More

    ಮಾರುಕಟ್ಟೆ ಸ್ಥಳಾಂತರಕ್ಕೆ ಅಡ್ಡಿ ಪಡಿಸದಿರಿ : ಶಾಸಕ ಎ. ಮಂಜುನಾಥ್ ಹೇಳಿಕೆ

    ರಾಮನಗರ : ರೈತರು ಮತ್ತು ರೀಲರ್ ಸಮುದಾಯಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಸೌಲಭ್ಯ ಕೊಡಬೇಕು ಎನ್ನುವ ಕಾರಣಕ್ಕೆ ಮಾರುಕಟ್ಟೆ ಸ್ಥಳಾಂತರಕ್ಕೆ ಮುಂದಾಗಲಾಗಿದೆ. ಆದರೆ ಕೆಲವು ನಿರುದ್ಯೋಗಿ ರಾಜಕಾರಣಿಗಳು, ಗುರು, ಗುರಿ ಏನೂ ಇಲ್ಲದೆ ಯೋಜನೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಶಾಸಕ ಎ.ಮಂಜುನಾಥ್ ಆರೋಪಿಸಿದರು.
    ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಇರುವ ಮಾರುಕಟ್ಟೆ ಹೆಚ್ಚಿನ ವಹಿವಾಟು ನಡೆಸಲು ಸಾಧ್ಯವಾಗುತ್ತಿಲ್ಲ. ರೈತರು ರೀಲರ್‌ಗಳಿಗೆ ಯಾವುದೇ ಸೌಕರ್ಯವಿಲ್ಲ, ಇಲ್ಲಿ ರೈತರ ಗೂಡು ಮತ್ತು ಗೂಡು ಮಾರಾಟ ಮಾಡಿದ ಹಣ ಎರಡೂ ಕಳ್ಳತನವಾಗುತ್ತದೆ. ಈ ಹಿನ್ನೆಲೆಯಲ್ಲಿ ಸಚಿವರು, ಸಂಸದರು, ಶಾಸಕರ ಅಭಿಪ್ರಾಯ ಸಂಗ್ರಹ ಮಾಡಿ ಲಭ್ಯವಿರುವ ಜಾಗದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಲಾಗುತ್ತಿದೆ ಎಂದರು.
    ಅಲ್ಲದೆ, ಈ ಹಿಂದೆ ರಾಜೀವ್‌ಗಾಂಧಿ ಆರೋಗ್ಯ ವಿವಿ ನಿರ್ಮಾಣದ ವೇಳೆ ರೈತರಿಂದ ಕೋರ್ಟ್‌ನಲ್ಲಿ ದಾವೆ ಹೂಡಿಸಿ ಯೋಜನೆ ವಿಳಂಬವಾಗುವಂತೆ ನೋಡಿಕೊಂಡರು, ಇದೀಗ ಈ ಯೋಜನೆಗೂ ಇದೇ ರೀತಿ ಮಾಡುವ ಪ್ರಯತ್ನದಲ್ಲಿ ಇದ್ದಾರೆ ಎಂದು ಆರೋಪಿಸಿದರು.
    ಚನ್ನಪಟ್ಟಣದ ಬಳಿ ಯೋಜನೆ ಜಾರಿಗೆ ಬಂದರೆ ರಾಮನಗರ ರೇಷ್ಮೆ ಮಾರುಕಟ್ಟೆ ಎಂದೇ ಹೆಸರಿರುತ್ತದೆ.

    ಆದರೆ ಕೆಲವರು ರಾಮನಗರ-ಚನ್ನಪಟ್ಟಣವನ್ನು ಬೇರ್ಪಪಡಿಸಲು ಹೋಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಮನಗರ- ಚನ್ನಪಟ್ಟಣ ಅವಳಿ ನಗರವಾಗುತ್ತವೆೆ. ಇಷ್ಟೆಲ್ಲ ಹೇಳುವ ಮಾರುಕಟ್ಟೆ ಸ್ಥಳಾಂತರದ ವಿರೋಧಿಗಳು ಸೂಕ್ತ ಜಾಗವನ್ನು ಗುರುತಿಸಿಕೊಡಲಿ ಎಂದು ಸವಾಲು ಹಾಕಿದರು.
    ಮುಸ್ಲಿಮರು ಮತ ಹಾಕಲಿಲ್ಲ ಎಂದು ಮಾರುಕಟ್ಟೆ ಸ್ಥಳಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಮುಸ್ಲಿಂ ಮುಖಂಡ ನಿಂತಿದ್ದಾನೆ ಎನ್ನುವ ಕಾರಣಕ್ಕೆ ಅವರದೇ ಸಮುದಾಯಕ್ಕೆ ಮತಹಾಕಿರಬಹುದು, ಆದರೆ ನಂತರ ಅನಿತಾ ಕುಮಾರಸ್ವಾಮಿ ಅವರಿಗೆ ಮುಸ್ಲಿಮರು ಮತಹಾಕಲಿಲ್ಲವೇ ಎಂದು ಎ.ಮಂಜುನಾಥ್ ಪ್ರಶ್ನೆ ಮಾಡಿದರು.

    ಈಗ ಮಾರುಕಟ್ಟೆ ವಿಚಾರದಲ್ಲಿ ನಾವು ರೀಲರ್ ಪರ ಎನ್ನುವ ಮುಖಂಡರು, ನಿಜವಾಗಲೂ ರೀಲರ್‌ಗಳು ಸಮಸ್ಯೆಗಳಿಗೆ ಸಿಲುಕಿದಾಗ ಎಲ್ಲಿ ಹೋಗಿದ್ದರು, ಅವರ ಸಮಸ್ಯೆಗೆ ಸ್ಪಂದಿಸಿದವರು ಎಚ್. ಡಿ. ಕುಮಾರಸ್ವಾಮಿ ಎಂದು ಮಂಜುನಾಥ್ ಹೇಳಿದರು.

    ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಕೆ.ರವಿ ಮಾತನಾಡಿ, ಬಂದ್‌ನಿಂದಾಗಿ ರೈತರಿಗೆ ಕೋಟ್ಯಂತರ ರೂ. ನಷ್ಟವಾಗಿದೆ. ರೈತರು ಪ್ರತಿಭಟನೆ ಮಾಡಿದಾಗ ರೀಲರ್‌ಗಳಿಗೆ ತೊಂದರೆ ಕೊಡಲಿಲ್ಲ, ಆದರೆ ರೀಲರ್‌ಗಳು ಮೂರು ಬಾರಿ ಪ್ರತಿಭಟನೆ ಮಾಡಿದಾಗಲೂ ರೈತರಿಗೆ ನಷ್ಟವಾಗಿದೆ.

    ರೈತರು ಮತ್ತು ರೀಲರ್‌ಗಳು ಸಹೋದರರಂತೆ ಇರಬೇಕು. ಗೂಡು ಮಾರಾಟಕ್ಕೆ ನಾವೆಲ್ಲಾ ದೂರದ ಊರುಗಳಿಗೆ ಹೋಗುತ್ತೇವೆ. ಪಕ್ಕದ ಊರಿಗೆ ಹೋಗಿ ಮಾರಾಟ ಮಾಡಲು ಏನು ತೊಂದರೆ ಎಂದು ಪ್ರಶ್ನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts