More

    600 ಚಿತ್ರಮಂದಿರಗಳು, ಮೂರು ವಾರ … ಮೋಹನ್​ ಲಾಲ್​ಗಿಲ್ಲ ಪ್ರತಿಸ್ಪರ್ಧಿಗಳು

    ತಿರುವನಂತಪುರಂ: ಮೋಹನ್​ ಲಾಲ್​ ಅಭಿನಯದ ‘ಮರಕ್ಕರ್​ – ಅರಬ್ಬಿಕಡಲಿಂಟೆ ಸಿಂಹಂ’ ಚಿತ್ರ ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಕಳೆದ ವರ್ಷ ಮಾರ್ಚ್​ 20ರಂದು ಚಿತ್ರ ಬಿಡುಗಡೆ ಎಂದು ಘೋಷಣೆಯಾಗಿ, ಲಾಲ್​ ಅವರ ಅಭಿಮಾನಿಗಳೆಲ್ಲ ಚಿತ್ರ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾಗ, ಲಾಕ್​ಡೌನ್​ ಘೋಷಣೆಯಾಯಿತು. ಅದಾಗಿ ಒಂದು ವರ್ಷವಾದರೂ ಚಿತ್ರ ಬಿಡುಗಡೆಯಾಗಲಿಲ್ಲ.

    ಇದನ್ನೂ ಓದಿ: ‘ಸಖತ್’ ನಿರ್ಮಾಪಕರಿಂದ ಹೊಸ ಸಿನಿಮಾ; ಮಾಸ್ ಕಮರ್ಷಿಯಲ್ ಚಿತ್ರದಲ್ಲಿ ನಿಖಿಲ್​ ಕುಮಾರಸ್ವಾಮಿ

    ಇದೀಗ ‘ಮರಕ್ಕರ್​’ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಓಣಂ ಸಂದರ್ಭದಲ್ಲಿ ಆಗಸ್ಟ್​ 12ರಂದು ಚಿತ್ರ ಬಿಡುಗಡೆಯಾಗುತ್ತಿದೆ. ವಿಶೇಷವೆಂದರೆ, ಈ ಚಿತ್ರವು ಕೇರಳದ ಎಲ್ಲ ಚಿತ್ರಮಂದಿರಗಳಲ್ಲೂ ಬಿಡುಗಡೆಯಾಗಲಿದ್ದು, ಮೂರು ವಾರಗಳ ಕಾಲ ಬೇರೆ ಯಾವ ಚಿತ್ರಗಳನ್ನೂ ಬಿಡುಗಡೆ ಮಾಡುವಂತಿಲ್ಲ ಎಂಬುದು ವಿಶೇಷ.

    ಈ ಕುರಿತು ಕೇರಳ ನಿರ್ಮಾಪಕರ ಮತ್ತು ಪ್ರದರ್ಶಕರ ಸಂಘಗಳ ನಡುವೆ ಮೌಕಿಕ ಒಪ್ಪಂದವಾಗಿದ್ದು, ಮೂರು ವಾರಗಳ ಕಾಲ ಬೇರೆ ಯಾವುದೇ ಚಿತ್ರವೂ ಬಿಡುಗಡೆಯಾಗದಂತೆ ನೋಡಿಕೊಳ್ಳಲಾಗಿದೆ. ಇದರಿಂದ ಬೇರೆ ನಿರ್ಮಾಪಕರಿಗೆ ತೊಂದರೆಯಾಗುವುದಿಲ್ಲವಾ? ಎಂಬ ಪ್ರಶ್ನೆ ಸಹಜ. ವಿಷಯವೇನೆಂದರೆ, ‘ಮರಕ್ಕರ್​’ ಬಹುಕೋಟಿ ವೆಚ್ಚದ ಚಿತ್ರ. ಮೇಲಾಗಿ, ಒಂದೂವರೆ ವರ್ಷಗಳ ಹಿಂದೆಯೇ ಬಿಡುಗಡೆಯಾಗಬೇಕಿತ್ತು. ಆದರೆ, ಲಾಕ್​ಡೌನ್​ನಿಂದ ತಡವಾಗಿದ್ದರಿಂದ, ಚಿತ್ರತಂಡದವರಿಗೆ ಸಾಕಷ್ಟು ನಷ್ಟವಾಗಿದೆ. ನಿರ್ಮಾಪಕರನ್ನು ಉಳಿಸುವ ನಿಟ್ಟಿನಲ್ಲಿ ಇಂಥದ್ದೊಂದು ಕ್ರಮ ಕೈಗೊಳ್ಳಲಾಗಿದೆಯಂತೆ. ಸದ್ಯಕ್ಕೆ ಈ ಬಗ್ಗೆ ಯಾರೂ ಆಕ್ಷೇಪ ವ್ಯಕ್ತಪಡಿಸಿಲ್ಲವಾದ್ದರಿಂದ, ಚಿತ್ರವು ಮೂರು ವಾರಗಳ ಕಾಲ ಕೇರಳದ ಎಲ್ಲ ಚಿತ್ರಮಂದಿರಗಳಲ್ಲೂ ಅವ್ಯಾಹತವಾಗಿ ಪ್ರದರ್ಶನ ಕಾಣಲಿದೆ.

    ಇದನ್ನೂ ಓದಿ: ಕಗ್ಗಂಟಾಯಿತು ‘ಬೆಲ್​ ಬಾಟಂ’ ಬಿಡುಗಡೆ ವಿವಾದ … ಪರಿಹಾರ ಏನು?

    ‘ಮರಕ್ಕರ್​ – ಅರಬ್ಬಿಕಡಲಿಂಟೆ ಸಿಂಹಂ’ ಚಿತ್ರವನ್ನು ಮೋಹನ್​ ಲಾಲ್​ ಆಪ್ತ ಆಂಟೋನಿ ಪೆರುಂಬವೂರ್​ ನಿರ್ಮಿಸಿದ್ದು, ಪ್ರಿಯದರ್ಶನ್​ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಲಾಲ್​ ಜತೆಗೆ ಅರ್ಜುನ್​ ಸರ್ಜಾ, ಮಂಜು ವಾರಿಯರ್, ಸುನೀಲ್​ ಶೆಟ್ಟಿ, ಸುಹಾಸಿನಿ, ಕೀರ್ತಿ ಸುರೇಶ್​, ನೆಡುಮುಡಿ ವೇಣು ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಈ ಚಿತ್ರವು ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಚಿತ್ರ, ಅತ್ಯುತ್ತಮ ಸ್ಪೆಷಲ್​ ಎಫೆಕ್ಟ್ಸ್​ ಮತ್ತು ಅತ್ಯುತ್ತಮ ವಸ್ತ್ರವಿನ್ಯಾಸ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

    ನನಗಿಂತ ಚೆನ್ನಾಗಿ ನಿರ್ದೇಶನ ಮಾಡುವವರು ಇನ್ನೊಬ್ಬರು ಸಿಗುವುದಿಲ್ಲ: ಕಂಗನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts