More

    ಈ ಕಟ್ಟಡದ ಮೇಲೆ ಡ್ಯಾನ್ಸ್​ ಮಾಡಿ ಇಕ್ಕಟ್ಟಿಗೆ ಸಿಲುಕಿದ ಮರಾಠಿ ಕಲಾವಿದೆ!

    ಪುಣೆ: ಮರಾಠಿಯ ಖ್ಯಾತ ಡ್ಯಾನ್ಸರ್ ಸದ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕೆ ಕಾರಣ ಅವರು ಡ್ಯಾನ್ಸ್​ ಮಾಡಿದ್ದ ಕಟ್ಟಡವಾಗಿದೆ. ಲವಾಣಿ ನೃತ್ಯಗಾರ್ತಿಯಾಗಿರುವ ವೈಷ್ಣವಿ ಪಾಟೀಲ್​​ ವಿರುದ್ಧ ಪ್ರಕರಣ ದಾಖಲಾಗಿದೆ.
    ​​
    ನೃತ್ಯ ಮಾಡಿದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದೇ ಈಕೆಗೆ ಮುಳುವಾಗಿದೆ. ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಈಕೆಯ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.

    ಅಂದಹಾಗೆ…. ಡ್ಯಾನ್ಸ್​ ಮಾಡಿದ್ದಕ್ಕೇ ಈಕೆ ವಿರುದ್ಧ ಪ್ರಕರಣ ದಾಖಲಾಗಲು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ಈ ಕಾಲವಿದೆ ನೃತ್ಯ ಮಾಡಿರುವುದು ಅಂತಿಂತಹ ಕಟ್ಟಡವಲ್ಲ. ಅದು ಮಹಾರಾಜ ಛತ್ರಪತಿ ಶಿವಾಜಿ ಅವರ ಕಾಲದಲ್ಲಿ ನಿರ್ಮಾಣವಾದ ಭವ್ಯ ಸ್ಮಾರಕವಾಗಿದೆ. ಅಲ್ಲದೇ ಇದೇ ಕಟ್ಟಡದಲ್ಲಿ ಶಿವಾಜಿ ಮಹಾರಾಜರು, ಹಲವು ವರ್ಷಗಳ ಕಾಲ ಕಳೆದಿದ್ದರು ಎನ್ನಲಾಗಿದೆ.

    ಅಂದರೆ.. ಈ ಕಟ್ಟಡ ಶಿವಾಜಿ ಮಹಾರಾಜರ ಕಾಲದ ಕಟ್ಟಡವಾಗಿದೆ. ಹಾಗಾಗಿ ಇದರ ಮೇಲೆ ಹತ್ತಿ ಡ್ಯಾನ್ಸ್​ ಮಾಡಿ ನೃತ್ಯ ಮಾಡಿರುವುದು ಕಾನೂನು ಉಲ್ಲಂಘನೆಯಾಗಲಿದೆ. ಇದು ಗೊತ್ತಿದ್ದೂ ಈ ಕಲಾವಿದೆ ನೃತ್ಯ ಮಾಡಿದ್ದಾರೆ. ಐತಿಹಾಸಿಕ ಸ್ಮಾರಕವನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಈಕೆ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

    ಲಾಲ್​ ಮಹಲ್​ ಎಂದೇ ಕರೆಯಲಾಗುವ ಈ ಕಟ್ಟಡವನ್ನು ಅಂದು ಶಿವಾಜಿ ಮಹಾರಾಜರು ಯಾವ ರೀತಿ ಕಟ್ಟಿಸಿದ್ದರೋ ಅದೇ ಮಾದರಿಯಲ್ಲಿ ವಿನ್ಯಾಸಗೊಳಿಸಿ, ಇದನ್ನು ಇಂದಿಗೂ ಸುರಕ್ಷಿತವಾಗಿ ಇಡಲಾಗಿದೆ. ಅಂದು ಇದು ಶಿವಾಜಿ ಮಹಾರಾಜರ ಅರಮನೆಯಾಗಿತ್ತು. (ಏಜೆನ್ಸೀಸ್​)

    ಕಾಂಗ್ರೆಸ್​ ನಾಯಕ ನವಜೋತ್​ ಸಿಂಗ್​​ ಸಿಧು ಜೈಲಿನಲ್ಲಿ ಮೊದಲ ದಿನ ಕಳೆದಿದ್ದು ಹೀಗೆ: ಖೈದಿ ಸಂಖ್ಯೆ 241383

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts