More

    ಭಾಷಾಭಿಮಾನದಿಂದ ಕನ್ನಡ ಉಳಿಯಲು ಸಾಧ್ಯ

    ಮಾನ್ವಿ: ರಾಜ್ಯ ಸರ್ಕಾರ ಗಡಿ ಭಾಗದಲ್ಲಿ ಕನ್ನಡ ಭಾಷೆ ಸಂಸ್ಕೃತಿ ಉಳಿಯಲು ಉತ್ತಮ ಯೋಜನೆಗಳನ್ನು ರೂಪಿಸಬೇಕು ಎಂದು ಜನಸೇವಾ ಗ್ರಾಮೀಣಾಭಿವೃದ್ದಿ ಸಂಸ್ಥೆ ಅಧ್ಯಕ್ಷ ಬಸವರಾಜ ನಕ್ಕುಂದಿ ಹೇಳಿದರು.

    ತಾಲೂಕಿನ ದದ್ದಲ್ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ಜನಸೇವಾ ಗ್ರಾಮೀಣಾಭಿವೃದ್ದಿ ಸಂಸ್ಥೆ ನಕ್ಕುಂದಿ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ ಬೆಂಗಳೂರು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗಡಿನಾಡು ಕಲೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ವಿವಿಧ ಭಾಷಿಕರು ಇರುವ ಗಡಿ ಭಾಗದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಸಂಸ್ಥೆಯ ವತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ ಗಡಿ ಭಾಗದಲ್ಲಿ ಕನ್ನಡ ಭಾಷೆ ಉಳಿಸಲು ಮುಂದಾಗಬೇಕು. ಸರ್ಕಾರ ಗಡಿಯಲ್ಲಿನ ಕನ್ನಡ ಶಾಲೆಗಳ ಅಭಿವೃದ್ದಿ ಹಾಗೂ ಶಿಕ್ಷಕರ ಕೊರತೆಯನ್ನು ನಿವಾರಿಸಿ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಬೇಕು ಎಂದರು.

    ಸುಗಮ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಅಮರೇಶ ಗವಾಯಿ, ಭರತನಾಟ್ಯ ಚೈತನ್ಯ, ಶಾಸ್ತ್ರೀಯ ಸಂಗೀತ ನವೀನ್ ರವೀಂದ್ರರಾವ್, ಜನಪದ ಸಂಗೀತ ಶಾಂತ ಬಲ್ಲಟ್ಟಗಿ, ತಬಲವಾದಕ ರಘುಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಮುಖರಾದ ಯಲ್ಲಪ್ಪ ಬಾದರದಿನ್ನಿ, ಅಯ್ಯನಗೌಡ, ಮೌನೇಶ್ ದದ್ದಲ್, ಸಾದಪೂರ್ ಗ್ರಾಪಂ ಅಧ್ಯಕ್ಷ ಹನುಮಂತ ದೊಡ್ಡಮನಿ, ಪಿಡಿಒ ಶಿವಗೇನಿ ನಾಯಕ, ಗ್ರಾಪಂ ಸದಸ್ಯರಾದ ತಾಯಮ್ಮ, ಭಾಗೀರಥಿ, ಮಹಾದೇವಿ, ಸರ್ಕಾರಿ ಶಾಲೆಯ ಮುಖ್ಯ ಗುರುಗಳಾದ ವಿದ್ಯಾರಣ್ಯ ಕಳಸ, ಅಮ್ಮಣ್ಣ, ರಾಚಯ್ಯ, ರವೀಂದ್ರ, ಸಿದ್ದಣ್ಣ, ಹುಲಿಗಯ್ಯ, ಈರಪ್ಪ, ದೇವೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts