More

    ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದ ಕಾರಣ ತಾನೇ ಬೆಳೆದ ಐದು ಎಕರೆ ಬದನೆಗಿಡ ಕಿತ್ತಾಕಿದ ರೈತ

    ರಾಯಚೂರು: ಮಾರುಕಟ್ಟೆಯಲ್ಲಿ ಕನಿಷ್ಠ ಮಟ್ಟಕ್ಕೆ ದರ ಇಳಿದಿದ್ದರಿಂದ ರೈತನೊಬ್ಬ ಐದು ಎಕರೆ ಹೊಲದಲ್ಲಿ ಬೆಳೆದಿದ್ದ ಬದನೆಗಿಡಗಳನ್ನು ಭಾನುವಾರ ಕಿತ್ತಿ ಹಾಕಿದ್ದಾನೆ. ನಾಲ್ಕು ಲಕ್ಷ ರೂ. ಖರ್ಚು ಮಾಡಿ, ಹನಿ ನೀರಾವರಿ ಅಳವಡಿಸಿ ಬೆಳೆದ ಬೆಳೆಗೆ ಬೆಲೆ ಇಲ್ಲವಾಗಿದೆ ಎಂದು ತಾಲೂಕಿನ ಮನ್ಸಲಾಪುರ ಗ್ರಾಮದ ರೈತ ಶ್ರೀಧರ ಸಾಗರ ಕಣ್ಣೀರು ಹಾಕಿದ್ದಾರೆ.

    ಈ ಹಿಂದೆ ಮಾರುಕಟ್ಟೆಯಲ್ಲಿ ಬದನೆಕಾಯಿಯ ಪ್ರತಿ ಚೀಲಕ್ಕೆ ಸಾವಿರ ರೂ.ನಿಂದ 1,500 ರೂ.ವರೆಗೆ ಸಿಗುತ್ತಿತ್ತು. ಪ್ರಸ್ತುತ 300 ರೂ.ನಿಂದ 600 ರೂ.ವರೆಗೆ ದರ ಕುಸಿದಿದೆ. ಗಿಡಗಳಿಂದ ಬದನೆಕಾಯಿ ಕೀಳಲು ಕಾರ್ಮಿಕರ ಕೂಲಿ ಹಾಗೂ ಮಾರುಕಟ್ಟೆಗೆ ಸಾಗಣೆ ವೆಚ್ಚ ಸೇರಿಸಿದರೆ ನಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ಬದನೆ ಗಿಡಗಳನ್ನು ಕಿತ್ತು ಹಾಕಿದ್ದಾರೆ. ಲಾಕ್‌ಡೌನ್ ಸಡಲಿಕೆ ನಂತರ ತರಕಾರಿ ಬೆಲೆಗಳಲ್ಲಿ ಚೇತರಿಕೆ ಕಂಡಿದ್ದರೂ ಕೆಲದಿನಗಳಿಂದ ಬದನೆಕಾಯಿಯ ದರ ಇಳಿಮುಖವಾಗುತ್ತಾ ಸಾಗಿದೆ. ಇದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದು, ಪರ್ಯಾಯ ಬೆಳೆಗಳತ್ತ ಚಿಂತನೆ ಮಾಡುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts