More

    ಮಾ.2ರಿಂದ ಮೆರಿಟೈಮ್ ಇಂಡಿಯ ಶೃಂಗ

    ಸುರತ್ಕಲ್: ನೌಕಾಯಾನ ಮತ್ತು ಶಿಪ್ಪಿಂಗ್ ಕ್ಷೇತ್ರದ ವ್ಯಾಪಾರ ಅವಕಾಶಗಳನ್ನು ಆತ್ಮನಿರ್ಭರ ಭಾರತ ನಿರ್ಮಿಸಲು ಪೂರಕ ವಾತಾವರಣ ಕಲ್ಪಿಸುವ ಉದ್ದೇಶದಿಂದ ಮೆರಿಟೈಮ್ ಇಂಡಿಯಾ ಶೃಂಗ-2021 ದೇಶಾದ್ಯಂತ ಮಾ.2ರಿಂದ 4ರವರೆಗೆ ನಡೆಯಲಿದೆ ಎಂದು ಎನ್‌ಎಂಪಿಟಿ ಅಧ್ಯಕ್ಷ ಎ.ವಿ ಅಕ್ಕರಾಜು ತಿಳಿಸಿದರು.

    ಬೈಕಂಪಾಡಿ ಕೆನರಾ ಸಣ್ಣ ಕೈಗಾರಿಕಾ ಸಂಘದಲ್ಲಿ ಸೋಮವಾರ ಈ ಕುರಿತ ಪ್ರಚಾರ ಸಭೆಯಲ್ಲಿ ಅವರು ಮಾಹಿತಿ ನೀಡಿದರು.
    ಕೋವಿಡ್ ಹಿನ್ನೆಲೆಯಲ್ಲಿ ದೇಶಾದ್ಯಂತ ವರ್ಚುವಲ್ ಮಾದರಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ ಎಂದರು. ಶೃಂಗ ಮೂಲಕ ದೇಶದ ನೌಕಾಯಾನ ಕ್ಷೇತ್ರದಲ್ಲಿ 21.6 ಬಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ಹೂಡಿಕೆ ನಿರೀಕ್ಷೆಯಿದೆ. 80 ಸಾವಿರ ಮಂದಿ ವರ್ಚುವಲ್ ಮಾದರಿಯಲ್ಲಿ ಭಾಗವಹಿಸಲಿದ್ದಾರೆ.

    ಕ್ರೂಸ್ ಇಂಡಸ್ಟ್ರಿ (ಪ್ರಯಾಣಿಕ ಹಡಗು), ಹಸಿರು ಬಂದರು ರಫ್ತು ಆಧಾರಿತ ಬಂದರು ಅಭಿವೃದ್ಧಿ, ಡ್ರೆಜ್ಜಿಂಗ್ ಕೈಗಾರಿಕೆ ಅಭಿವೃದ್ಧಿ, ದೇಶದ 20 ಸಾವಿರ ಕಿ.ಮೀ.ಜಲಮಾರ್ಗ ಅಭಿವೃದ್ಧಿ ಬಗ್ಗೆ ವಿವಿಧ ಸೆಮಿನಾರ್ ನಡೆಯಲಿವೆ. ಬಂದರುಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿ, ಹಡಗು ನಿರ್ಮಾಣ, ದುರಸ್ತಿ, ಒಡೆಯುವುದು, ಕರಾವಳಿ ನೌಕೋದ್ಯಮ, ನೌಕಾಯಾನ ಹಣಕಾಸು ಇತ್ಯಾದಿ ಬಗ್ಗೆ ಕಾರ್ಯಾಗಾರ ನಡೆಯಲಿದೆ. ಕರ್ನಾಟಕದ ಕಾರ್ಯಾಗಾರ ಮಾ.2ರಂದು ನಡೆಯಲಿದ್ದು ರಾಜ್ಯದಲ್ಲಿ ನೌಕಾಯಾನ ಸಂಬಂಧಿ ಕ್ಷೇತ್ರದಲ್ಲಿ ಹೂಡಿಕೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೂಡಿಕೆದಾರರನ್ನು ಆಮಂತ್ರಿಸಲಿದ್ದಾರೆ ಎಂದರು.

    ಕೆನರಾ ವಾಣಿಜ್ಯ ಮಂಡಳಿ ಅಧ್ಯಕ್ಷ ಪ್ರಕಾಶ್ ಕಲ್ಬಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್‌ಎಂಪಿಟಿ ಅಧ್ಯಕ್ಷ ಕೆ.ಜಿ.ನಾಥ್, ಕೆನರಾ ಸಣ್ಣ ಕೈಗಾರಿಕಾ ಸಂಘ ಅಧ್ಯಕ್ಷ ಅಜಿತ್ ಕಾಮತ್, ಮಾಜಿ ಅಧ್ಯಕ್ಷ ಗೌರವ್ ಹೆಗ್ಡೆ ಉಪಸ್ಥಿತರಿದ್ದರು. ಕೈಗಾರಿಕೋದ್ಯಮಿಗಳ ಜತೆ ಸಂವಾದವೂ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts