರ ಭಜಂತ್ರಿ ಸೇರಿ ನೂರಾರು ಯವಕರು ಹಾಗೂ ಮಹಿಳಾ ಸಂಘದ ಸದಸ್ಯರು, ಹಿರಿಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts