More

    ಮಹಿಳೆಯರಿಗೆ ಪ್ರೋತ್ಸಾಹ ಅಗತ್ಯ- ಮಾನ್ವಿ ತಾಪಂ ಇಒ ಸೈಯದ್ ಪಟೇಲ್ ಅಭಿಮತ

    ಮಾನ್ವಿ: ವಿವಿಧ ಆಸಕ್ತಿ ಹೊಂದಿರುವ ಮಹಿಳೆಯರನ್ನು ಗುರುತಿಸಿ ಸಂಬಂಧಿಸಿದ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುವ ಕಾರ್ಯ ನಡೆಯುತ್ತಿದೆ ಎಂದು ತಾಲೂಕು ಪಂಚಾಯತಿ ಇಒ ಎಂ.ಡಿ.ಸೈಯದ್ ಪಟೇಲ್ ಹೇಳಿದರು.

    ಪಟ್ಟಣದ ಲೊಯೋಲಾ ಕಾಲೇಜಿನ ಸಭಾಂಗಣದಲ್ಲಿ ಲೊಯೋಲಾ ಸಮಾಜ ಸೇವಾ ಕೇಂದ್ರ, ಜನಶಕ್ತಿ ಟ್ರಸ್ಟ್ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಸ್ವಾವಲಂಬನೆಯೆಡೆಗೆ ನಮ್ಮ ನಡಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಸಂವಿಧಾನತ್ಮಾಕವಾಗಿ ಮಹಿಳೆಯರ ಹಕ್ಕುಗಳನ್ನು ಕಾಯ್ದುಕೊಳ್ಳುವುದರ ಜತೆಗೆ ಎಲ್ಲ ಕ್ಷೇತ್ರಗಳಲ್ಲಿ ಆದ್ಯತೆ ಕಲ್ಪಿಸಲಾಗುತ್ತಿದೆ. ಡಿಜಿಟಲ್ ಲಿಂಗ ಸಮಾನತೆಗಾಗಿ ನಾವಿನ್ಯತೆ ಮತ್ತು ತಂತ್ರಜ್ಞಾನ ಎಂಬುದು ಪ್ರಸಕ್ತ ವರ್ಷದ ಅಂತಾರಾಷ್ಟ್ರೀಯ ಮಹಿಳಾ ದಿನದ ಧ್ಯೇಯ ಎಂದರು.

    ನರೇಗಾದಲ್ಲಿ ಪ್ರತಿ 20ರಿಂದ 30 ಕೂಲಿಕಾರರಿಗೆ ಒಬ್ಬ ಮಹಿಳಾ ಕಾಯಕ ಬಂಧು ನೇಮಕ ಹಾಗೂ ದಿನಕ್ಕೆ 5 ರೂ. ಪ್ರೋತ್ಸಾಹ ಧನ ಮತ್ತು ಶೇ.60 ಮಹಿಳೆಯರು ಭಾಗವಹಿಸಲು ಕ್ರಮ ವಹಿಸಲಾಗುತ್ತದೆ. ಮಹಿಳೆಯರು ನರೇಗಾ ಯೋಜನೆಯಡಿ ದನದ ದೊಡ್ಡಿ, ಕುರಿದೊಡ್ಡಿ, ತೋಟಗಾರಿಕೆ ಬೆಳೆ, ಆರೋಗ್ಯ ನೈರ್ಮಲ್ಯಕ್ಕಾಗಿ ಇಂಗುಗುಂಡಿ, ಪೌಷ್ಟಿಕ ತೋಟ ನಿರ್ಮಾಣ ಸೇರಿ ಇತರ ವೈಯಕ್ತಿಕ ಕಾಮಗಾರಿಗಳನ್ನು ಪಡೆದುಕೊಳ್ಳಲು ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದ ತಿಳಿಸಿದರು.

    ಪುರಸಭೆ ಉಪಾಧ್ಯಕ್ಷೆ ಸಂತೋಷಿಕುಮಾರಿ ಜಯಪ್ರಕಾಶ, ನರೇಗಾ ಸಹಾಯಕ ನಿರ್ದೇಶಕ ಆಲಂಬಾಷಾ, ಸಿಡಿಪಿಒ ಮನ್ಸೂರ್‌ಅಲಿ, ಫಾದರ್ ಡಾನ್‌ಕ್ರಾಸ್ಟಾ, ಐಇಸಿ ತಾಲೂಕು ಸಂಯೋಜಕ ಈರೇಶ, ರವೀಂದ್ರ ಜಾನೇಕಲ್, ಮಹೆಮೂದಾಬೇಗಂ, ವಿಜಯರಾಣಿ, ವೀರೇಶ, ಸುಭಾಷ್, ಶರಣು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts