More

    ರಾಜಕೀಯ ಆಟದಿಂದ ದೊರೆಯದ ನೀರಿನ ಭಾಗ್ಯ

    ಮರಿಯಮ್ಮನಹಳ್ಳಿ: ರೈತ ದೇಶದ ಬೆನ್ನೆಲುಬು.. ಅನ್ನದಾತ ಎಂದು ಹೇಳಲಾಗುತ್ತದೆ. ಆದರೆ ಅನ್ನದಾತನ ಬೆನ್ನೆಲುಬು ಮುರಿಯುಲಾಗುತ್ತಿದೆ ಎಂದು ಪಟ್ಟಣದ ಅರಳಿಹಳ್ಳಿ ಗುರುಪಾದದೇವರ ಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.

    ಪಟ್ಟಣದ ನಾಣಿಕೆರೆ ವೃತ್ತದಲ್ಲಿ ಕಿಚಿಡಿ ಕೊಟ್ರೇಶ ನೇತೃತ್ವದ ವಿಜಯನಗರ ಸಮಗ್ರ ಏತನೀರಾವರಿ ಯೋಜನೆಗಾಗಿ ನಡೆಸಿರುವ ಪಾದಯಾತ್ರೆ ಪಟ್ಟಣಕ್ಕೆ ಶುಕ್ರವಾರ ಆಗಮಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ಮರಿಯಮ್ಮನಹಳ್ಳಿಯ ಜನ ತುಂಗಭದ್ರಾ ಜಲಾಶಯಕ್ಕಾಗಿ ನಾಣಿಕೆರೆ ಗ್ರಾಮವನ್ನು ತೊರೆದು ಬಂದರು. ಆದರೆ, ಗ್ರಾಮ ತ್ಯಾಗ ಮಾಡಿದ ಜನರಿಗೆ 75 ವರ್ಷಗಳಾದರೂ ನೀರಿನ ಭಾಗ್ಯ ದೊರೆತಿಲ್ಲ ಎಂದರು.

    ರೈತ ಮುಖಂಡ ಮಾಧವ ರೆಡ್ಡಿ ಮಾತನಾಡಿ, ಸಚಿವ ಆನಂದಸಿಂಗ್ ವಿಜಯನಗರ ಜಿಲ್ಲೆ ಹುಟ್ಟು ಹಾಕಿದ್ದಾರೆ ಹೊರತು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ತೊಡಗಿಸಿಕೊಂಡಿಲ್ಲ ಎಂದು ಆರೋಪಿಸಿದರು. ಪಾದಯಾತ್ರೆ ಸಂಚಾಲಕ ಕಿಚಿಡಿ ಕೊಟ್ರೇಶ್ ಮಾತನಾಡಿ, ಜನಪ್ರತಿನಿಧಿಗಳು ರಾಜಕಾರಣ ಮಾಡದೆ ಜನರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕಿದೆ ಎಂದರು.

    ಹಗರಿಬೊಮ್ಮನಹಳ್ಳಿಯ ಶ್ರೀ ಹಾಲಸಿದ್ದೇಶ್ವರ ಸ್ವಾಮಿಜಿ, ರೈತ ಮುಖಂಡರಾದ ಕಲ್ಲಾಳ ಪರಶುರಾಮ, ಕಾಳಿದಾಸ, ಗುಂಡಾಸ್ವಾಮಿ, ತಿಮ್ಮಲಾಪುರ ಪ್ರಕಾಶ, ಎನ್.ಸಚ್ಚಿದಾನಂದಶೆಟ್ಟಿ, ಎ.ರಹಿಮಾನ್, ಮುತ್ತಾವಲಿ ಫಕೃದ್ದೀನ್ ಸಾಬ್, ಮಂಜುನಾಥ ಕುರುಬ, ಸಿ.ಆರ್.ಗಾಳೇಶ, ಉಲ್ಲಾಸ, ಗುಂಡಾ ಕೃಷ್ಣ, ಹೊಳೆಗುಂದಿ ರಾಜಭಕ್ಷಿ, ಆದಿಮನಿ ಮೆಹಬೂಬ್ ಭಾಷಾ, ಸೂರಿ ಬಂಗಾರು, ಸಂದೀಪ್, ಬಣವಿಕಲ್ ಮಂಜುನಾಥ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts