More

    ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ

    ಮಂಗಳೂರು : ಇತಿಹಾಸ ಪ್ರಸಿದ್ಧ ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಮಂಗಳವಾರದಿಂದ ಆರಂಭಗೊಂಡಿದೆ.


    ಮಂಗಳವಾರ ಮುಂಜಾನೆ ಉಷಾಪೂಜೆ, ಗಣಪತಿ ಹವನ, ಸಾಮೂಹಿಕ ಪ್ರಾರ್ಥನೆ, ನವಕ ಕಲಶಾಭಿಷೇಕ, ಭಜನೆ ನಡೆಯಿತು. ನಂತರ ಧ್ವಜಾರೋಹಣಗೊಂಡು ಮಧ್ಯಾಹ್ನ ಮಹಾಪೂಜೆ, ಶ್ರೀದೇವರ ಬಲಿ ನಡೆಯಿತು. ರಾತ್ರಿ ಪೂಜೆ, ಶ್ರೀಭೂತಬಲಿ, ವಸಂತಕಟ್ಟೆ ಪೂಜೆ, ಅಷ್ಠಾವಧಾನ ನೆರವೇರಿತು. ೆ.14 ಹಾಗೂ ೆ. 15ರಂದು ಬೆಳಗ್ಗಿನಿಂದ ರಾತ್ರಿಯವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ.
    ೆ.16ರಂದು ಉಷಾಪೂಜೆ, ಗಣಪತಿ ಹವನ, ಶ್ರೀ ದೇವರ ಬಲಿ, ನವಕಕಲಶಾಭಿಷೇಕ, ರಥಕಲಶ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಶ್ರೀ ದೇವರ ಬಲಿ, ರಥಾರೋಹಣ, ರಥೋತ್ಸವ, ಮಹಾ ಅನ್ನಸಂತರ್ಪಣೆ, ಸಂಜೆ 6ರಿಂದ ರಥೋತ್ಸವ, ರಥಾವರೋಹಣ, ಸೇವೆಗಳು, ನೃತ್ಯಬಲಿ, ಚೆಂಡೆ ಸುತ್ತು ಬಲಿ, ರಾತ್ರಿ 9.30ಕ್ಕೆ ಮಹಾಪೂಜೆ, ಶ್ರೀ ಭೂತಬಲಿ, ಶಯನ ನಡೆಯಲಿದೆ.


    ಉತ್ಸವದ ಪ್ರಯುಕ್ತ ಪ್ರತೀ ದಿನ ಅನ್ನಸಂತರ್ಪಣೆ, ಸಂಜೆ 6ರಿಂದ ದೀಪಾರಾಧನೆ ಮತ್ತು ವಿವಿಧ ಭಜನಾ ತಂಡಗಳಿಂದ ಭಜನಾ ಕಾರ‌್ಯಕ್ರಮ ಜರಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts