More

    ಭಾರಿ ಮಳೆಗೆ ಕುಸಿದ ಮಾರ್ಪಡ್ಕ ಸೇತುವೆ

    ಸುಳ್ಯ: ಸಂಪಾಜೆಯಿಂದ ಮಾರ್ಪಡ್ಕ ಮೂಲಕ ಊರುಬೈಲಿಗೆ ಸಂಪರ್ಕ ಕಲ್ಪಿಸುವ ಮಾರ್ಪಡ್ಕ ಸೇತುವೆ ಬುಧವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕುಸಿದಿದ್ದು, ಊರುಬೈಲಿನ ಇನ್ನೂರಕ್ಕೂ ಹೆಚ್ಚು ಮನೆಗಳ ಸಂಪರ್ಕ ಕಡಿತಗೊಂಡಿದೆ.
    ಕೆಲ ವರ್ಷಗಳ ಹಿಂದೆ ಈ ಭಾಗದ ಹಳೆಯ ಸೇತುವೆ ವಿಪರೀತ ಮಳೆ ಹಾಗೂ ನೀರಿನ ರಭಸಕ್ಕೆ ಕೊಚ್ಚಿ ಹೋದ ಪರಿಣಾಮ ಎರಡು ವರ್ಷಗಳ ಹಿಂದೆ ಇಲ್ಲಿ ಹೊಸ ಸೇತುವೆ ನಿರ್ಮಾಣವಾಗಿತ್ತು. ಆದರೆ ಈಗ ಈ ಸೇತುವೆ ರಸ್ತೆಯನ್ನು ಸಂಪರ್ಕಿಸುವ ಇಕ್ಕೆಲಗಳಲ್ಲಿ ಬೃಹದಾಕಾರದ ಮರದ ದಿಮ್ಮಿಗಳು, ಕೆಸರು, ಕೊಚ್ಚೆಗಳು ಬಂದು ಸೇರಿರುವುದರಿಂದ ಹೊಸ ಸೇತುವೆಯೂ ಕುಸಿದಿದೆ. ಇಲ್ಲಿ ಸೇತುವೆ ನಿರ್ಮಾಣದ ವೇಳೆ ತಡೆಗೋಡೆಯೂ ನಿರ್ಮಾಣಗೊಂಡಿರಲಿಲ್ಲ. ಸೇತುವೆಯನ್ನು ರಸ್ತೆಯೊಂದಿಗೆ ಬೆಸೆಯುವ ಇಕ್ಕೆಲಗಳಲ್ಲಿ ಮಣ್ಣು ಸವಕಳಿ ಉಂಟಾಗಿತ್ತು. ಇದನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ಜತೆಗೆ ಅತ್ಯಂತ ಕಳಪೆ ಕಾಮಗಾರಿಯಿಂದ ನಿರ್ಮಿಸಿರುವುದೇ ಸೇತುವೆ ಕುಸಿಯಲು ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಸೇತುವೆ ಕುಸಿತವಾದ ಕಾರಣ ಇಲ್ಲಿನ ಜನರು ಇನ್ನಿಲ್ಲದ ಬವಣೆ ಪಡುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts