More

    ನೀರು ಸಮರ್ಪಕ ಪೂರೈಕೆಗೆ ಆಗ್ರಹಿಸಿ 15ರಂದು ಪ್ರತಿಭಟನೆ ನಡೆಸುವುದಾಗಿ ಹೇಳಿದ ಮಾಜಿ ಶಾಸಕ ಬೋಸರಾಜು

    ಮಾನ್ವಿ: ತುಂಗಭದ್ರಾ ಎಡದಂಡೆ ಕಾಲುವೆಯ ಕೆಳಭಾಗಕ್ಕೆ ಸಮರ್ಪಕ ನೀರು ಹರಿಸುವಂತೆ ಆಗ್ರಹಿಸಿ ಜ. 15 ರಂದು ಸಿರವಾರ ಪಟ್ಟಣದ ತಹಸಿಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಮಾಜಿ ಶಾಸಕ ಎನ್.ಎಸ್. ಬೋಸರಾಜು ಹೇಳಿದರು.

    ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖ್ಯ ಕಾಲುವೆಯಲ್ಲಿ ನೀರಿನ ಕೊರತೆಯಿಂದ ಕೆಳ ಭಾಗದ ರೈತರು ಗೊಂದಲಕ್ಕೆ ಸಿಲುಕಿದ್ದಾರೆ. 3210 ಕ್ಯೂಸೆಕ್ ನೀರು ಬಿಡಲಾಗಿದೆ. ಕೆಳ ಭಾಗಕ್ಕೆ ನೀರು ಬರಬೇಕಾದರೆ ಕನಿಷ್ಠ 3800-4000 ಕ್ಯೂಸೆಕ್ ನೀರು ಬಿಡಬೇಕು ಎಂದರು.

    ಕಾಲುವೆ ಮೈಲ್ 69 ರಲ್ಲಿ 950 ಕ್ಯೂಸೆಕ್ ನೀರು ಇರಬೇಕು ಆದರೆ, 635 ಕ್ಯೂಸೆಕ್ ನೀರು ಇದೆ. ಮೇಲ್ಬಾಗದಲ್ಲಿನ ಅಕ್ರಮ ನೀರಾವರಿ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ಮುಂಗಾರು ಭತ್ತ ಕೊಯಿಲು ನಂತರ ಅಕ್ರಮ ನೀರಾವರಿ ತೆರವುಗೊಳಿಸುವ ಭರವಸೆ ಸರ್ಕಾರ ನೀಡಿತ್ತು. ಮೇಲ್ಭಾಗದ ರೈತರು ಮರು ಭತ್ತ ನಾಟಿ ಕಾರ್ಯ ಭರದಿಂದ ಸಾಗಿರುವುದರಿಂದ 600 ಕ್ಯೂಸೆಕ್‌ಕ್ಕೂ ಹೆಚ್ಚು ನೀರು ಬಳಕೆ ಮಾಡಿಕೊಳ್ಳುವ ಪರಿಣಾಮ ಕೆಳಭಾಗದ ಮೂಲ ನೀರಾವರಿ ಭಾಗಕ್ಕೆ ಧಕ್ಕೆ ಯಾಗುತ್ತಿದೆ ಎಂದು ಹೇಳಿದರು.

    ಮಾನ್ವಿ ತಾಲೂಕಿನ 89,85,76, 82 ಸೇರಿದಂತೆ ಇತರೆ ಕಾಲುವೆಗಳಿಗೆ ನೀರೆ ಬರುತ್ತಿಲ್ಲ, ಈ ಬಗ್ಗೆ ನೀರಾವರಿ ಅಧಿಕಾರಿಗಳ ಜತೆ ಮಾತನಾಡಿದರೆ ಐಸಿಸಿ ಸಭೆಯ ತೀರ್ಮಾನದಂತೆ ನೀರು ಬಿಡಲಾಗುತ್ತಿದೆ ಎನ್ನುತ್ತಾರೆ. ಮೇಲ್ಭಾಗದಲ್ಲಿ ಅಕ್ರಮ ನೀರಾವರಿ ತಡೆದು ಕೆಳಭಾಗಕ್ಕೆ ನೀರು ಹರಿಸುತ್ತಿಲ್ಲ ಎಂದು ಅರೋಪಿಸಿದರು.

    ಗೊಂದಲ: ಕಾಲುವೆ ಮೈಲ್ 69ರಲ್ಲಿ ಗೇಜ್ ಗೊಂದಲವನ್ನು ನೀರಾವರಿ ಅಧಿಕಾರಿಗಳು ಇನ್ನೂ ಸರಿಪಡಿಸಿಲ್ಲ. ಕಾಲುವೆಯಲ್ಲಿ 1 ಅಡಿ ನೀರು ಕಡಿಮೆ ಇದ್ದರೂ ಹೆಚ್ಚಿಗೆ ತೋರಿಸುತ್ತಿದೆ ತಜ್ಞರ ತಂಡ ಇದನ್ನು ಸರಿಪಡಿಸುವಂತೆ ಸೂಚಿಸಿದರೂ ನೀರಾವರಿ ಅಧಿಕಾರಿಗಳು ಸರಿಪಡಿಸದೇ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ದೂರಿದರು.

    ಮಾಜಿ ಶಾಸಕ ಹಂಪಯ್ಯನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಪೂರ್‌ಸಾಬ್, ಮುಖಂಡರಾದ ದೊಡ್ಡಬಸಪ್ಪಗೌಡ, ಬಿ.ಕೆ. ಅಮರೇಶಪ್ಪ, ರಾಜಾ ವಸಂತನಾಯಕ, ಶರಣಯ್ಯನಾಯಕ ಗುಡದಿನ್ನಿ, ವೀರಭದ್ರಗೌಡ ಭೋಗಾವತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts