More

    ಸಾಸಲುವಿನಲ್ಲಿ ಸಂಭ್ರಮದ ಮಾರಿಹಬ್ಬ


    ಮಂಡ್ಯ : ಕಿಕ್ಕೇರಿ ಹೋಬಳಿಯ ಶರಣರ ಗ್ರಾಮವಾದ ಸಾಸಲುವಿನಲ್ಲಿ ಗುರುವಾರ ಮಾರಿಹಬ್ಬ ಸಂಭ್ರಮ, ಸಡಗರದಿಂದ ನೆರವೇರಿತು. ಮುಂಜಾನೆಯೇ 10 ಕಿ.ಮೀ. ದೂರದಲ್ಲಿರುವ ಹೋಬಳಿಯ ಗಾಣದಹಳ್ಳಿ ಬಳಿಯ ಹೇಮಾವತಿ ನದಿಯಿಂದ ಗಂಗೆ ತರಲಾಯಿತು.


    ಮಂಗಳವಾದ್ಯದೊಂದಿಗೆ ಗ್ರಾಮಕ್ಕೆ ಪ್ರವೇಶ ಮಾಡಲಾಯಿತು. ಕಳಸ ಹೊತ್ತ ಮಹಿಳೆಯರು ಗ್ರಾಮದ ಮಾರಿ ಅಮ್ಮನವರ ಗುಡಿ ಬಳಿಗೆ ಸಾಗಿದರು. ಪವಿತ್ರ ಗಂಗೆಯ ಕಳಸವನ್ನು ದೇವಿಯ ಮುಂದೆ ಇಟ್ಟು ಪೂಜಿಸಲಾಯಿತು. ಮಾರಮ್ಮ ದೇವಿಗೆ ಕಳಸದಿಂದ ಅಭಿಷೇಕ ನೆರವೇರಿಸಲಾಯಿತು.


    ಮಹಿಳೆಯರು ತಂಬಿಟ್ಟಿನ ಆರತಿ ಬೆಳಗಿದರು. ದೇವಿಗೆ ಅರಿಶಿಣ ಹಚ್ಚಿ, ಬೇವಿನ ಸೊಪ್ಪು ಹಾಕಿದರು. ಎಣ್ಣೆ ಮಜ್ಜನ ಮಾಡಿಸಿದರು.ದೇವಿಗೆ ಪ್ರಿಯವಾದ ಮೊಸರನ್ನ, ತಂಬಿಟ್ಟು, ಅವರೆಕಾಳು ಮತ್ತಿತರ ಧಾನ್ಯಗಳನ್ನು ನೈವೇದ್ಯವಾಗಿ ಅರ್ಪಿಸಿದರು. ಗ್ರಾಮದಲ್ಲಿ ಜನ, ಜಾನುವಾರುಗಳಿಗೆ ರೋಗರುಜಿನ ಬಾರದಂತೆ, ಸಕಾಲಕ್ಕೆ ಮಳೆ ಬರಲಿ, ಸಮೃದ್ಧಿಯಾಗಿ ಬೆಳೆ ಬೆಳೆಯಲಿ ಎಂದು ಪ್ರಾರ್ಥಿಸಿದರು.


    ಗ್ರಾಮವನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ವಿವಿಧ ರಂಗವಲ್ಲಿಗಳಿಂದ ಅಲಂಕರಿಸಲಾಗಿತ್ತು. ಇಡೀ ಗ್ರಾಮದ ಜನತೆ ಸಾಮರಸ್ಯದಿಂದ ಭಾಗವಹಿಸಿ ಹಬ್ಬದಲ್ಲಿ ಮಳೆ, ಬೆಳೆಗಾಗಿ ವಿಶೇಷವಾಗಿ ಪಂಜಿನ ಆರತಿಯೊಂದಿಗೆ ಮೊರೆ ಇಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts