More

    ಮೊದಲ ದಿನವೇ 200% ಲಾಭದೊಂದಿಗೆ ಮಾರುಕಟ್ಟೆಯಲ್ಲಿ ಸಂಚಲನ; ಸೋಲಾರ್​ ಕಂಪನಿಯ ಐಪಿಒದಲ್ಲಿ ಹೂಡಿಕೆ ಮಾಡಿದವರಿಗೆ ಹಣದ ಸುರಿಮಳೆ

    ಮುಂಬೈ: ಸೋಲಾರ್ ಕಂಪನಿ ಆಲ್ಪೆಕ್ಸ್ ಸೋಲಾರ್ ಲಿಮಿಟೆಡ್​ (Alpex Solar Ltd.) ಮೊದಲ ದಿನವೇ ಷೇರುಪೇಟೆಯಲ್ಲಿ ಸಂಚಲನ ಮೂಡಿಸಿದೆ. ಈ ಕಂಪನಿಯ ಷೇರುಗಳು ಗುರುವಾರ ಮಾರುಕಟ್ಟೆಯಲ್ಲಿ 186% ರಷ್ಟು ಭಾರಿ ಲಾಭದೊಂದಿಗೆ ಪಟ್ಟಿ ಆಗಿವೆ.

    ಹೂಡಿಕೆದಾರರು ಐಪಿಒದಲ್ಲಿ ಈ ಕಂಪನಿಯ ಷೇರುಗಳನ್ನು 115 ರೂಪಾಯಿಗೆ ಪಡೆದುಕೊಂಡಿದ್ದರು. ಗುರುವಾರ, ಫೆ. 15ರಂದು ಮಾರುಕಟ್ಟೆಯಲ್ಲಿ ಈ ಷೇರು ಲಿಸ್ಟ್ ಆಗಿದೆ. ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆಯೊಂದಿಗೆ 329 ರೂಪಾಯಿಗೆ ಈ ಷೇರು ಲಿಸ್ಟ್​ ಆಗಿರುವುದು ವಿಶೇಷ. ಈ ಮೂಲಕ ಹೂಡಿಕೆದಾರರ ಹಣವನ್ನು ಮೊದಲ ದಿನವೇ ಬಹುತೇಕ ಮೂರು ಪಟ್ಟು ಮಾಡಿದೆ. ಫೆಬ್ರವರಿ 8ರಿಂದ 12 ರವರೆಗೆ ಈ ಕಂಪನಿ ಐಪಿಒದಲ್ಲಿ ಷೇರು ಖರೀದಿಸಲು ಅವಕಾಶ ನೀಡಲಾಗಿತ್ತು. ಈ ಕಂಪನಿಯ ಐಪಿಒ 324 ಪಟ್ಟು ಚಂದಾದಾರಿಕೆಯಾಗಿತ್ತು.

    ಗುರುವಾರ ಮಾರುಕಟ್ಟೆಯಲ್ಲಿ ಅದ್ಭುತ ಪಟ್ಟಿಯಾದ ತಕ್ಷಣವೇ ಈ ಷೇರುಗಳ ಬೆಲೆ ಶೇಕಡಾ 5ರ ಅಪ್ಪರ್ ಸರ್ಕ್ಯೂಟ್‌ ಹಿಟ್​ ಆಗಿ 345.45 ರೂಪಾಯಿಗೆ ತಲುಪಿದೆ. ಈ ಮೂಲಕ ಮೊದಲ ದಿನವೇ ಈ ಕಂಪನಿಯ ಷೇರುಗಳ ಬೆಲೆ 200% ರಷ್ಟು ಹೆಚ್ಚಾಗಿದೆ.

    ಆಲ್ಪೆಕ್ಸ್ ಸೋಲಾರ್ ಕಂಪನಿಯನ್ನು ಆಗಸ್ಟ್ 1993 ರಲ್ಲಿ ಸ್ಥಾಪಿಸಲಾಗಿದೆ. ಈ ಕಂಪನಿಯು ಸೌರ ಫಲಕಗಳನ್ನು ತಯಾರಿಸುತ್ತದೆ. ಆಲ್ಪೆಕ್ಸ್ ಸೋಲಾರ್ ಮೊನೊಕ್ರಿಸ್ಟಲಿನ್ ಮತ್ತು ಪಾಲಿಕ್ರಿಸ್ಟಲಿನ್ ಸೆಲ್ ತಂತ್ರಜ್ಞಾನಗಳನ್ನು ಬಳಸುತ್ತದೆ.

    ದಿವಾಳಿ ಅಂಚಿನಲ್ಲಿದ್ದ ಅನಿಲ್​ ಅಂಬಾನಿಯ ರಿಲಯನ್ಸ್ ಕ್ಯಾಪಿಟಲ್​ ಷೇರುಗಳಿಗೆ ಬರಲಿದೆ ಡಿಮ್ಯಾಂಡು: ಈಗಷ್ಟೇ ಲಾಭ ಮಾಡಿದ ಕಂಪನಿ ಖರೀದಿಸುತ್ತಿದೆ ಹಿಂದುಜಾ ಗ್ರೂಪ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts