More

    ಮದುಮಕ್ಕಳಿಗೆ ಭಾರಿ ಶಾಕ್‌- ಸಾರ್ವಜನಿಕ ಮದುವೆ ಬ್ಯಾನ್‌- ಎಲ್ಲೆಲ್ಲಿ ಗೊತ್ತಾ?

    ಬಾಗಕೋಟೆ: ಕ್ಷಣ ಕ್ಷಣಕ್ಕೂ ಆತಂಕ ಸೃಷ್ಟಿಸಿರುವ ಕರೊನಾ ವೈರಸ್‌ ಮಾಡುತ್ತಿರುವ ಆವಾಂತರಗಳು ಅಷ್ಟಿಷ್ಟಲ್ಲ. ಯಾವಾಗ, ಹೇಗೆ, ಯಾವ ರೂಪದಲ್ಲಿ ಈ ವೈರಸ್‌ ಮನುಷ್ಯನ ದೇಹವನ್ನು ಹೊಕ್ಕುತ್ತಿದೆಯೋ ತಿಳಿಯದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಸಮುದಾಯ ಮಟ್ಟದಲ್ಲಿಯೂ ವೈರಸ್‌ ಹರಡುವ ಭೀತಿ ಇನ್ನೊಂದೆಡೆ.

    ಇಲ್ಲಿಯವರೆಗೆ ಪರಿಸ್ಥಿತಿಗಳನ್ನು ಅವಲೋಕಿಸಿದಾಗ, ಮದುವೆ-ಮುಂಜಿ, ಹುಟ್ಟುಹಬ್ಬದಂಥ ಸಮಾರಂಭಗಳಿಗೆ ಹೋದವರಲ್ಲಿಯೇ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ತಿಳಿದುಬಂದಿದೆ.

    ಇದನ್ನೂ ಓದಿ: ಬಾಲ್ಯದಲ್ಲಿ ಸ್ಪ್ಯಾನಿಷ್‌ ಫ್ಲೂ , ಈಗ ಕರೊನಾ ಗೆದ್ದ 106 ವರ್ಷದ ಅಜ್ಜನ ಕಥೆಯೇ ರೋಚಕ

    ಈ ಹಿನ್ನೆಲೆಯಲ್ಲಿ, ಸದ್ಯ ಬಾಗಲಕೋಟೆ ಮತ್ತು ಕಲಬುರಗಿಯಲ್ಲಿ ಸಾರ್ವಜನಿಕ ಮದುವೆಗಳನ್ನು ಸಂಪೂರ್ಣ ಬ್ಯಾನ್‌ ಮಾಡಲಾಗಿದೆ. ಮದುವೆ ಸಮಾರಂಭಗಳಲ್ಲಿ ಭಾಗವಹಿಸಿದ ಜನರಿಗೆ ಹೆಚ್ಚಾಗಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಜನ ಸೇರುವ ಮದುವೆ ಸಮಾರಂಭಗಳಿಗೆ ಅನುಮತಿ ನೀಡದಂತೆ ಕಲಬುರಗಿ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಆದೇಶ ಹೊರಡಿಸಿದ್ದಾರೆ.

    ಈ ಕುರಿತು ಅವರು, ಕಲಬುರಗಿ ಮತ್ತು ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಒಂದು ವೇಳೆ ಮದುವೆಯಾಗಬಯಸಿದರೆ ಅಂಥವರು ಉಪನೊಂದಣಾಧಿಕಾರಿಗಳ ಕಚೇರಿಗಳಲ್ಲಿ ಮದುವೆಯನ್ನು ಮಾಡಿಕೊಂಡು ಹೋಗಲು ಅವಕಾಶ ಕಲ್ಪಿಸುವಂತೆ ಸೂಚಿಸಲಾಗಿದೆ.

    ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಈ ರೀತಿ ಇದೆ:
    ಕರೊನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರವು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೂ ನಿಯಂತ್ರಣಕ್ಕೆ ಬಾರದಿರುವುದು ಆತಂಕಕಾರಿ ಸಂಗತಿಯಾಗಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಮದುವೆ ಸಮಾರಂಭಗಳಲ್ಲಿ ಹೆಚ್ಚು ಜನ ಭಾಗವಹಿಸುತ್ತಿದ್ದಾರೆ. ಇದರ ಪರಿಣಾಮದಿಂದ ಮದುವೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರಿಗೂ ಸೋಂಕು ಹರಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆ ಕಾರಣಕ್ಕಾಗಿ ಜಿಲ್ಲೆಯಲ್ಲಿ ಇನ್ನೂ ಮುಂದೆ ಜನ ಸೇರಿಸಿ ಮದುವೆ ಸಮಾರಂಭಗಳನ್ನು ಆಚರಿಸಲು ಅನುಮತಿ ನೀಡಬಾರದು. ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ಮದುವೆ ಕಾರ್ಯಗಳನ್ನು ನಡೆಸಲು ಪರವಾನಿಗೆ ನೀಡುವಂತೆ ಸೂಚಿಸಿದೆ.

    ಇದು ಸದ್ಯ ಎರಡು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದು, ಬೇರೆ ಜಿಲ್ಲೆಗಳಿಗೂ ಬಂದರೆ ಅಚ್ಚರಿಯಿಲ್ಲ.

    ಮದುಮಕ್ಕಳಿಗೆ ಭಾರಿ ಶಾಕ್‌- ಸಾರ್ವಜನಿಕ ಮದುವೆ ಬ್ಯಾನ್‌- ಎಲ್ಲೆಲ್ಲಿ ಗೊತ್ತಾ?

    ಇಲ್ಲಿ ಪ್ಲೇಟು ಚಿನ್ನ, ಖುರ್ಚಿ ಚಿನ್ನ, ಇಡೀ ಹೋಟೆಲ್ಲೇ 24 ಕ್ಯಾರೆಟ್‌ ‌ ಚಿನ್ನ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts