More

    ಮರಾಠ ನಿಗಮ ವಿವಾದ: ಕರ್ನಾಟಕ ಬಂದ್ ಪರಿಣಾಮ ಹೇಗಿದೆ?

    ಬೆಂಗಳೂರು: ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಇಂದಿನ ಕರ್ನಾಟಕ ಬಂದ್​ ಶುರುವಾಗಿದ್ದು, ಬಹುತೇಕ ಭಾಗಶಃ ಬಂದ್ ಆಗುವ ಸಾಧ್ಯತೆ ಇದೆ. ಕರೊನಾ ಲಾಕ್​ಡೌನ್ ನಿಂದ ನಷ್ಟದಲ್ಲಿರುವ ವ್ಯಾಪಾರಸ್ಥರು, ಕೂಲಿಕಾರ್ವಿುಕರು ಬಂದ್ ನಲ್ಲಿ ಭಾಗವಹಿಸಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಬೆಳಗ್ಗೆಯೇ ಎಂದಿನಂತೆ ಜನರ ನಿತ್ಯ ಬದುಕು ಪ್ರಾರಂಭವಾಗಿದೆ. ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳು ರಸ್ತೆಗೆ ಇಳಿದಿವೆ. ಬೆಳಗ್ಗೆ ನಡೆಯುವ ವ್ಯಾಪಾರ ವಹಿವಾಟುಗಳು ರಾಜಧಾನಿಯಲ್ಲಿ ಆರಂಭವಾಗಿವೆ. ಕೆಎಸ್​ಆರ್​ಟಿಸಿ, ಬಿಎಂಟಿಸಿ, ನಗರ ಸಾರಿಗೆ, ರೈಲು ಎಂದಿನಂತೆ ಸಂಚರಿಸಲು ನಿರ್ಧರಿಸಿವೆ. ಸರ್ಕಾರಿ ಕಚೇರಿಗಳು, ಬಹುತೇಕ ಖಾಸಗಿ ಸಂಸ್ಥೆಗಳು ಕೆಲಸ ನಿರ್ವಹಿಸಲಿವೆ.

    ಈ ಸೇವೆಗಳಿಗೆ ಅಡ್ಡಿ ಇಲ್ಲ

    ವೈದ್ಯಕೀಯ ಸೇವೆ, ಔಷಧ ಅಂಗಡಿ, ಆಂಬುಲೆನ್ಸ್ ಸೇವೆ,
    ಹಾಲು, ತರಕಾರಿ, ದಿನಪತ್ರಿಕೆ, ಮದ್ಯದ ಅಂಗಡಿ, ಕೆಎಸ್
    ಆರ್​ಟಿಸಿ, ಬಿಎಂಟಿಸಿ ಬಸ್, ರೈಲು, ಮೆಟ್ರೋ

    ಇವುಗಳು ಅನುಮಾನ

    ಹೋಟೆಲ್, ವಾಣಿಜ್ಯ ಮಳಿಗೆ, ಚಿಲ್ಲರೆ ಅಂಗಡಿ, ಆಟೋ, ಕ್ಯಾಬ್ ಸೇವೆ. ಆದಾಗ್ಯೂ, ಮುಖ್ಯರಸ್ತೆ ಬಿಟ್ಟು ಉಳಿದ ಪ್ರದೇಶದಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯುವ ನಿರೀಕ್ಷೆ ಇದೆ.

    ಆಪ್ ಆಧಾರಿತ ಕ್ಯಾಬ್, ಆಟೋ ಚಾಲಕರು ಗೊಂದಲದಲ್ಲಿದ್ದಾರೆ. ಇದರ ನಡುವೆ ಪೊಲೀಸರು ರಾಜ್ಯವ್ಯಾಪಿ ಭದ್ರತೆ ಕೈಗೊಂಡಿದ್ದಾರೆ. ಅತ್ತ, ಬಂದ್ ವೇಳೆ ಸಾರ್ವಜನಿಕ ಆಸ್ತಿಗೆ ನಷ್ಟ ಉಂಟು ಮಾಡಿದರೆ ಆಯೋಜಕರಿಂದಲೇ ವಸೂಲಿ ಮಾಡುವಂತೆ ಹೈಕೋರ್ಟ್ ಸೂಚನೆ ಕೊಟ್ಟಿದೆ. ಒಟ್ಟಾರೆ ಕರ್ನಾಟಕ ಬಂದ್ ಆಗದಿದ್ದರೂ ಜನತೆಗೆ ಪ್ರತಿಭಟನೆಯ ಬಿಸಿ ತಟ್ಟುವುದಂತೂ ಖಚಿತವೆನಿಸುತ್ತಿದೆ.

    ಇದನ್ನೂ ಓದಿ: ಜನರಿಗೆ ತೊಂದರೆಯಾಗದಿರಲಿ; ಪ್ರತಿಭಟನೆಯ ಹಕ್ಕು ಚೌಕಟ್ಟು ಮೀರಬಾರದು…

    ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ. ನಾರಾಯಣಗೌಡ ಬಣ ಬಂದ್​ಗೆ ಬೆಂಬಲ ಸೂಚಿಸಿದ್ದರೆ ಪ್ರವೀಣ್ ಶೆಟ್ಟಿ ಬಣ ನೈತಿಕ ಬೆಂಬಲ ಮಾತ್ರ ನೀಡಿದೆ. ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಶನಿವಾರ ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಬಂದ್​ಗೆ ಕರೆ ನೀಡಿದ್ದಾರೆ. ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಪುರಭವನದಿಂದ ಫ್ರೀಡಂ ಪಾರ್ಕ್​ವರೆಗೆ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಂಡಿದ್ದಾರೆ. ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ನೇತೃತ್ವದ ತಂಡ ರೈಲು ನಿಲ್ದಾಣ, ವಿಮಾನ ನಿಲ್ದಾಣದ ಬಳಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಕರವೇ ಪ್ರವೀಣ್ ಶೆಟ್ಟಿ ಬಣ ಮೇಖ್ರಿ ಸರ್ಕಲ್​ನಿಂದ ಆನಂದರಾವ್ ಸರ್ಕಲ್ ಗಾಂಧಿ ಪ್ರತಿಮೆವರೆಗೆ ರ‍್ಯಾಲಿ ನಡೆಸಲಿದೆ.

    ಜಿಲ್ಲೆಗಳ ಸ್ಥಿತಿಗತಿ: ಕನ್ನಡಪರ ಒಕ್ಕೂಟಗಳ ಸಂಘಟನೆ ನೀಡಿರುವ ಕರ್ನಾಟಕ ಬಂದ್ ಕರೆಗೆ ಜಿಲ್ಲೆಗಳಲ್ಲೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದಾಗ್ಯೂ, ಕೆಲವು ಕಡೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬೀದಿಗೆ ಇಳಿದು ಪ್ರತಿಭಟನೆ ಆರಂಭಿಸಿದ್ದಾರೆ. ರಾಜ್ಯಾದ್ಯಂತ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಬಸ್​ ಸಂಚಾರ ಮತ್ತು ವ್ಯಾಪಾರ ವಹಿವಾಟು ಆರಂಭವಾಗಿವೆ.

    ನಾಳೆ ಬಂದ್​ಗೆ ಕರೆ ಕೊಟ್ಟವರಿಗೆ ಶಾಕ್ ಕೊಟ್ಟ ಹೈಕೋರ್ಟ್..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts