More

    ಹೊಸ ಎತ್ತರಕ್ಕೇರಿವೆ ಸೆನ್ಸೆಕ್ಸ್, ನಿಫ್ಟಿ

    ಮುಂಬೈ: ಸತತ ನಾಲ್ಕನೇ ದಿನದ ವಹಿವಾಟಿನಲ್ಲೂ ಏರಿಕೆ ದಾಖಲಿಸಿದ ಭಾರತೀಯ ಷೇರುಪೇಟೆಯ ಬಿಎಸ್​ಇ ಸೆನ್ಸೆಕ್ಸ್ ಮತ್ತು ಎನ್​ಎಸ್​ಇ ನಿಫ್ಟಿ ಸೂಚ್ಯಂಕಗಳು ಹೊಸ ಎತ್ತರಿಕ್ಕೆ ಏರಿ ಸಾರ್ವಕಾಲಿಕ ಎತ್ತರಕ್ಕೇರಿದ ದಾಖಲೆ ನಿರ್ಮಿಸಿವೆ. ಮಂಗಳವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 182 ಅಂಶ ಏರಿಕೆ ದಾಖಲಿಸಿದ್ದು, ರಿಲಯನ್ಸ್ ಇಂಡಸ್ಟ್ರೀಸ್​, ಟಿಸಿಎಸ್​, ಇನ್​ಫೋಸಿಸ್​ ಷೇರುಗಳ ಮೌಲ್ಯ ಹೆಚ್ಚಳವಾಗಿದೆ.

    ಇಂಟ್ರಾ ಡೇ ವಹಿವಾಟಿನಲ್ಲಿ ಸೆನ್ಸೆಕ್ಸ್ 45,742.23 ಅಂಶಕ್ಕೇರಿ ದಾಖಲೆ ನಿರ್ಮಿಸಿದ್ದು, ಬಳಿಕ ದಿನದ ಅಂತ್ಯದಲ್ಲಿ 181.54 ಅಂಶ ಏರಿಕೆಯೊಂದಿಗೆ 45,608.51 ಅಂಶದಲ್ಲಿ ವಹಿವಾಟು ಕೊನೆಗೊಳಿಸಿದೆ. ಇದೇ ರೀತಿ ನಿಫ್ಟಿ ಕೂಡ ಆರನೇ ದಿನ ಏರಿಕೆ ದಾಖಲಿಸಿದ್ದು, ಇಂದು 37.20 ಅಂಶ ಏರಿ 13,392.95 ಅಂಶದಲ್ಲಿ ದಿನದ ವಹಿವಾಟು ಸಂಪನ್ನಗೊಳಿಸಿದೆ. ಆರಂಭಿಕ ವಹಿವಾಟಿನಲ್ಲಿ ನಿಫ್ಟಿ 13, 435.45 ಅಂಶ ತನಕ ಏರಿಕೆ ದಾಖಲಿಸಿತ್ತು.

    ಇದನ್ನೂ ಓದಿ: ಪ್ಲೇಸ್ಟೇಷನ್ 5 ತೋರಿಸಿ ಏರ್​ ಪ್ಯೂರಿಫೈಯರ್ ಅಂದ – ಮಾರ್ತೀಯೋ ಇಲ್ಲ ನಿನ್ನೇ ಮಾರಿಬಿಡ್ಲಾ ಅಂದ್ಳು ಹೆಂಡ್ತಿ!

    ಸೆನ್ಸಕ್ಸ್​ ಪಟ್ಟಿಯಲ್ಲಿರುವ ಅಲ್ಟ್ರಾಟೆಕ್ ಸಿಮೆಂಟ್ ಟಾಪ್ ಗೇನರ್ ಆಗಿದ್ದು ಶೇಕಡ 3 ಲಾಭಾಂಶ ದಾಖಲಿಸಿದೆ. ಇದೇ ವೇಳೆ, ಟಿಸಿಎಸ್​, ರಿಲಯನ್ಸ್​ ಇಂಡಸ್ಟ್ರೀಸ್​, ಎಚ್​ಸಿಎಲ್​ ಟೆಕ್​, ಇನ್​ಫೋಸಿಸ್​, ಕೊಟಾಕ್ ಬ್ಯಾಂಕ್​ ಷೇರುಗಳು ಕೂಡ ಲಾಭ ಗಿಟ್ಟಿಸಿಕೊಂಡಿವೆ. ಇನ್ನೊಂದೆಡೆ, ಸನ್​ ಫಾರ್ಮಾ, ಇಂಡಸ್​ಇಂಡ್ ಬ್ಯಾಂಕ್​, ಎನ್​ಟಿಪಿಸಿ, ಟೆಕ್ ಮಹೀಂದ್ರಾ, ಒಎನ್​ಜಿಸಿ, ಏಷ್ಯನ್ ಪೇಂಟ್ಸ್​ ಕಂಪನಿಯ ಷೇರುಗಳು ನಷ್ಟ ಅನುಭವಿಸಿವೆ. (ಏಜೆನ್ಸೀಸ್)

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    FACT CHECK | ಪ್ರತಿಭಟನಾ ನಿರತ ರೈತರನ್ನು ಉದ್ದೇಶಿಸಿ ರಾಜನಾಥ್ ಸಿಂಗ್ ಮಾತನಾಡಿದ್ರಾ- ಏನೀ ವಿಡಿಯೋದ ಮರ್ಮ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts