More

    ಗೋವಾದಲ್ಲಿ ಗಾಂಜಾ ಬೆಳೆಯಲು ಅನುಮತಿ!

    ಪಣಜಿ : ಔಷಧ ಉದ್ದೇಶಕ್ಕಾಗಿ ಗಾಂಜಾ ಬೆಳೆಯಲು ಅನುಮತಿ ನೀಡುವ ಪ್ರಸ್ತಾಪಕ್ಕೆ ಗೋವಾ ಸರ್ಕಾರದ ಕಾನೂನು ಇಲಾಖೆ ಅನುಮೋದನೆ ನೀಡಿದೆ. ಆರೋಗ್ಯ ಇಲಾಖೆಯಿಂದಲೂ ಅನುಮತಿ ಪಡೆಯಲಾಗಿದ್ದು, ಔಷಧ ಉದ್ದೇಶಗಳಿಗಾಗಿ ಮಾತ್ರ ಗಾಂಜಾದ ನಿಯಂತ್ರಿತ ಕೃಷಿ ನಡೆಸಲು ಅನುಮತಿಸಲಾಗುತ್ತದೆ.

    ನೈಸರ್ಗಿಕ ಔಷಧ ಕಂಪನಿಗಳಿಗೆ ಮಾತ್ರ ಇದನ್ನು ಮಾರಾಟ ಮಾಡಲಾಗುತ್ತದೆ ಎಂದು ಕಾನೂನು ಸಚಿವ ನಿಲೇಶ್ ಕ್ಯಾಬ್ರಾಲ್ ಹೇಳಿದ್ದಾರೆ. ಆದರೆ ಸರ್ಕಾರದ ನಡೆಗೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಮಾದಕವಸ್ತುಗಳ ಬಳಕೆ ಹೆಚ್ಚಲಿದೆ ಎಂದು ಆತಂಕ ವ್ಯಕ್ತಪಡಿಸಿವೆ. ಬಿಜೆಪಿ ಸರ್ಕಾರ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿಯುತ್ತಿದೆ ಎಂದು ಗೋವಾ ಕಾಂಗ್ರೆಸ್ ವಕ್ತಾರ ಅಮರನಾಥ್ ಪಂಜಿಕರ್ ಟೀಕಿಸಿದ್ದಾರೆ.

    1985ರಲ್ಲಿ ನಾಕೋಟಿಕ್ಸ್ ಡ್ರಗ್ಸ್ ಆಂಡ್ ಸೈಕೋಟ್ರೋಪಿಕ್ ಸಬ್ಸೆ್ಟನ್ಸಸ್ (ಎನ್​ಡಿಪಿಎಸ್) ಅಡಿಯಲ್ಲಿ ನಿಷೇಧಿತ ವಸ್ತುಗಳ ಪಟ್ಟಿಗೆ ಗಾಂಜಾವನ್ನು ಸೇರ್ಪಡೆ ಮಾಡಲಾಗಿದೆ.

    VIDEO| ಡ್ಯಾನ್ಸಿಂಗ್​ ಕಾರು ಸೀಜ್​: ಸ್ಕಾರ್ಪಿಯೋ ನೃತ್ಯ ನೋಡಿದ್ರೆ ಹುಬ್ಬೇರಿಸೋದು ಗ್ಯಾರೆಂಟಿ..!

    ಬಿಜೆಪಿಗೆ ಸೇರ್ಪಡೆಗೊಂಡ ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್ ಎಲ್. ಶಿವರಾಮಕೃಷ್ಣನ್

    ಶಾಹೀನ್​ಬಾಗ್​ ಶೂಟರ್​ನ್ನು ಪಕ್ಷಕ್ಕೆ ಸೇರಿಸಿಕೊಂಡು ಕೆಲವೇ ಗಂಟೆಗಳಲ್ಲಿ ಉಚ್ಛಾಟಿಸಿದ ಬಿಜೆಪಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts